ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳದಲ್ಲಿ ಭೂಕುಸಿತಕ್ಕೆ 25 ಬಲಿ

Last Updated 30 ಜುಲೈ 2015, 9:17 IST
ಅಕ್ಷರ ಗಾತ್ರ

ಕಠ್ಮಂಡು (ಪಿಟಿಐ): ಕಳೆದ ಏಪ್ರಿಲ್‌ನಲ್ಲಿ ಭೀಕರ ಭೂಕಂಪದಿಂದ ನಲುಗಿದ್ದ ನೇಪಾಳವು ಇದೀಗ ವ್ಯಾಪಕ ಮಳೆಯಿಂದ ಉಂಟಾದ ಭೂಕುಸಿತದಿಂದ ತತ್ತರಿಸಿದೆ. ಗುರುವಾರ ಸಂಭವಿಸಿದ ಭೂಕುಸಿತ ಘಟನೆಗಳಲ್ಲಿ 13 ಮಹಿಳೆಯರು ಸೇರಿದಂತೆ 25 ಮಂದಿ ಸಾವನ್ನಪ್ಪಿದ್ದು, ಹಲವು ಜನರು ಕಾಣೆಯಾಗಿದ್ದಾರೆ.

ಅಲ್ಲದೇ, ಕುಂಭದ್ರೋಣ ಮಳೆಗೆ ಸಾಕಷ್ಟು ಮನೆಗಳು ನೆಲಸಮವಾಗಿವೆ.

ರಾಜಧಾನಿ ನಗರ ಕಠ್ಮಂಡುವಿನಿಂದ 250 ಕಿ.ಮೀ ದೂರದಲ್ಲಿರುವ ಕಸ್ಕಿ ಜಿಲ್ಲೆಯಲ್ಲಿ ಭೀಕರ ಪ್ರವಾಹದಿಂದ ಮನೆಗಳು ಕುಸಿದಿದ್ದು, 19 ಜನರು ಸಾವನ್ನಪ್ಪಿದ್ದಾರೆ ಎಂದು ಗೃಹ ಸಚಿವಾಲಯದ ಮೂಲಗಳು ಹೇಳಿವೆ.

ವಿವಿಧ ಅವಘಡಗಳಲ್ಲಿ 11 ಮಹಿಳೆಯರು ಹಾಗೂ 8 ಜನ ಪುರುಷರು ಮೃತಪಟ್ಟಿದ್ದಾರೆ. ಇದಲ್ಲದೆ, 14 ಜನರು ಕಾಣೆಯಾಗಿದ್ದಾರೆ ಎಂದು ವಕ್ತಾರರೊಬ್ಬರು ತಿಳಿಸಿದ್ದಾರೆ.

ಭೂಕುಸಿತದಿಂದಾಗಿ ಪೊಖರಾ–ಬಂಗ್ಲಂಗ್‌ ಹೆದ್ದಾರಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT