ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಣಿತಿಗೆ 50 ಲಕ್ಷ ಅಭಿಮಾನಿಗಳು

Last Updated 6 ಜುಲೈ 2015, 19:30 IST
ಅಕ್ಷರ ಗಾತ್ರ

ತನ್ನ ಸರಳ ಸೌಂದರ್ಯ ಹಾಗೂ ನಟನೆಯ ಮೂಲಕ ಬಾಲಿವುಡ್‌ನಲ್ಲಿ ಬಹು ಬೇಗ ಗುರುತಿಸಿಕೊಂಡ ನಟಿ ಪರಿಣಿತಿ ಚೋಪ್ರಾಗೆ ಸ್ನೇಹಿತರೆಂದರೆ ಬಹಳ ಇಷ್ಟ. ಬಿಡುವಿನ ಸಮಯವನ್ನು ಸ್ನೇಹ ಬಳಗದೊಂದಿಗೇ ಕಳೆಯಲು ಇಷ್ಟ ಪಡುವ ಪರಿಣಿತಿ, ಉಳಿದಂತೆ ಫೇಸ್‌ಬುಕ್ ಹಾಗೂ ಟ್ವಿಟರ್ ಮೂಲಕ ಅವರೊಂದಿಗೆ ಸಂಪರ್ಕದಲ್ಲಿರುತ್ತಾರೆ. ಹೀಗಿರುವ ಪರಿಣಿತಿಗೆ ಅಭಿಮಾನಿಗಳ ಸಂಖ್ಯೆಯೂ ಸಾಕಷ್ಟಿದೆ.

ಸದ್ಯಕ್ಕೆ ಈ ಸಂಖ್ಯೆ ಸುಮಾರು 50 ಲಕ್ಷ ತಲುಪಿದೆ ಎನ್ನುವುದೇ ಹೊಸ ಸುದ್ದಿ. ಅಕ್ಕ ಪ್ರಿಯಾಂಕಾ ಚೋಪ್ರಾರನ್ನು ಸ್ಫೂರ್ತಿಯಾಗಿಟ್ಟುಕೊಂಡೇ ಬಿಟೌನ್‌ಗೆ ಎಂಟ್ರಿ ಕೊಟ್ಟವರು ಪರಿಣಿತಿ. ‘ಲೇಡೀಸ್ v/s ರಿಕಿ ಬಹ್ಲ್’ ಚಿತ್ರದಲ್ಲಿ  ರಣವೀರ್ ಜೊತೆ ನಟಿಸಿ ಸೈ ಎನಿಸಿಕೊಂಡ ಪರಿಣಿತಿಗೆ  ಅಕ್ಕ ಪ್ರಿಯಾಂಕಾ ಎಂದರೆ ಎಲ್ಲಿಲ್ಲದ ಪ್ರೀತಿ.

ಮೊದಲ ಚಿತ್ರದಿಂದ ಹಿಡಿದು ಇತ್ತೀಚಿನ ‘ಕಿಲ್ ದಿಲ್’ ಚಿತ್ರದವರೆಗೂ ತಮಗೆ ಬೆಂಬಲ ಹಾಗೂ ಪ್ರೀತಿ ನೀಡಿದ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದ ತಿಳಿಸಲು ಪರಿಣಿತಿ ಒಂದು ದಿನ ಆಯ್ಕೆ ಮಾಡಿಕೊಂಡರು. ‘ನಾಳೆ (ಮಂಗಳವಾರ) ಬೆಳಿಗ್ಗೆ 11.30ಕ್ಕೆ ನಾನು ನಿಮ್ಮ ಮಾತುಗಳಿಗೆ ನೇರವಾಗಿ ಉತ್ತರಿಸಲಿದ್ದೇನೆ’ ಎಂದು ಅವರು ಸೋಮವಾರ ಪೋಸ್ಟ್‌ ಮಾಡಿದ್ದರು. ಅದರಂತೆ ಮಂಗಳವಾರ ಬೆಳಿಗ್ಗೆಯಿಂದಲೇ ಟ್ವಿಟರ್‌ನಲ್ಲಿ ಪರಿಣಿತಿಗಾಗಿ ಕಾದು ಕುಳಿತಿದ್ದ ಸುಮಾರು 50 ಲಕ್ಷಕ್ಕಿಂತ ಅಧಿಕ ಅಭಿಮಾನಿಗಳು ಅವರೊಂದಿಗೆ ಲೈವ್‌ ಚಾಟ್‌ ಮಾಡಿ ಸಂಭ್ರಮಿಸಿದರು.

‘ಕಿಲ್‌ ದಿಲ್’ ಚಿತ್ರದ ನಂತರ ಕೆಲ ದಿನ ವಿರಾಮ ತೆಗೆದುಕೊಳ್ಳುವುದಾಗಿ ಮೊದಲೇ ನಿರ್ಧರಿಸಿದ್ದ ಪರಿಣಿತಿಗೆ ಸದ್ಯಕ್ಕೆ ಕೈಯಲ್ಲಿ ಯಾವುದೇ ಚಿತ್ರವಿಲ್ಲ. ಈ ಸಮಯವನ್ನು ಕುಟುಂಬ, ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ನೀಡುವ ಆಲೋಚನೆಯಲ್ಲಿರುವ ಪರಿಣಿತಿ ತಮ್ಮ ವೃತ್ತಿ ಬದುಕು–ವೈಯಕ್ತಿಕ ಬದುಕಿನಲ್ಲಿ ನಡೆಯುವ ಬೆಳವಣಿಗೆ–ಬದಲಾವಣೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ‘ಎಷ್ಟು ಚಿತ್ರ ಮಾಡುತ್ತೇವೆ ಎನ್ನುವುದಕ್ಕಿಂತ, ಎಂತಹ ಚಿತ್ರ ಮಾಡುತ್ತೇವೆ ಎನ್ನುವುದು ಮುಖ್ಯ’ ಎಂಬ ಥಿಯರಿ ಪರಿಣಿತಿಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT