ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟೇಲ್‌ ಪ್ರತಿಮೆ ನಿರ್ಮಾಣಕ್ಕೆ ಒತ್ತಾಯ

ಶೂದ್ರ ಶಕ್ತಿ ಸಮಿತಿಯಿಂದ ಜನ್ಮದಿನಾಚರಣೆ
Last Updated 31 ಅಕ್ಟೋಬರ್ 2014, 19:47 IST
ಅಕ್ಷರ ಗಾತ್ರ

ಬೆಂಗಳೂರು:  ‘ದೇಶಕ್ಕೆ ಅಪಾರ ಕೊಡುಗೆ ನೀಡಿದ ಸರ್ದಾರ್ ವಲ್ಲಭಭಾಯಿ ಪಟೇಲ್‌ ಅವರ ಪ್ರತಿಮೆಯನ್ನು ವಿಧಾನಸೌಧದ ಮುಂದೆ ನಿರ್ಮಿಸಬೇಕು ಹಾಗೂ ನಗರದ ಮುಖ್ಯರಸ್ತೆಗೆ ಅವರ ಹೆಸರನ್ನು ಇಡಬೇಕು’ ಎಂದು  ವಿಧಾನ ಸಭೆಯ ಮಾಜಿ ಅಧ್ಯಕ್ಷ ಕೃಷ್ಣ ಅವರು ಒತ್ತಾಯಿಸಿದರು.

ಶೂದ್ರ ಶಕ್ತಿ ಸಮಿತಿಯು ನಗರದ ಕೃಷ್ಣರಾಜ ಪರಿಷ್ಮಂದಿರದಲ್ಲಿ ಶುಕ್ರ ವಾರ ನಡೆದ ಸರ್ದಾರ್ ವಲ್ಲಭ ಬಾಯಿ ಪಟೇಲ್‌ ಅವರ 139ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಪಟೇಲ್ ಅವರ ದೂರದೃಷ್ಟಿ ಮತ್ತು ಯೋಚನಾ ಲಹರಿ ಉತ್ತಮವಾಗಿತ್ತು. ದೇಶಕ್ಕಾಗಿ ದುಡಿಯುವ ಸಾಮಾಜಿಕ ಕಳಕಳಿ ಅವರಲ್ಲಿತ್ತು.

ಅವರ ನಡೆ ನುಡಿಗಳನ್ನು ಇಂದಿನ ಯುವ ಜನಾಂಗವು ಅಳವಡಿಸಿ ಕೊಳ್ಳಬೇಕು’ ಎಂದು ಸಲಹೆ ನೀಡಿದರು. ಕರ್ನಾಟಕ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತ ನಾಡಿ, ‘1960– 70 ದಶಕದವರೆಗೂ ಹೋರಾಟಗಾರರಲ್ಲಿ ದೇಶಭಕ್ತಿ ಮತ್ತು ಸಾಮಾಜಿಕ ಜವಾಬ್ದಾರಿ ಇತ್ತು. ಆದರೆ, ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಹೋರಾಟಕ್ಕೆ ಬದ್ಧತೆ ಯಿಲ್ಲ ಹಾಗೂ ಸಾಮಾಜಿಕ ಅರ್ಪಣಾ ಮನೋಭಾವ ಕ್ಷೀಣಿಸಿದೆ’ ಎಂದು ವಿಷಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT