ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ದಾಳಿ: ಭಾರತದ ಸೈನಿಕ ಸಾವು

Last Updated 19 ಮೇ 2014, 19:30 IST
ಅಕ್ಷರ ಗಾತ್ರ

ಜಮ್ಮು (ಪಿಟಿಐ):  ಗಡಿ ನಿಯಂತ್ರಣ ರೇಖೆಯ ಬಳಿ ನೆಲ ಬಾಂಬ್‌ ಸ್ಫೋಟ  ಮತ್ತು ಗುಂಡಿನ ದಾಳಿಯಲ್ಲಿ ಭಾರತದ ಸೇನೆಯ ಯೋಧನೊಬ್ಬ ಸತ್ತಿದ್ದು ಕರ್ನಾಟಕದ ಯೋಧ ಸೇರಿದಂತೆ ಇಬ್ಬರು  ಗಾಯಗೊಂಡಿದ್ದಾರೆ. ಅಖನೂರ್ ಬಳಿ ಗಡಿ ನಿಯಂತ್ರಣ ರೇಖೆಗುಂಟ ಗಸ್ತು ತಿರುಗುತ್ತಿದ್ದ ಭಾರತದ ಸೈನಿಕರನ್ನು ಗುರಿಯಾಗಿಟ್ಟು­ಕೊಂಡು ಭಾನುವಾರ ನೆಲಬಾಂಬ್ ಸ್ಫೋಟಿಸಿ ಗುಂಡಿನ ದಾಳಿ ನಡೆಸಲಾಗಿದೆ.

ಪಾಕಿಸ್ತಾನದ ಗಡಿ ಕಾರ್ಯ ಪಡೆ  ‘ಬ್ಯಾಟ್’ ತಂಡವೇ ಈ ಕೃತ್ಯ ಎಸಗಿರ­ಬಹುದು ಎಂದು ಬಲವಾಗಿ ಶಂಕಿಸ­ಲಾಗಿದೆ ಎಂದು ರಕ್ಷಣಾ ಇಲಾಖೆಯ ಜಮ್ಮುವಿನ ಸಾರ್ವಜನಿಕ ಸಂಪರ್ಕ ಅಧಿಕಾರಿ  ತಿಳಿಸಿದ್ದಾರೆ. ಈ ಘಟನೆ ನಡೆದ ಕೂಡಲೇ ಭಾರತದ ಸೈನಿಕರು ಪ್ರತಿಯಾಗಿ ಗುಂಡು ಹಾರಿಸಿದ್ದರಿಂದ ‘ಬ್ಯಾಟ್’ ಸಿಬ್ಬಂದಿ ಗಡಿ ನಿಯಂತ್ರಣ ರೇಖೆಯ ಬಳಿಯಿಂದ ಪರಾರಿಯಾದರು ಎಂದು ತಿಳಿಸಿದ್ದಾರೆ.

ಈ ಘಟನೆಯಲ್ಲಿ ಹುತಾತ್ಮನಾದ ಯೋಧನನ್ನು ಭಿಕಲೆ ಉತ್ತಮ್ ಬಾಲು ಎಂದು ಗುರುತಿಸಲಾಗಿದೆ. ಗಾಯ­ಗೊಂಡ ಇಬ್ಬರು ಯೋಧರನ್ನು ಹೆಲಿ­ಕಾಪ್ಟರ್ ಮೂಲಕ ಉಧಮ್‌ಪುರ ಸೇನಾ ಆಸ್ಪತ್ರಗೆ ಸಾಗಿಸಲಾಗಿದೆ. ಗಾಯ­ಗೊಂಡವರನ್ನು ಕರ್ನಾಟಕದ ಹವಾ­ಲ್ದಾರ್ ವಿನೋದ್‌ ಕುಮಾರ್ ಮತ್ತು ಕೇರಳದ ಅಮುಲ್ ಕುಮಾರ್ ಎಂದು ಗುರುತಿಸಲಾಗಿದೆ.

ದಾಳಿ ನಡೆದ ಪ್ರದೇಶದಲ್ಲಿ ಪರಿ­ಶೀಲನೆ ನಡೆಸಿದಾಗ ನೆಲಬಾಂಬ್ ಹುದುಗಿ­ಸಿಡಲು ಹೊಂಡಗಳನ್ನು ತೋಡಿ­ರು­ವುದು ಪತ್ತೆಯಾಗಿದ್ದು, ಇದು ‘ಬ್ಯಾಟ್’ ನಡೆಸಿದ ಕೃತ್ಯವಿರಬಹುದು ಎಂದು ಶಂಕಿಸಲಾಗಿದೆ. ಪಾಕಿಸ್ತಾನದ ವಿಶೇಷ ಪಡೆಯ ಸಿಬ್ಬಂದಿ ಮತ್ತು ಭಯೋತ್ಪಾದಕರನ್ನು ಒಳಗೊಂಡ ‘ಬ್ಯಾಟ್‌’ ಕಳೆದ ವರ್ಷ ಇಬ್ಬರು ಭಾರತೀಯ ಯೋಧರನ್ನು ಬರ್ಬರ­ವಾಗಿ ಹತ್ಯೆ ಮಾಡಿತ್ತು.

ಭಯೋತ್ಪಾದಕರ ಗುಂಡಿಗೆ ಯೋಧ ಬಲಿ
ಶ್ರೀನಗರ ವರದಿ: ಬುದ್‌ಗಾಮ್ ಜಿಲ್ಲೆಯ ಕೌಸರಮುಲ್ಲಾ ಗ್ರಾಮದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಯೋಧ ಸತ್ತಿದ್ದು, ಮೂವರು ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT