ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಪ ಪ್ರಶಸ್ತಿ ಪ್ರದಾನ: ಆಕ್ಷೇಪ ಸರಿ

Last Updated 22 ಮೇ 2014, 19:30 IST
ಅಕ್ಷರ ಗಾತ್ರ

ಪಂಪ ಪ್ರಶಸ್ತಿ ಪ್ರದಾನ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬನವಾಸಿ ಘಟಕ, ಕದಂಬ ಕನ್ನಡ ಸಂಘ, ಬನವಾಸಿ ವಲಯ ಅಭ್ಯುದಯ ಸಮಿತಿ ಮುಂತಾ­ದವರು ವಿರೋಧ ವ್ಯಕ್ತಪಡಿಸಿರುವುದನ್ನು ‘ಪ್ರಜಾವಾಣಿ’ (ಮೇ 22) ಪತ್ರಿಕೆಯಲ್ಲಿ ಓದಿದೆ. ಅವರ ಆಕ್ಷೇಪಣೆ ನನಗೆ ಸರಿಯೆನಿಸುತ್ತದೆ

ಮೊಟ್ಟ ಮೊದಲ ಕನ್ನಡ ಸಾಮ್ರಾಜ್ಯ, ಆದಿಕವಿ ಪಂಪನ ಕಾರ್ಯಕ್ಷೇತ್ರ ಬನವಾಸಿಯಲ್ಲಿ ಮಧುಕೇಶ್ವರ ದೇವಾಲಯವನ್ನು ಹೊರತು ಪಡಿಸಿದರೆ ಕದಂಬ ಸಾಮ್ರಾಜ್ಯದ ಯಾವ ಕುರುಹುಗಳೂ ಅಲ್ಲಿ ಕಾಣ­ ಸಿಗು­ವುದಿಲ್ಲ. ಈ ಕಾರಣದಿಂದ ಅಂದಿನ ಅಲ್ಲಿಯ ಕೆಲ ಪ್ರಮುಖರ ಒತ್ತಾಸೆಯ ಮೇರೆಗೆ ಮತ್ತು ಬನವಾಸಿ ನಾಡಿನ ಪ್ರಾಚೀನತೆಯನ್ನು ಸಾಂಸ್ಕೃತಿಕವಾಗಿ ಪರಿಚಯಿ­ಸುವ ಸಲುವಾಗಿ, ೧೯೯೬ರಲ್ಲಿ ಕದಂಬೋತ್ಸವ­­ವನ್ನು ಆರಂಭಿಸಲಾಯಿತು.

ಆ ಸಂದರ್ಭ­­ದಲ್ಲಿ ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕನಾಗಿದ್ದೆ. ಈ ಉತ್ಸವವು ರಾಷ್ಟ್ರಮಟ್ಟದ ಗಮನ ಸೆಳೆಯ­ಬೇಕೆಂಬುದು ಆಶಯ­ವಾಗಿತ್ತು. ಜೊತೆಗೆ ಆದಿ ಕವಿ ಪಂಪನ ಹೆಸರಿನಲ್ಲಿ ಕೊಡಮಾಡುವ ಪಂಪ ಪ್ರಶಸ್ತಿ­ಯನ್ನು ಇದೇ ಸಂದರ್ಭ­ದಲ್ಲಿ ಕೊಡಬೇಕೆಂಬುದು ಅಂದಿನ ಸರ್ಕಾರದ ನಿಲುವು.

ಕದಂಬೋತ್ಸವದ ಪ್ರಮುಖ ಆಕರ್ಷಣೆಯೇ ಪಂಪ ಪ್ರಶಸ್ತಿ ಪ್ರದಾನ, ಹಾಗೂ ಈ ನೆಪದಲ್ಲಿ ಮುಖ್ಯಮಂತ್ರಿಗಳನ್ನೂ ಒಳ­ಗೊಂಡಂತೆ ಗಣ್ಯರು ಅಲ್ಲಿಗೆ ಭೇಟಿ ನೀಡುವುದು, ಅಲ್ಲದೇ ಆ ಭಾಗದಲ್ಲಿ ಹಲವು ಅಭಿವೃದ್ಧಿ ಕಾರ್ಯ­ಕ್ರಮಗಳನ್ನು ಹಮ್ಮಿಕೊಳ್ಳುವುದು. ಆದರೆ ಈಗ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿ ತಾಲ್ಲೂಕು ಮಟ್ಟದ ಉತ್ಸವವಾಗಿ ಮಾರ್ಪಾಡಾಗಿರುವುದು ಶೋಚ­ನೀಯ.

ಕಳೆದ ಸಾಲಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರ ಕ್ರಮದಿಂದಾಗಿ ರಾಜ್ಯಾ­ದ್ಯಂತ ಹಲವಾರು ಉತ್ಸವ­ಗಳಿಗೆ ಮರು­ಚಾಲನೆ ಸಿಕ್ಕಿದ್ದು ಸಂತೋಷದ ಸಂಗತಿ. ಆದರೆ ಇಂತಹ ಉತ್ಸವ­ಗಳ ಹಿಂದಿನ ಮಹತ್ವ ಹಾಗೂ ಆಶಯಗಳನ್ನು ಬದಿ­ಗೊತ್ತಿ ಉತ್ಸವಗಳು ಅರ್ಥ­ಕಳೆದು­ಕೊಳ್ಳದಂತೆ ಎಚ್ಚರ­ವಹಿಸುವುದು ಸೂಕ್ತ.

–ವೈ.ಕೆ. ಮುದ್ದುಕೃಷ್ಣ
ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT