ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈರೋಬಿ: ಅವಶೇಷದಡಿ 80 ತಾಸು ಕಳೆದ ಕೂಸು

Last Updated 3 ಮೇ 2016, 19:30 IST
ಅಕ್ಷರ ಗಾತ್ರ

ನೈರೋಬಿ (ಎಎಫ್‌ಪಿ): ನೈರೋಬಿಯಲ್ಲಿ ಕಳೆದ ವಾರಾಂತ್ಯದಲ್ಲಿ ಸುರಿದ ಭಾರಿ ಮಳೆಯಿಂದ ಕುಸಿದ ಆರು ಅಂತಸ್ತಿನ ವಸತಿ ಸಂಕೀರ್ಣದಡಿ ಸಿಲುಕಿದ್ದ 18 ತಿಂಗಳ ಮಗುವನ್ನು ಮಂಗಳವಾರ ರಕ್ಷಿಸಲಾಗಿದ್ದು, ಸಾವಿನ ಸಂಖ್ಯೆ 23ಕ್ಕೆ ಏರಿಕೆಯಾಗಿದೆ.

‘ಒಳ್ಳೆಯ ಸುದ್ದಿಯಿದೆ’ –ಹೀಗೆಂದು ಉದ್ಘಾರ ಮಾಡಿದ ಕೀನ್ಯಾ ರೆಡ್‌ ಕ್ರಾಸ್‌,  ನಾಲ್ಕು ದಿನಗಳಿಂದ ಕಟ್ಟಡ ಅವಶೇಷಗಳ ಅಡಿ ಸಿಲುಕಿದ್ದ ಮಗುವನ್ನು ಜೀವಂತವಾಗಿ ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ ವಿಷಯವನ್ನು ಪ್ರಕಟಿಸಿತು.

‘ಮಗುವಿಗೆ ಹೊದಿಕೆ ಸುತ್ತಿ ಬಕೆಟ್‌ನಲ್ಲಿರಿಸಲಾಗಿತ್ತು. 80 ಗಂಟೆಗಳಿಂದ  ಕಟ್ಟಡ ಅವಶೇಷಗಳಡಿ ಸಿಲುಕಿದ್ದರಿಂದ ಮಗು ನಿರ್ಜಲೀಕಣಗೊಂಡಿತ್ತು. ಆದರೆ ದೇಹದ ಮೇಲೆ ಯಾವುದೇ ಗಾಯಗಳಾಗಿರಲಿಲ್ಲ’ ಎಂದು ರೆಡ್‌ಕ್ರಾಸ್‌ ತಿಳಿಸಿದೆ.

‘ಇದೊಂದು ಅದ್ಭುತ’ ಎಂದು ನೈರೋಬಿ ಪೊಲೀಸ್‌ ಮುಖ್ಯಸ್ಥ ಜಫೆತ್‌ ಕೂಮೆ ಅವರು ಹೇಳಿದ್ದಾರೆ. ಅಲ್ಲದೆ ರಕ್ಷಣಾ ಕಾರ್ಯಾಚರಣೆ ಮುಂದುವರಿಯುವುದು ಎಂದು ಅವರು ತಿಳಿಸಿದ್ದಾರೆ.

150ಕ್ಕೂ ಹೆಚ್ಚು ಕುಟುಂಬಗಳು ಈ ವಸತಿ ಸಂಕೀರ್ಣದಲ್ಲಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT