ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಲ್ಲದ ಮತಾಂತರ ಗದ್ದಲ: ನಡೆಯದ ಕಲಾಪ

ಪ್ರಧಾನಿ ಹೇಳಿಕೆಗೆ ಬಿಗಿಪಟ್ಟು
Last Updated 17 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮತಾಂತರ ಕುರಿತು ಪ್ರಧಾನಿ ನರೇಂದ್ರ ಮೋದಿ ಸದನಕ್ಕೆ ಬಂದು ಖುದ್ದು ಹೇಳಿಕೆ ನೀಡು­ವವರೆಗೂ  ಕಲಾಪ ನಡೆಯಲು ಬಿಡು­ವುದಿಲ್ಲ ಎಂದು ವಿರೋಧ ಪಕ್ಷಗಳು ಬಿಗಿ­ಪಟ್ಟು ಹಿಡಿದ ಕಾರಣ ಸತತ ಮೂರನೇ ದಿನವೂ ಗದ್ದಲ, ಪ್ರತಿಭಟನೆಯಲ್ಲಿಯೇ  ರಾಜ್ಯಸಭಾ ಕಲಾಪ ಮುಗಿದು ಹೋಯಿತು.

ಅಪಹರಣ ತಡೆ ತಿದ್ದುಪಡಿ ಮಸೂದೆ 2014 ಮಂಡನೆ ಹೊರತು ಪಡಿಸಿದರೆ  ವಿಮಾ ಮಸೂದೆ ಸೇರಿದಂತೆ ಅನೇಕ ಮಹತ್ವದ ವಿಷಯಗಳು ಇನ್ನೂ ಚರ್ಚೆಗೆ ಬರಲಿಲ್ಲ.

‘ಪ್ರಧಾನಿಯನ್ನು ಸದನಕ್ಕೆ ಕರೆಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲು ಆಗದು. ಅದು ಪ್ರಧಾನಿಯ ವಿವೇಚನೆಗೆ ಬಿಟ್ಟದ್ದು. ಮತಾಂತರ ಕುರಿತು ಚರ್ಚೆಗೆ ಅವಕಾಶ ನೀಡುವೆ, ಸರ್ಕಾರದ ಪರ ಗೃಹ ಸಚಿವ ರಾಜನಾಥ ಸಿಂಗ್‌ ಹೇಳಿಕೆ ನೀಡಿದರೆ ಸಾಕಲ್ಲವೇ ಎಂದು ಉಪ ಸಭಾಪತಿ ಪಿ.ಜೆ. ಕುರಿಯನ್‌  ಪ್ರಶ್ನಿಸಿದರು.

ಪ್ರಧಾನಿ ಬಾರದ ಹೊರತು ಯಾವುದೇ ಕಾರಣಕ್ಕೂ ಕಲಾಪ ನಡೆ­ಯಲು ಬಿಡು­ವು­ದಿಲ್ಲ ಎಂದು ಕಾಂಗ್ರೆಸ್‌, ಟಿಎಂಸಿ ಹಾಗೂ ಎಡ ಪಕ್ಷಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಿದವು. ವಿರೋಧ ಪಕ್ಷಗಳ ಸದಸ್ಯರು ಸಭಾಪತಿ ಪೀಠದ ಮುಂದೆ ಘೋಷಣೆ ಕೂಗತೊಡಗಿದರು. 

ಗದ್ದಲ ಮುಂದುವರೆದ ಕಾರಣ ನಾಲ್ಕಾರು ಬಾರಿ ಸದನವನ್ನು ಮುಂದೂಡಲಾಯಿತು. ಇದಾದ ನಂತರ ಆಡಳಿತಾರೂಢ ಹಾಗೂ ವಿರೋಧ ಪಕ್ಷಗಳ ಸದಸ್ಯರ ನಡುವೆ ಮತಾಂತರ ಕುರಿತು ಕಾವೇರಿದ ಚರ್ಚೆ ನಡೆಯಿತು. ಪ್ರಧಾನಿ  ಹೇಳಿಕೆ ನೀಡದರೆ ಬಿಕ್ಕಟ್ಟು ಬಗೆಹರಿಯುತ್ತದೆ. ಇಲ್ಲದಿದ್ದರೆ ಕಲಾಪ ನಡೆಯುವುದು ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ನ ಆನಂದ ಶರ್ಮಾ ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ ಸಂಸದ ಅಮಾನತು
ಪ್ರತಿ­ಭಟನಾ ನಿರತ ಕಾಂಗ್ರೆಸ್‌ ಸಂಸದ ಹನು­ಮಂತ ರಾವ್‌ ಅವರನ್ನು ಸಭಾಧ್ಯಕ್ಷ ಹಮೀದ್‌ ಅನ್ಸಾರಿ ಒಂದು ದಿನದ ಮಟ್ಟಿಗೆ ಅಮಾನತು­ಗೊಳಿಸಿದರು.  ಇದರಿಂದ ಕೆರಳಿದ ವಿರೋಧ ಪಕ್ಷಗಳ ಸದಸ್ಯರು, ರಾವ್‌ ಅಮಾನತು ಆದೇಶವನ್ನು ವಾಪಸ್‌ ಪಡೆಯುವಂತೆ ಒತ್ತಡ  ಹೇರಿದವು. ಒತ್ತಾಯಕ್ಕೆ ಸಭಾ­ಧ್ಯಕ್ಷರು ಮಣಿಯದ್ದರಿಂದ ಪುನಃ ಗದ್ದಲ ಆರಂಭವಾಯಿತು.

ಸದನಕ್ಕೆ ಬರಲು ಪ್ರಧಾನಿಗೆ ವೀಸಾ ಬೇಕೇ?
ಪ್ರಧಾನಿ ನರೇಂದ್ರ ಮೋದಿ ಸದನಕ್ಕೆ ಬರಲು ವೀಸಾ ಅವಶ್ಯಕತೆ ಇದೆಯೇ? ಪ್ರಧಾನಿಯನ್ನು ಸದನದಲ್ಲಿ ನೋಡು­ವುದಕ್ಕಿಂತ ಹೆಚ್ಚು ಸೆಲ್ಫಿಗಳಲ್ಲಿ ನೋಡು­ವಂತಾ­ಗಿದೆ. ಸದನಕ್ಕೆ ಬರಲು ಅವರಿಗೆ ನಾಚಿಕೆ ಏಕೆ? ನಮ್ಮ ಬೇಡಿಕೆ ನ್ಯಾಯ­ಸಮ್ಮತವಾಗಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳಿಗೆ ಅನುಗುಣ­ವಾಗಿದೆ. ಇದರ ಹೊರತಾಗಿ ನಾವೇನಾ­ದರೂ ಬೇಡಿಕೆ ಇಟ್ಟಿದ್ದೇವೆಯೇ?                     - ಡೆರೆಕ್‌ ಓ’ ಬ್ರಿಯೆನ್‌, ಟಿಎಂಸಿ ಸಂಸದ

ಕಾನೂನು ಇದೆಯಾ?
ಪ್ರಧಾನಿಯನ್ನು ಸದನಕ್ಕೆ ಬರುವಂತೆ ಕೇಳಬಾರದೆಂದು ಏನಾದರೂ ಕಾನೂನು ಇದೆಯಾ? ಅವರು ಬರದಿದ್ದರೆ ಚರ್ಚೆಯನ್ನು ಕೇಳುವರು ಯಾರು?
– ಪಿ. ರಾಜೀವ್‌, ಸಿಪಿಎಂ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT