ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೊಂದ ಬಾಲಕಿಗೆ ಇನ್ನಷ್ಟು ಸಂಕಟ

ಮಗು ಕಸಿದುಕೊಳ್ಳಲು ಹುನ್ನಾರ
Last Updated 24 ನವೆಂಬರ್ 2014, 19:56 IST
ಅಕ್ಷರ ಗಾತ್ರ

ಹಾಸನ: ಅರಕಲಗೂಡು ತಾಲ್ಲೂಕಿನಲ್ಲಿ ಸಂಬಂಧಿಕ­ರಿಂದಲೇ ಅತ್ಯಾಚಾರಕ್ಕೆ ಒಳ­ಗಾಗಿ, ಹೆಣ್ಣು ಮಗುವಿಗೆ ಜನ್ಮ ನೀಡಿ­ರುವ ಬಾಲಕಿಯ ಕುಟುಂಬದ­ವರು ಈಗ ಹಲವು ಸಮಸ್ಯೆಗಳನ್ನು ಎದುರಿಸು­ವಂತಾಗಿದೆ.

ತನಿಖೆ ನಿಧಾನಗತಿಯಲ್ಲಿ ನಡೆಯುತ್ತಿ­ರ­ುವುದು ಒಂದೆಡೆಯಾದರೆ, ಈ ಕುಟುಂಬಕ್ಕೆ ಊರಿನಲ್ಲಿಯೂ ಸಾಮಾ­ಜಿಕ­ವಾಗಿ ಕೆಲವು ಸಮಸ್ಯೆ ಎದುರಾಗಿವೆ. ಅತ್ಯಾಚಾರದ ಆರೋಪದಲ್ಲಿ ಬಂಧನ­ಕ್ಕೊಳ­ಗಾಗಿರುವ ವ್ಯಕ್ತಿಯ ಮನೆ­ಯವರು ಆಗಾಗ ಬಾಲಕಿಯ ಮನೆಯ ಮುಂದೆ ಜಗಳ ಕಾಯುತ್ತಾರೆ, ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಬಾಲಕಿಯ ಮನೆಯವರು ದೂರಿದ್ದಾರೆ.

ಈ ನಡುವೆ ಹಾಸನದಲ್ಲಿ ಅನಾಥ ಮಕ್ಕಳನ್ನು ದತ್ತು ಪಡೆಯುವ ಸಂಸ್ಥೆ­ಯೊಂದು, ಈ ಬಾಲಕಿಯ ಮಗುವನ್ನು ಪಡೆಯುವ ಪ್ರಯತ್ನವನ್ನೂ ನಡೆಸಿದೆ ಎಂದು ಬಾಲಕಿ ದೂರಿದ್ದಾಳೆ.

‘ಪ್ರಜಾವಾಣಿ’ ಜತೆ ಸೋಮವಾರ ಮಾತ­ನಾಡಿದ ಬಾಲಕಿ, ‘ಕಳೆದ ವಾರ ಹಾಸನದಿಂದ ವೈದ್ಯರೊಬ್ಬರು ಪತ್ನಿ­ಸಹಿತ ಅಂಗನವಾಡಿಗೆ ಬಂದಿದ್ದರು. ‘ನಿನ್ನ ಮಗುವನ್ನು ಕೊಡು. ನಾವು ಸಾಕು­ತ್ತೇವೆ, ಇಲ್ಲದಿದ್ದಲ್ಲಿ ಮುಂದೆ ನಿನಗೆ ಸಮಸ್ಯೆ­ಯಾ­ಗು­ತ್ತದೆ’ ಎಂದು ಹೇಳಿ­ದ್ದರು. ‘ಮಗು­ವನ್ನು ಕೊಡುವು­ದಿಲ್ಲ. ಮಗು ಕೇಳಲು ಬಂದರೆ ಪೊಲೀಸ­ರಿಗೆ ಕರೆ ಮಾಡುತ್ತೇವೆ’ ಎಂದು ನನ್ನ ಜತೆಗಿದ್ದ ಅಂಗನವಾಡಿಯ ಕಾರ್ಯ­ಕರ್ತೆ ಹೇಳಿ­ದ್ದರಿಂದ ವೈದ್ಯರು ವಾಪಸಾ­ದರು’ ಎಂದು ಬಾಲಕಿ ತಿಳಿಸಿದಳು.

‘ಇದಾಗಿ ಎರಡು ದಿನದಲ್ಲಿ ಮನೆಗೆ ಪೊಲೀಸರು ಬಂದಿದ್ದರು. ಹಿಂದೆ ನೀನು ಕೊಟ್ಟಿದ್ದ ಹೇಳಿಕೆ ಸರಿಯಾಗಿರಲಿಲ್ಲ. ನೀನು ಹೇಳಿದ ವ್ಯಕ್ತಿ ಅತ್ಯಾಚಾರ ಮಾಡಿಲ್ಲ ಎಂದು ವರದಿ ಬಂದಿದೆ, ಠಾಣೆಗೆ ಬಂದು ಬೇರೆ ಹೇಳಿಕೆ ಕೊಡ­ಬೇಕು ಎಂದು ಮನವಿ ಮಾಡಿದ್ದಾರೆ. ಮಗುವನ್ನು ಸಾಕಲು ಕಷ್ಟವಾಗು­ವುದಾ­ದರೆ ಹಾಸನದಿಂದ ಬಂದಿದ್ದ ವೈದ್ಯರಿಗೆ ಕೊಡು, ಅವರು ನೋಡಿಕೊಳ್ಳುತ್ತಾರೆ ಎಂದು ಪೊಲೀಸರು ಸಲಹೆ ನೀಡಿದರು. ಆದರೆ, ಕೊಡಲೇಬೇಕು ಎಂದು ಒತ್ತಾಯ ಮಾಡಲಿಲ್ಲ’ ಎಂದಿದ್ದಾಳೆ.

ಅತ್ಯಾಚಾರಕ್ಕೆ ಒಳಗಾಗಿದ್ದ ಬಾಲಕಿ ನೀಡಿದ ಹೇಳಿಕೆ ಮೇಲೆ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಅವರಲ್ಲಿ ಒಬ್ಬ­ರನ್ನು ಈಚೆಗೆ ಬಿಡುಗಡೆ ಮಾಡ­ಲಾಗಿದೆ. ಇನ್ನೊಬ್ಬ ಆರೋಪಿ ಜೈಲಿನಲ್ಲಿ­ದ್ದಾರೆ. ಡಿಎನ್‌ಎ ಪರೀಕ್ಷೆಗಾಗಿ ಇಬ್ಬರ ರಕ್ತದ ಮಾದರಿಯನ್ನೂ ಕಳುಹಿ­ಸ­ಲಾ­ಗಿತ್ತು. ಆದರೆ, ಇನ್ನೂ ಡಿಎನ್‌ಎ ವರದಿ ಬಂದಿಲ್ಲ ಎಂದು ಇಲಾಖೆಯ ಅಧಿಕಾರಿ­ಗಳು ತಿಳಿಸಿದ್ದಾರೆ.

‘ನನ್ನ ಮೇಲೆ ಅತ್ಯಾಚಾರ ಮಾಡಿ­ರುವ ವ್ಯಕ್ತಿಯ ಹೆಸರನ್ನು ನಾನು ಪೊಲೀಸ­ರಿಗೆ ತಿಳಿಸಿದ್ದೇನೆ. ಅವನ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ನನ್ನ ಮಗುವನ್ನು ಯಾರಿಗೂ ಕೊಡು­ವುದಿಲ್ಲ, ಅದನ್ನು ಸಾಕಲು ನಾನು ಸಿದ್ಧ’ ಎಂದು ಬಾಲಕಿ ಹೇಳಿದ್ದಾಳೆ. ಬಾಲಕಿಯ ತಾಯಿಯೂ ‘ನಮ್ಮ ಮಗುವನ್ನು ನಾವೇ ನೋಡಿ­ಕೊಳ್ಳುತ್ತೇವೆ’ ಎಂದಿ­ದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT