ನವದೆಹಲಿ: ಜವಹರಲಾಲ್ ನೆಹರೂ ಅವರು ದೇಶದ ಪ್ರಧಾನಿಯಾಗಿದ್ದ ಕಾಲಘಟ್ಟದಲ್ಲಿ ಸುಮಾರು 20 ವರ್ಷಗಳ ಕಾಲ ನೇತಾಜಿ ಸುಭಾಷ್ ಚಂದ್ರಬೋಸ್ ಅವರ ಕುಟುಂಬದ ಮೇಲೆ ನಿರಂತರ ಗೂಢಚರ್ಯೆ ನಡೆಸಿದ್ದರು ಎಂದು ಶುಕ್ರವಾರ ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ವರದಿ ಈಗ ವಿವಾದಕ್ಕೆ ಕಾರಣವಾಗಿದೆ.

ನೆಹರೂ ಅವರು ಪ್ರಧಾನಿಯಾಗಿದ್ದಾಗ, ಅವರ ಅಧೀನದಲ್ಲಿದ್ದ ಎರಡು ಅವರ್ಗೀಕೃತ ಗುಪ್ತಚರ ಸಂಸ್ಥೆಗಳನ್ನು ಬಳಸಿಕೊಂಡು ಸುಮಾರು ಎರಡು ದಶಕಗಳ ಕಾಲ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬದ ಮೇಲೆ ಬೇಹುಗಾರಿಕೆ ನಡೆಸಲಾಯಿತು. ಈ ಸಂಸ್ಥೆಗಳು ಬೋಸ್ ಅವರ ಕುಟುಂಬಕ್ಕೆ ಸೇರಿದ ವ್ಯಕ್ತಿಗಳ ಚಲನವಲನಗಳ ಮೇಲೆ, ವ್ಯವಹಾರಗಳ ಮೇಲೆ ನಿಗಾವಹಿಸಿದ್ದರು. ಪತ್ರ ವ್ಯವಹಾರಗಳ ಮೇಲೂ ಕಣ್ಣಿಟ್ಟಿದ್ದರು. ಅದರಲ್ಲೂ ನೇತಾಜಿ ಅವರಿಗೆ ಸೇರಿದ ವುಡ್‌ಬರ್ನ್ ಪಾರ್ಕ್ ಮತ್ತು 38/2 ಎಲ್ಗಿನ್ ರಸ್ತೆಯಲ್ಲಿದ್ದ ಮನೆಗಳು ಗುಪ್ತಚರ ಸಂಸ್ಥೆಗಳ ನಿರಂತರ ನಿಗಾ ವ್ಯವಸ್ಥೆಯಲ್ಲಿತ್ತು ಎಂದು ಈ ವರದಿಯಲ್ಲಿ ಹೇಳಲಾಗಿದೆ.

ನೇತಾಜಿ ಅವರ ನೆರೆಹೊರೆಯ ಕುಟುಂಬಗಳಾದ ಸಿಸಿರ್ ಕುಮಾರ್ ಬೋಸ್ ಮತ್ತು ಅಮಿಯಾ ನಾಥ್ ಬೋಸ್ ಅವರ ಕುಟುಂಬದ ಮೇಲೂ ಗೂಢಚರ್ಯೆ ನಡೆಸಲಾಗಿತ್ತು. ಯಾಕೆಂದರೆ ಈ ಕುಟುಂಬಗಳು ನೇತಾಜಿ ಅವರ ಕುಟುಂಬದ ಜತೆ ಆತ್ಮೀಯ ಸಂಬಂಧ ಹೊಂದಿದ್ದವು ಎಂದೂ ವರದಿಯಲ್ಲಿ ಹೇಳಲಾಗಿದೆ.

ನೇತಾಜಿ ಕುಟುಂಬಕ್ಕೆ ಸೇರಿದ, ಸದ್ಯ ಕೋಲ್ಕತ್ತಾದಲ್ಲಿ ಉದ್ಯಮಿಯಾಗಿರುವ ಚಂದ್ರಕುಮಾರ್ ಬೋಸ್, ಈ ವರದಿಗೆ ಪ್ರತಿಕ್ರಿಯಿಸಿದ್ದು, ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುಭಾಷ್ ಚಂದ್ರ ಬೋಸ್ ಮೇಲೆ ಸರ್ಕಾರ ಗೂಢಚರ್ಯೆ ನಡೆಸಲು ಅವರೊಬ್ಬ ಅಪರಾಧಿ ಆಗಿರಲಿಲ್ಲ. ಅವರೊಬ್ಬರು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ. ತಮ್ಮ ದೇಶಕ್ಕಾಗಿ ಸರ್ವವನ್ನೂ ತ್ಯಾಗ ಮಾಡಿದವರು ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.