ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್: ಸಂಘರ್ಷದಲ್ಲಿ 7 ಸೈನಿಕರು ಸಾವು

Last Updated 1 ನವೆಂಬರ್ 2014, 10:17 IST
ಅಕ್ಷರ ಗಾತ್ರ

ಪೆಶಾವರ್‌, ಪಾಕಿಸ್ತಾನ (ಪಿಟಿಐ): ಪಾಕಿಸ್ತಾನದ ವಾಯವ್ಯ ಭಾಗದ ಸಂಘರ್ಷ ಪೀಡಿತ ಬುಡಕಟ್ಟು ಪ್ರದೇಶದಲ್ಲಿ ಶನಿವಾರ ನಡೆದ ಪ್ರತ್ಯೇಕ ಘಟನೆಗಳಲ್ಲಿ ಕನಿಷ್ಠ ಏಳು ಸೈನಿಕರು ಹಾಗೂ 20 ಜನ ಉಗ್ರರು ಸಾವನ್ನಪ್ಪಿದ್ದಾರೆ.

ಈ ಭಾಗದಲ್ಲಿ ಪಾಕಿಸ್ತಾನ ಸೇನೆಯು ತಾಲಿಬಾನ್ ವಿರೋಧಿ ಕಾರ್ಯಾಚರಣೆ ನಡೆಸುತ್ತಿದೆ.

‘ಖೈಬರ್‍–1’ ಕಾರ್ಯಾಚರಣೆಯ ವೇಳೆ ಭದ್ರತಾ ಪಡೆಗಳ ಗುಂಡಿಗೆ 20 ಉಗ್ರರು ಸಾನವನ್ನಪ್ಪಿದ್ದಾರೆ. ಘಟನೆಯಲ್ಲಿ  ಆರು ಸೈನಿಕರು ಮೃತಪಟ್ಟಿದ್ದು, ಇತರ ಐವರು ಯೋಧರು ಗಾಯಗೊಂಡಿದ್ದಾರೆ.

ಪಾಕ್‌ ಸೇನೆ  ಖೈಬೆರ್‌1 ಕಾರ್ಯಾಚರಣೆ ನಡೆಸುತ್ತಿದ್ದು ಒಂದು ತಿಂಗಳಿನಿಂದ ಉಗ್ರರಿಗಾಗಿ ಖೈಬೆರ್‌ ಬುಡಕಟ್ಟು ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ. ಶನಿವಾರ ನಡೆದ ದಾಳಿಯಲ್ಲಿ 20ಜನ ತಾಲಿಬಾನ್‌ ಉಗ್ರರು ಭದ್ರತಾ ಸಿಬ್ಬಂದಿಯಿಂದ ಸಾವನ್ನಪ್ಪಿದ್ದಾರೆ.

ದಾಳಿಯಲ್ಲಿ ಆರು ಜನ ಸೈನಿಕರು ಸಾವನ್ನಪ್ಪಿದ್ದು, ಉಳಿದ ಐವರು ಗಾಯಗೊಂಡಿದ್ದಾರೆ.

ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ಒಬ್ಬ ಯೋಧ ಸಾವನ್ನಪ್ಪಿದ್ದಾರೆ. ಬಾಂಬ್‍ ಸ್ಫೋಟದ ವೇಳೆ ಈ ಅವಘಡ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT