ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೊರೆ ಎದ್ದರೆ ಓಡುವ ಪಾದಚಾರಿಗಳು!

ವರ್ತೂರು ಕೆರೆ ಸುತ್ತಲಿನ ಮನೆ ಖಾಲಿ ಮಾಡುತ್ತಿರುವ ಬಾಡಿಗೆದಾರರು
Last Updated 22 ಮೇ 2015, 20:21 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ವರ್ತೂರು ಕೆರೆ ಕೋಡಿಯಲ್ಲಿ ಕಳೆದ ತಿಂಗಳಿಂದ ಹೇರಳ ಪ್ರಮಾಣದಲ್ಲಿ ಉತ್ಪತ್ತಿ ಆಗುತ್ತಿರುವ ನೊರೆ, ಕೊಳಕು ದುರ್ನಾತ ಸ್ವಲ್ಪವೂ ಕಡಿಮೆ ಆಗಿಲ್ಲ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಶುಕ್ರವಾರ ಬೆಳಿಗ್ಗೆ ಸಹ ಕೆರೆ ಕೋಡಿಯಲ್ಲಿ ಭಾರಿ ನೊರೆ ತುಂಬಿತ್ತು.

ರಸ್ತೆ ಮೇಲೆ ಆರೇಳು ಅಡಿಗಳಷ್ಟು ಎತ್ತರಕ್ಕೆ ನೊರೆ ರಾಶಿ ಹರಡಿಕೊಂಡಿತ್ತು. ಹೀಗಾಗಿ ಪಾದಚಾರಿಗಳು ಹಾಗೂ ವಾಹನ ಸವಾರರು ನಿಧಾನವಾಗಿ ರಸ್ತೆಯಲ್ಲಿ ಸಂಚರಿಸುತ್ತಿದ್ದರು. ಗಾಳಿ ಬಂದಾಗ ಮೇಲೇಳುತ್ತಿದ್ದ ನೊರೆ ಚೆಲ್ಲಾಪಿಲ್ಲಿಯಾಗಿ ಹರಡುತ್ತಿತ್ತು. ವಾಹನ ಸವಾರರ ಮೇಲೆ ಬೀಳುತ್ತಿತ್ತು. ಇದರಿಂದ ಸವಾರರು ಮುಜುಗರಿಂದ ಸಂಚರಿಸುವಂತಾಗಿತ್ತು.

ಗಾಳಿ ಬೀಸುತ್ತಿದ್ದಂತೆ ದುರ್ವಾ ಸನೆಯುಕ್ತ ನೊರೆ ಮೇಲೆ ಬೀಳುವ ಭಯದಿಂದ ವಾಹನ ಸವಾರರು ನಿಂತುಬಿಡುತ್ತಿದ್ದರು. ಹೀಗಾಗಿ ವರ್ತೂರು ಕೋಡಿ ವೃತ್ತದಲ್ಲಿ ವಾಹನಗಳ ದಟ್ಟಣೆ ಕೂಡ ಉಂಟಾಗಿತ್ತು.

ಪಾದಚಾರಿಗಳಂತೂ ಸೇತುವೆಯ ಒಂದು ತುದಿಯಿಂದ ಮತ್ತೊಂದು ತುದಿಗೆ ದಾಟುವಾಗ ಮೂಗು ಮುಚ್ಚಿ ಕೊಂಡು ಓಡಿಕೊಂಡು ಹೋಗುತ್ತಿದ್ದರು. ಇನ್ನೂ  ಕೋಡಿಯಲ್ಲಿರುವ ಬಿಬಿಎಂಟಿಸಿ ಬಸ್ ನಿಲ್ದಾಣದಲ್ಲಿ ನೆಮ್ಮದಿಯಿಂದ ಉಸಿರಾಡಿಕೊಂಡು ನಿಲ್ಲಲಾಗದೆ ಅನೇಕ ಪ್ರಯಾಣಿಕರು ಹತ್ತಿರದ ರಾಮಗೊಂ ಡನಹಳ್ಳಿ ಬಸ್‌ ನಿಲ್ದಾಣದವರೆಗೆ ನಡೆದು ಕೊಂಡು ಹೋಗಿ ಬಸ್ಸು ಹತ್ತುವುದು ಸಾಮಾನ್ಯವಾಗಿತ್ತು. 

ಕಳೆದ ತಿಂಗಳ ನೊರೆ ರಸ್ತೆಯ ಮೇಲೆ ಹೆಚ್ಚಾಗಿ ಸಂಗ್ರಹಗೊಳ್ಳುತ್ತಿದ್ದಾಗ ಬಿಬಿ ಎಂಪಿ ವತಿಯಿಂದ ನೊರೆ ಪ್ರಮಾ ಣವನ್ನು ಕಡಿಮೆ ಮಾಡಲು ಟ್ಯಾಂಕರ್‌ಗಳ ಮೂಲಕ ನೀರು ಚಿಮುಕಿಸಲಾಗುತ್ತಿತ್ತು. ಆದರೆ ಕಳೆದ 25 ದಿನಗಳಿಂದ ನೊರೆ ಕಡಿಮೆ ಮಾಡಲು ಗಮನಹರಿಸುತ್ತಿಲ್ಲ.

ಕೇವಲ ಚರಂಡಿ ದುರಸ್ತಿ ಮತ್ತು ಸ್ವಚ್ಛತೆ ಕಾರ್ಯ ನಮಗೆ ಸಂಬಂಧಿಸಿದ್ದು,  ಕೆರೆಯ ನೊರೆ ತಡೆಯುವುದು ನಮಗೆ ಸಂಬಂಧಿಸಿದ್ದಲ್ಲ. ಕೆರೆ ಸ್ವಚ್ಛತೆ ಬಿಡಿಎಗೆ ಹೊಣೆಯಾದರೆ, ಕೊಳಚೆ ನೀರು ಸಂಸ್ಕ ರಿಸಿ ಬಿಡುವುದು ಜಲಮಂಡಳಿ ಜವಾಬ್ದಾರಿ ಎಂದು ಸ್ಥಳೀಯ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಹೇಳುತ್ತಾರೆ.

ತಿಂಗಳುಗಳ ಕಾಲ ದುರ್ನಾತ, ನೊರೆ ಎಲ್ಲರ ನೆಮ್ಮದಿ ಕೆಡಿಸಿದೆ. ಈ ಬಗ್ಗೆ ಯಾರಿಗೆ ದೂರು ಸಲ್ಲಿಸುವುದು ಎಂದು ತಿಳಿಯುತ್ತಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

ಕೆರೆ ಕೋಡಿ ಸುತ್ತಮುತ್ತಲಿನ ರಾಮ ಗೊಂಡನಹಳ್ಳಿ, ವರ್ತೂರು, ಹಗ ದೂರು, ಸಿದ್ದಾಪುರ, ಆರ್‌. ನಾರಾಯ ಪುರ ಊರುಗಳಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಊರುಗಳಲ್ಲಿ ಜನರು ಒಂದಿ ಲ್ಲೊಂದು ಕಾಯಿಲೆಯಿಂದ ಬಳಲು ತ್ತಿದ್ದಾರೆ. ಸೊಳ್ಳೆಗಳ ಹಾವಳಿ ಯನ್ನು ನಿಯಂತ್ರಿಸಲಾದರೂ ಬಿಬಿಎಂಪಿ  ಔಷಧಿ ಯನ್ನು ಸಿಂಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬಾಡಿಗೆ ಮನೆಗಳು ಖಾಲಿ: ಕೆರೆಗೆ ಹೊಂದಿಕೊಂಡಿರುವ ವರ್ತೂರು ಹಾಗೂ ರಾಮಗೊಂಡನಹಳ್ಳಿ ಭಾಗದ ಅನೇಕ ಬಾಡಿಗೆ ಮನೆಗಳು ಖಾಲಿ ಯಾಗಿವೆ. ಸೊಳ್ಳೆ, ದುರ್ನಾತಕ್ಕೆ ಹೆದರಿ ಬಾಡಿಗೆದಾರರು ಮನೆಗಳನ್ನು ಖಾಲಿ ಮಾಡುತ್ತಿದ್ದಾರೆ.  

ಹತ್ತಿರದಲ್ಲಿರುವ ಐಟಿಪಿಎಲ್‌ ಕೈಗಾ ರಿಕಾ ಪ್ರದೇಶದಲ್ಲಿ ಕೆಲಸ ಮಾಡಿಕೊಂ ಡಿರುವ ಬೇರೆ ರಾಜ್ಯದ ಸಾವಿರಾರು ಯುವಕರು ವರ್ತೂರು, ಸಿದ್ದಾಪುರ, ರಾಮಗೊಂಡನಹಳ್ಳಿಯಲ್ಲಿ ವಾಸವಾ ಗಿದ್ದಾರೆ. ಅವರೂ ಮನೆ ಖಾಲಿ ಮಾಡಿಕೊಂಡು ಹೋಗುತ್ತಿದ್ದಾರೆ. ಬಾಡಿಗೆದಾರರನ್ನೇ ನಂಬಿಕೊಂಡು ಬ್ಯಾಂಕ್‌ ಸಾಲ ತೆಗೆದುಕೊಂಡು  ಮನೆಗ ಳನ್ನು ನಿರ್ಮಿಸಿದ ಮಾಲೀಕರು ಸಂಕಷ್ಟ ದಲ್ಲಿದ್ದಾರೆ  ಎಂದು ರಾಮಗೊಂಡನಹಳ್ಳಿ ನಿವಾಸಿ ಎಂ.ವೇಣುಗೋಪಾಲ ಬೇಸ ರದಿಂದ ಹೇಳುತ್ತಾರೆ.

ಜನ ಏನಂತಾರೆ?
* * * * * * * *

ಬಾವಿ ನೀರಿನಲ್ಲೂ ದುರ್ವಾಸನೆ
ಜಮೀನಿನಲ್ಲಿ ಕೊರೆಸಿರುವ ಕೊಳವೆ ಬಾವಿಯಲ್ಲಿ ದುರ್ವಾಸನೆಯಿಂದ ಕೂಡಿದ ನೀರು ಬರತೊಡಗಿದೆ. ಆ ನೀರನ್ನು ಹೂಗಿಡಗಳಿಗೆ ಬಿಡುತ್ತಿದ್ದಂತೆ ಗಿಡಗಳು ಬಾಡುತ್ತಿವೆ. ಹೂಗಳ ಇಳುವರಿಯೂ ಕಡಿಮೆಯಾಗಿದೆ. 
- ವಿ.ಸತೀಶ್‌

ತರಕಾರಿ ಮಾರಾಟ ಆಗುತ್ತಿಲ್ಲ
ಇಲ್ಲಿನ ರೈತರು ಬೆಳೆದ ತರಕಾರಿ ಮಾರಾಟ ಆಗುತ್ತಿಲ್ಲ. ಕೆ.ಆರ್‌. ಮಾರುಕಟ್ಟೆಗೆ ಒಯ್ದರೆ ದಲ್ಲಾಳಿಗಳು ಮೂರು ಕಾಸು–ಆರು ಕಾಸಿಗೆ ತರಕಾರಿ ಖರೀದಿಸುತ್ತಾರೆ. ಕಷ್ಟಪಟ್ಟು ಬೆಳೆದ ತರಕಾರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ.
- ಕೆ.ಶ್ರೀನಿವಾಸ್‌ ಗೌಡ

ನೆಮ್ಮದಿ ಕೆಡಿಸಿದೆ
ವರ್ತೂರು ಕೋಡಿಯಿಂದ ಹರಿದು ಹೋಗುವ ಕೆರೆ ನೀರು ಸೊರಹುಣಸೆ ಹಾಗೂ ಮಧುರಾನಗರ ಗ್ರಾಮದ ಜನರ ನೆಮ್ಮದಿಯನ್ನು ಕೆಡಿಸಿದೆ. ಅಲ್ಲಿನ ಜಮೀನಿನಲ್ಲಿ ಕೊಳಕು ನೀರು ಹರಿಯುತ್ತಿದೆ.
- ಮುನಿರಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT