ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತೀಶ್‌ಕುಮಾರ್ ‘ಮಹಾನಾಯಕ’ ಎಂದ ಶಿವಸೇನೆ

Last Updated 8 ನವೆಂಬರ್ 2015, 10:02 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸರಳ ಬಹುಮತದತ್ತ ದಾಪುಗಾಲಿಟ್ಟಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ‘ಮಹಾನಾಯಕ’ ಎಂದು ಶಿವಸೇನೆ ಹೊಗಳಿದೆ.

ಇದರಿಂದ ಚುನಾವಣೆಯಲ್ಲಿ ಹಿನ್ನಡೆ ಕಂಡಿರುವ ಬಿಜೆಪಿ ಗಾಯದ ಮೇಲೆ ಶಿವಸೇನೆ ಉಪ್ಪು ಸವರಿದಂತಾಗಿದೆ.

ಬಿಹಾರ ಚುನಾವಣೆ ಫಲಿತಾಂಶವು ದೇಶದ ರಾಜಕಾರಣದಲ್ಲಿ ಒಂದು ‘ಹೊಸ ತಿರುವು’ ತರಲಿದೆ ಎಂದು ಶಿವಸೇನೆ ಮುಖಂಡ ಸಂಜಯ್ ರಾವುತ್ ಪ್ರತಿಪಾದಿಸಿದ್ದಾರೆ.

‘ನಿತೀಶ್‌ಕುಮಾರ್ ಅವರು ಮಹಾನಾಯಕನಾಗಿ (ಸೂಪರ್ ಹೀರೊ) ಹೊರಹೊಮ್ಮಿದ್ದಾರೆ. ಬಿಹಾರಕ್ಕೆ ಅವರ ಅಗತ್ಯವಿತ್ತು. ಬಿಹಾರದಲ್ಲಿ ಅವರು ಉತ್ತಮ ಕೆಲಸ ಮಾಡಿದ್ದಾರೆ. ಶಿವಸೇನೆಯ ಪರವಾಗಿ ನಾನು ಅವರನ್ನು ಅಭಿನಂದಿಸುವೆ.ದೇಶದ ರಾಜಕಾರಣದಲ್ಲಿ ಬಿಹಾರ ಫಲಿತಾಂಶವು ಒಂದು ಹೊಸ ತಿರುವು ತರಲಿದೆ’ ಎಂದು ಅವರು ನುಡಿದಿದ್ದಾರೆ.

ಅಲ್ಲದೇ, ‘ಬಿಜೆಪಿಯು ಬಿಹಾರ ಚುನಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಎದುರಿಸಿತ್ತು. ಇದನ್ನು ಬಿಜೆಪಿ ಒಪ್ಪಿಕೊಳ್ಳಬೇಕು. ಈ ಸೋಲು ನಾಯಕನೊಬ್ಬನ ಅವನತಿಯಾಗಿದೆ. ಸದ್ಯ ಮಹಾರಾಷ್ಟ್ರದಲ್ಲಿ ಚುನಾವಣೆ ನಡೆದರೇ ಬಿಹಾರದಂಥದ್ದೇ ಫಲಿತಾಂಶ ದೊರೆಯುತ್ತದೆ’ ಎನ್ನುವ ಮೂಲಕ ಪರೋಕ್ಷವಾಗಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT