ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಳು ಬಿದ್ದ ಹೆಜಮಾಡಿ ಬಂದರು

ಸ್ಥಳೀಯರಿಂದ ಸಮಾಲೋಚನಾ ಸಭೆ
Last Updated 29 ಜೂನ್ 2016, 5:24 IST
ಅಕ್ಷರ ಗಾತ್ರ

ಪಡುಬಿದ್ರಿ: ಬಹು ನಿರೀಕ್ಷಿತ ಹೆಜಮಾಡಿ ಮೀನುಗಾರಿಕಾ ಬಂದರು ಯೋಜನೆ ಜಾರಿ ಹಿನ್ನೆಲೆಯಲ್ಲಿ ಜುಲೈ 5ರಂದು ಬೆಳಿಗ್ಗೆ 10.30 ಗಂಟೆಗೆ ಹೆಜಮಾಡಿಯಲ್ಲಿ ಜಿಲ್ಲಾಧಿಕಾರಿ ಹಾಗೂ ಪರಿಸರ ಇಲಾಖೆ ಯ ಅಧಿಕಾರಗಳು ಮತ್ತು ಮೀನುಗಾ ರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ನಡೆಯಲಿರುವ ಸಮಾಲೋಚನಾ ಸಭೆಗೆ ಪೂರ್ವಭಾವಿಯಾಗಿ ಭಾನುವಾರ ಸಂಜೆ ಹೆಜಮಾಡಿಯ ಪಲಿಮಾರು ಸೀತಾ ರಾಮ ಭಜನಾ ಮಂದಿರದಲ್ಲಿ ಆಸುಪಾ ಸಿನ ಗ್ರಾಮಗಳ ಮೀನುಗಾರರು,  ಸಂಘಸಂಸ್ಥೆಗಳ ಮುಖಂಡರೊದಿಗೆ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ವಿಜಯ ಬಂಗೇರ, ಹೆಜಮಾಡಿಯಲ್ಲಿ 30 ವರ್ಷ ಗಳ ಹಿಂದೆ 25 ಪರ್ಸಿನ್ ಬೋಟ್‌ಗಳು ಮತ್ತು 65 ಟ್ರಾಲ್ ಬೋಟ್‌ಗಳಿದ್ದವು. ಹೆಜಮಾಡಿಯ ಯಾರ್ಡ್‌ ಪ್ರದೇಶವು ಅತಿದೊಡ್ಡ ಮೀನು ಮಾರಾಟ ಕೇಂದ್ರ ವಾಗಿ ಗುರುತಿಸಿಕೊಂಡಿತ್ತು.

ಸಮುದ್ರ ದಲ್ಲಿಯೇ ಲಂಗರು ಹಾಕಬೇಕಿದ್ದರಿಂದ ಸಮಸ್ಯೆಯಾಗಿ ಅನಿವಾರ್ಯವಾಗಿ ಮಂಗಳೂರು ಮತ್ತು ಮಲ್ಪೆ ಬಂದರನ್ನು ಉಪಯೋಗಿಸಬೇಕಾಗಿ ಬಂತು. ಹೀಗಾಗಿ, ಅನೇಕರು ಬೋಟ್‌ಗಳನ್ನು ಮಾರಿದ ಕಾರಣ ಹೆಜಮಾಡಿಯಲ್ಲಿ ಬೋಟ್‌ಗಳ ಸಂಖ್ಯೆ ಇಳಿಮುಖ ವಾಯಿತು. ಅದಕ್ಕಿಂತಲೂ ಹಿಂದಿನಿಂದ ಲೇ ಹೆಜಮಾಡಿಯ ಶಾಂಭವಿ ಹೊಳೆಯಲ್ಲಿ ಮೀನುಗಾರಿಕಾ ಬಂದರು ಯೋಜನೆ ಜಾರಿಗೆ ನಿರಂತರ ಪ್ರಯತ್ನ ನಡೆದಿದ್ದರೂ ಇಂದಿಗೂ ಮೀನುಗಾರರ ಕನಸು ನನಸಾಗಲಿಲ್ಲ ಎಂದರು.

ಹಲವು ಸಚಿವರು ಬಂದರು ಪ್ರದೇಶಕ್ಕೆ ಭೇಟಿ ನೀಡಿ ಪೂರಕ ಹೇಳಿಕೆ ನೀಡಿದ್ದರೂ ಯೋಜನೆ ಜಾರಿಯಾಗಿಲ್ಲ. ಇದೀಗ ಹಲವರ ನಿರಂತರ ಪ್ರಯತ್ನದ ಫಲವಾಗಿ ಯೋಜನೆ ಕಾರ್ಯಗತ ಗೊಳ್ಳುವ ಹಂತ ತಲುಪಿದ್ದು ಜುಲೈ 5 ರಂದು ಜಿಲ್ಲಾಧಿಕಾರಿಗಳು ಹಾಗೂ ಪರಿಸರ ಇಲಾಖೆಯ ಅಧಿಕಾರಿಗಳು ಸ್ಥಳೀಯ ಮೀನುಗಾರರೊಂದಿಗೆ ಸಮಾ ಲೋಚನೆ ನಡೆಸಲಿದ್ದಾರೆ. ಈ ಸಂದರ್ಭ ಮೀನುಗಾರರು ತಮ್ಮ ಅಭಿಪ್ರಾಯ ಗಳನ್ನು ತಿಳಿಸಬೇಕು ಎಂದು ಹೇಳಿದರು.

ಜುಲೈ 5 ಮೀನುಗಾರಿಕೆಗೆ ರಜೆ: ಎಲ್ಲ ಮೀನುಗಾರರು ಸಭೆಯಲ್ಲಿ ಭಾಗವಹಿ ಸುವ ಉದ್ದೇಶದಿಂದ ಜುಲೈ 5 ರಂದು ಹೆಜಮಾಡಿ ವಲಯ  ನಾಡದೋಣಿ ಮೀನುಗಾರಿಕೆಗೆ ರಜೆ ಸಾರಲಾಗಿದೆ ಎಂದು ವಲಯ ಸಂಘದ ಅಧ್ಯಕ್ಷ ವಿಜಯ ಎಸ್.ಬಂಗೇರ ತಿಳಿಸಿದರು.

ಮೀನುಗಾರರ ಪರವಾಗಿ ಮನೋ ಹರ ಪುತ್ರನ್, ಚಂದ್ರಹಾಸ ಸಾಲ್ಯಾನ್, ದಿವಾಕರ ಹೆಜ್ಮಾಡಿ, ಪುಂಡರಿಕಾಕ್ಷ ಕೋಟ್ಯಾನ್, ನಿತಿನ್ ಕುಮಾರ್, ವಿಮಲಾ ದಯಾನಂದ್, ಸಂಜೀವ ಟಿ, ಶರನ್ ಕುಮಾರ್ ಮಟ್ಟು, ನವೀನ್ ನಡಿ ಕುದ್ರು ತಮ್ಮ ಅಭಿಪ್ರಾಯ ತಿಳಿಸಿದರು.

ಹೆಜಮಾಡಿ-ಮೂಲ್ಕಿ ವಲಯ ಪರ್ಸಿನ್ ಮತ್ತು ಟ್ರಾಲ್ ಬೋಟ್ ಯೂನಿಯನ್ ಅಧ್ಯಕ್ಷ ರಾಮ ಬಿ. ಬಂಗೇರ, ಕಾರ್ಯದರ್ಶಿ ಹರಿಶ್ಚಂದ್ರ ಮೆಂಡನ್, ಹೆಜಮಾಡಿ ಗ್ರಾಮ ಪಂಚಾ ಯಿತಿ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ಉಪಾಧ್ಯಕ್ಷ ಸುಧಾಕರ ಕರ್ಕೇರ, ಮಾಜಿ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು, ತಾಲ್ಲೂಕು ಪಂಚಾಯಿತಿ ಸದಸ್ಯೆ ರೇಣುಕಾ ಪುತ್ರನ್, ಹೆಜಮಾಡಿ ಏಳೂರು ಮೊಗವೀರ ಸಭಾ ಅಧ್ಯಕ್ಷ ವಿಜಯ ಕೆ. ಕೋಟ್ಯಾನ್ ಮಟ್ಟುಪಟ್ಣ, ಮೂಲ್ಕಿ ನಾಲ್ಕುಪಟ್ಣ ಮೊಗವೀರ ಸಭಾ ಅಧ್ಯಕ್ಷ ಗುರುವಪ್ಪ ಕೋಟ್ಯಾನ್ ಚರಂತಿಪೇಟೆ, ಉದ್ಯಮಿ ಎಮ್.ಎಸ್. ರಜಾಕ್, ಮೀನುಗಾರ ಮುಖಂಡರಾದ ನಾರಾಯಣ ಮೆಂಡನ್ ಮತ್ತು ಶ್ರೀಕರ ಮೆಂಡನ್, ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ರೆಹಮಾನ್ ಪುತ್ತು, ಕರಾವಳಿ ಕಾವಲು ಪಡೆಯ ಅಗಸ್ಟಿನ್ ಕ್ವಾಡ್ರಸ್ ಅಭಿಪ್ರಾಯ ಮಂಡಿಸಿದರು. ಗೋವ ರ್ಧನ ಕೋಟ್ಯಾನ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT