ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾಗೆ ನೆಲೆ ಸಿಗಬಹುದೇ?

Last Updated 5 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ರೈತ ಚೇತನ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ಹಲವು ಕನಸುಗಳಲ್ಲಿ ನೀರಾ ಉತ್ಪನ್ನವೂ ಒಂದು. ತೆಂಗಿನ ಹೊಂಬಾಳೆಯಿಂದ ತೆಗೆಯುವ ರಸವೇ ನೀರಾ. ನಮ್ಮ ರೈತರಿಗೆ ನೀರಾ ತೆಗೆಯಲು ಅವಕಾಶ ಕೊಡಬೇಕು ಎಂದು ದೊಡ್ಡ ಮಟ್ಟದ ಚಳವಳಿ ಮಾಡಿದ್ದೂ ಆಗಿದೆ. ನೀರಾ ಉತ್ಪನ್ನನಿಂದ ರೈತರ ಆರ್ಥಿಕ ಸ್ಥಿತಿ ಉತ್ತ­ಮ­ಗೊಳ್ಳುವುದು ಎಂಬುದು ಅವರ ನಂಬಿಕೆ­ಯಾಗಿತ್ತು.

ನಾವು ಇದಕ್ಕೆ ನೀರಾ ಅನ್ನು­ವುದ­ಕ್ಕಿಂತ ಕಲ್ಪರಸ ಅಥವಾ ಕಲ್ಪಾಮೃತ ಎಂದು ಹೇಳುವುದು ಲೇಸು. ಕಲ್ಪರಸದಲ್ಲಿ ಪೋಷ­ಕಾಂಶ­­ಗಳು ಅಧಿಕ. ಕಲ್ಪರಸವನ್ನು ವೈಜ್ಞಾನಿಕ­ವಾಗಿ ಸಂಗ್ರಹಿಸಿ, ವ್ಯವಸ್ಥಿತವಾಗಿ ಮಾರಾಟ ಮಾಡಿ­ದಲ್ಲಿ ರೈತರಿಗೆ ವರದಾನ ಆಗಬಲ್ಲದು.  
ರಾಸಾಯನಿಕಗಳಿಂದ ತಯಾರಿಸಿದ, ಆರೋ­ಗ್ಯಕ್ಕೆ ಮಾರಕವಾದ ಪೇಯಗಳ ಬಳಕೆ ತಪ್ಪಿಸಲು ಕಲ್ಪ­ರಸ ಇಳಿಸಲು ಅನುಮತಿ ನೀಡಬೇಕು.

ನಮ್ಮ ಪಕ್ಕದ ರಾಜ್ಯಗಳಾದ ಗೋವಾ ಮತ್ತು ಕೇರಳ­ದಲ್ಲಿ ಕಲ್ಪರಸ ಇಳಿಸಲು ಮತ್ತು ಅದರ ಉಪ­ಉತ್ಪನ್ನಗಳ ಮಾರಾಟಕ್ಕೆ ಸರ್ಕಾರ ಅನು­ಮತಿ ನೀಡಿದೆ. ಕೇರಳದಲ್ಲಿ ಕಲ್ಪರಸ ನೀತಿ ರೂಪಿಸ­ಲಾಗಿದೆ. ಅದರಿಂದ ಅಲ್ಲಿನ ರೈತರಿಗೆ ಹೆಚ್ಚಿನ ಪ್ರಯೋಜನವಾಗಿದೆ. ಕಲ್ಪರಸ ಇಳಿಸಲು ನಮ್ಮ ಸರ್ಕಾರವೂ ಅನುಮತಿ ನೀಡಬೇಕು.            
-ಮಂಜುನಾಥ ಹೊಳಲು, ಶಿಗ್ಗಾಂವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT