ಶುಕ್ರವಾರ, 26 ಏಪ್ರಿಲ್ 2024
ADVERTISEMENT
ಈ ಕ್ಷಣ :
ADVERTISEMENT
ADVERTISEMENT
ನೇಪಾಳದಲ್ಲಿ ‌ಸಿಲುಕಿದ್ದಾರೆ 125 ಭಾರತೀಯರು
Last Updated 25 ಏಪ್ರಿಲ್ 2015, 11:32 IST
ಅಕ್ಷರ ಗಾತ್ರ
ADVERTISEMENT
ಕಠ್ಮಂಡು (ಪಿಟಿಐ): ಭೀಕರ ಭೂಕಂಪದಿಂದ ತತ್ತರಿಸಿರುವ ನೆರೆಯ ನೇಪಾಳದಲ್ಲಿ ಮಹಾರಾಷ್ಟ್ರ ಹಾಗೂ ತೆಲಂಗಾಣದ ಸುಮಾರು 125 ಜನರು ಸಿಲುಕಿದ್ದಾರೆ.
ದೆಹಲಿಯಲ್ಲಿರುವ ಮಹಾರಾಷ್ಟ್ರ ಮಾಹಿತಿ ಕೇಂದ್ರದ ಪ್ರಕಾರ, ನಾಸಿಕ್‌ನಿಂದ ನೇಪಾಳಕ್ಕೆ ಸುಮಾರು 80 ಜನರು ತೆರೆಳಿದ್ದರು. ಅದೇ ರೀತಿ ಪರ್ವತಾರೋಹಣಕ್ಕೆ 15–20 ಜನರು ತೆರಳಿದ್ದರು.
‘ರಾಜ್ಯದ ಹಲವೆಡೆಯಿಂದ ನಮಗೆ ಕರೆಗಳು ಬರುತ್ತಿವೆ. ಆದರೆ ನಾವು ಪ್ರವಾಸಿಗರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ನಾಸಿಕ್‌ನಿಂದ ಸುಮಾರು 80 ಜನರು ಯಾತ್ರೆಗೆ ತೆರಳಿದ್ದರು. ಉಳಿದವರು ಟ್ರೆಕ್ಕಿಂಗ್‌ಗಾಗಿ ಹೋಗಿದ್ದರು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅವರನ್ನು ಪ್ರವಾಸಕ್ಕೆ ಕರೆದೊಯ್ದಿದಿರುವ ಸಂಘಟಕ ಗೌರಿಶಂಕರ್, ತಮ್ಮ ತಂಡದ ಸದಸ್ಯರೆಲ್ಲರೂ ಸುರಕ್ಷಿತವಾಗಿದ್ದು, ಪಶುಪತಿನಾಥ್ ದೇವಾಲಯದ ಸಮೀಪದ ಮೈದಾನದಲ್ಲಿ ಇರುವುದಾಗಿ ಹೇಳಿದ್ದಾರೆ.
‘ಕಂಪನದ ಅನುಭವ ಆದಾಗ ನಾನು ಕಟ್ಟಡದ ನಾ‌ಲ್ಕನೇ ಅಂತಸ್ತಿನ ಬಾತ್‌ರೂಮ್‌ನಲ್ಲಿದ್ದೆ. ತಕ್ಷಣವೇ ಓಡಿ ಕೆಳಗೆ ಬಂದೆ. ಪಶುಪತಿನಾಥ್ ದೇವಾಲಯದ ಸಮೀಪದ ಮೈದಾನದಲ್ಲಿ ಇದೀಗ ಎಲ್ಲರೂ ಸುರಕ್ಷಿತವಾಗಿದ್ದೇವೆ’ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT