ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳದಲ್ಲಿ ಮತ್ತೆ ಗರಿಗೆದರಿದ ಪರ್ವತಾರೋಹಣದ ಹುಮ್ಮಸ್ಸು

Last Updated 2 ಮೇ 2016, 19:54 IST
ಅಕ್ಷರ ಗಾತ್ರ

ಕಠ್ಮಂಡು (ಪಿಟಿಐ): ಎರಡು ವರ್ಷಗಳ ಹಿಂದೆ ಭಾರಿ ಹಿಮ ಕುಸಿತ ಮತ್ತು ಕಳೆದ ವರ್ಷದ ಭೂಕಂಪದ ನಂತರ ಇದೇ ಮೊದಲ ಬಾರಿಗೆ ಪರ್ವತಾರೋಹಿಗಳ ತಂಡವೊಂದು ಇಲ್ಲಿನ ‘ಅನ್ನಪೂರ್ಣ’ ಪರ್ವತದ ತುತ್ತತುದಿಯನ್ನು ಯಶಸ್ವಿಯಾಗಿ ತಲುಪಿದೆ.

ಈ ಋತುವಿನ ಮೊದಲ ಪರ್ವತಾರೋಹಣ ಕೈಗೊಂಡಿದ್ದ  30 ಪರ್ವತಾರೋಹಿಗಳ ತಂಡ 8000 ಮೀಟರ್‌ ಎತ್ತರದ ಈ ಪರ್ವತದ ತುದಿಯನ್ನು ಸೋಮವಾರ ಯಶಸ್ವಿಯಾಗಿ ತಲುಪಿದೆ. ತಂಡದಲ್ಲಿ 14 ವಿದೇಶಿ ಪರ್ವತಾರೋಹಿಗಳು ಮತ್ತು 16 ಶೆರ್ಪಾ ಮಾರ್ಗದರ್ಶಕರು ಇದ್ದರು.

2014ರಿಂದೀಚೆ ಸಂಭವಿಸಿದ  ಪ್ರಾಕೃತಿಕ ವಿಕೋಪಗಳ ನಂತರ ನಡೆದ ಈ ಯಶಸ್ವಿ ಪರ್ವತಾರೋಹಣದಿಂದಾಗಿ  ನೇಪಾಳದಲ್ಲಿ ಇತರ ಪರ್ವತಗಳಿಗೂ ಚಾರಣ ಯೋಜಿಸುವ ವಿಶ್ವಾಸ ಹೆಚ್ಚಿದೆ.

ಏಪ್ರಿಲ್‌ 2014ರಲ್ಲಿ ಎವರೆಸ್ಟ್‌ ತಳ ಶಿಬಿರದ ಹತ್ತಿರ 16 ಶೆರ್ಪಾ ಮಾರ್ಗದರ್ಶಕರು ಮೃತಪಟ್ಟ ಘಟನೆ ನಡೆದ ಬಳಿಕ ನೇಪಾಳದ ಪರ್ವತ ಪ್ರವಾಸೋದ್ಯಮಕ್ಕೆ ಭಾರಿ ಹಿನ್ನಡೆಯಾಗಿತ್ತು. 

‘ಅನ್ನಪೂರ್ಣ’ವನ್ನು ಏರಿದ ತಂಡದಲ್ಲಿದ್ದ 77 ವರ್ಷದ ಸ್ಪೇನ್‌ನ ಕಾರ್ಲ್ಸ್‌ ಸೊರಿಯಾ ಫಾಂಟನ್‌ ಅತ್ಯಂತ ಹಿರಿಯ ಪರ್ವತಾರೋಹಿ ಎಂದು ನೇಪಾಳ ಪ್ರವಾಸೋದ್ಯಮ ಸಚಿವಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT