ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದ್ಮಶ್ರೀ ಮರಳಿಸಿದ ದಲಿಪ್ ಕೌರ್

ಪ್ರತಿಭಟನೆಗೆ ಕೈಜೋಡಿಸಿದ ಅರುಣ್‌ ಜೋಳದಕೂಡ್ಲಿಗಿ
Last Updated 13 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಕೊಪ್ಪಳ: ಹಿರಿಯ ಸಂಶೋಧಕ ಎಂ.ಎಂ. ಕಲಬುರ್ಗಿ ಹತ್ಯೆ ಖಂಡಿಸಿ, ಸಾಹಿತಿ ಅರುಣ್‌ ಜೋಳದಕೂಡ್ಲಿಗಿ ಅವರು ತಮಗೆ ನೀಡಿದ್ದ ‘ಅರಳು ಪ್ರಶಸ್ತಿ’ಯನ್ನು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರಿಗೆ ಹಿಂತಿರುಗಿಸಿದ್ದಾರೆ.

ಪ್ರಶಸ್ತಿಯೊಂದಿಗೆ ನಗದು ಬಹುಮಾನವನ್ನೂ ಹಿಂತಿರುಗಿಸಿದ್ದು, ಫಲಕ ಮತ್ತು ನೆನಪಿನ ಕಾಣಿಕೆಯನ್ನು ನಂತರ ಪರಿಷತ್‌ಗೆ ತಲುಪಿಸುವುದಾಗಿ ಅವರು ತಿಳಿಸಿದ್ದಾರೆ. 

ಚಂಡೀಗಡ/ನವದೆಹಲಿ ವರದಿ: ದೇಶದಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಪಂಜಾಬ್‌ನ ಪ್ರಸಿದ್ಧ ಬರಹಗಾರ್ತಿ ದಲಿಪ್‌ ಕೌರ್‌ ತಿವಾನಾ ಅವರು ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್‌್ ಮಾಡುವುದಾಗಿ  ಹೇಳಿದ್ದಾರೆ. 2004ರಲ್ಲಿ ಇವರಿಗೆ ಪದ್ಮಶ್ರೀ ಬಂದಿತ್ತು.

ಗುವಾಹಟಿ ವರದಿ: ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಖಂಡಿಸಿ ಅಸ್ಸಾಂ ಸಾಹಿತಿ, ಪತ್ರಕರ್ತ ಹೊಮೆನ್‌್  ಬೊರ್ಗೊಹೇನ್‌ ಅವರು ಅಕಾಡೆಮಿ ಪ್ರಶಸ್ತಿ ವಾಸಪ್‌ ಮಾಡಲು ನಿರ್ಧರಿಸಿದ್ದಾರೆ.

‘ದಾದ್ರಿ ಘಟನೆ ಬಳಿಕ ನನ್ನೊಳಗೆ ಮೌನ ಪ್ರತಿಭಟನೆ ನಡೆಯುತ್ತಿದೆ. ಆದರೆ ಅದನ್ನು ವ್ಯಕ್ತಪಡಿಸುವುದಕ್ಕೆ ಸೋತಿದ್ದೆ.  ಈಗ ಕನಿಷ್ಠ 10 ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಒಬ್ಬರಾದ ಮೇಲೆ ಒಬ್ಬರಂತೆ ಪ್ರಶಸ್ತಿ ಮರಳಿಸಿದ್ದಾರೆ. ನಾನು ಇದೇ ನಿರ್ಧಾರಕ್ಕೆ ಬಂದಿದ್ದೇನೆ’ ಎಂದಿದ್ದಾರೆ.

ಮುಂಬೈ ವರದಿ: ಮರಾಠಿಯ ಹೆಸರಾಂತ ಬರಹಗಾರ್ತಿ ಪ್ರಜ್ಞಾ ಪವಾರ್‌್ ಅವರು ಸಾಹಿತ್ಯ ಪ್ರಶಸ್ತಿಗಳು  ಹಾಗೂ ₹1.13 ಲಕ್ಷ ನಗದು ಹಣವನ್ನು ರಾಜ್ಯ ಸರ್ಕಾರಕ್ಕೆ  ಮರಳಿಸುವುದಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT