ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಂಚಣಿದಾರರ ನಿಯಮ ತಿದ್ದುಪಡಿ

Last Updated 19 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ನಿವೃತ್ತಿಯಾದ ಒಂದು ವರ್ಷ­ದೊಳಗೆ ಪಿಂಚಣಿದಾರರು ಖಾಸಗಿ ಉದ್ಯೋಗದಲ್ಲಿ ತೊಡಗುವುದಕ್ಕೆ ಸರ್ಕಾರದಿಂದ ಅನುಮತಿ ಪಡೆದು­ಕೊಳ್ಳಲು ‘ಹಿತಾಸಕ್ತಿಯ ಸಂಘರ್ಷ ಇಲ್ಲ’ ಎಂಬ ಪ್ರಮಾಣ ಪತ್ರ ಸಲ್ಲಿಸುವ ಅಗತ್ಯ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ಹಿಂದೆ, ಪಿಂಚಣಿದಾರರು ಖಾಸಗಿ ಉದ್ಯೋಗಕ್ಕೆ ಹೋಗುವುದಿದ್ದರೆ ಅನುಮತಿಗಾಗಿ ಸರ್ಕಾರಕ್ಕೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕಿತ್ತು ಮತ್ತು ಅದ­ರೊಂದಿಗೆ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯ­ವಾಗಿತ್ತು. ಸೇವೆಯಲ್ಲಿದ್ದ ಕೊನೆಯ ಮೂರು ವರ್ಷ­ಗಳಲ್ಲಿ ಅವರು ಪ್ರತಿನಿಧಿಸಿದ ಹಿತಾಸಕ್ತಿಗಳು ಮತ್ತು ಕೈಗೊಂಡ ಕೆಲಸಗಳು ಈಗ ಕೈಗೊಳ್ಳುವ ಖಾಸಗಿ ಕೆಲಸದೊಂದಿಗೆ ಹಿತಾಸಕ್ತಿಯ ಯಾವುದೇ ಸಂಘರ್ಷ ಹೊಂದಿಲ್ಲ ಎಂಬುದನ್ನು ಪ್ರಮಾಣಪತ್ರದಲ್ಲಿ ದೃಢಪಡಿಸಬೇಕಿತ್ತು. ನಿವೃತ್ತಿಯಾಗಿ ಒಂದು ವರ್ಷದೊಳಗೆ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಕೈಗೊಳ್ಳಲು ಇದು ಅಗತ್ಯ­ವಾಗಿತ್ತು.

ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು (ಡಿಒಪಿಟಿ) ಪಿಂಚಣಿದಾರರು ಖಾಸಗಿ ಉದ್ಯೋಗ ಕೈಗೊಳ್ಳುವ ನಿಯಮಗಳನ್ನು ಪರಿಷ್ಕರಿಸಿ ಈ ಆದೇಶ ಹೊರ­ಡಿಸಿದೆ. ಹೊಸ ನಿಯಮದ ಪ್ರಕಾರ, ಪಿಂಚಣಿ­ದಾರರು ಸ್ವಯಂ ದೃಢೀಕೃತ ಘೋಷಣೆ ನೀಡಿದರೆ ಸಾಕು. ಭಾರತದ ವಿದೇಶಾಂಗ ಸಂಬಂಧಗಳು, ರಾಷ್ಟ್ರೀಯ ಭದ್ರತೆ ಮತ್ತು ದೇಶೀಯ ಸೌಹಾರ್ದ­ತೆ­ಯೊಂದಿಗೆ ಹೊಸ ಉದ್ಯೋಗ ನೀಡುತ್ತಿರುವ ಸಂಸ್ಥೆಯು ಸಂಘರ್ಷ ಹೊಂದಿಲ್ಲ ಎಂಬುದನ್ನು ಘೋಷಣೆ­ಯಲ್ಲಿ ದೃಢಪಡಿಸಬೇಕು.

ಸರ್ಕಾರದಿಂದ ಯಾವುದೇ ಆಕ್ಷೇಪ ಬಂದಾಗ ಖಾಸಗಿ ಉದ್ಯೋಗವನ್ನು ಬಿಡುತ್ತೇನೆ ಎಂದೂ ಘೋಷಣೆಯಲ್ಲಿ ಸ್ಪಷ್ಟಪಡಿಸಬೇಕು.
ಹೆಚ್ಚಿನ ಕೆಲಸಗಳಿಗೆ ಪ್ರಮಾಣಪತ್ರ ಸಲ್ಲಿಸುವುದನ್ನು ರದ್ದುಪಡಿಸುವ ಎನ್‌ಡಿಎ ಸರ್ಕಾರದ ಉಪಕ್ರಮದ ಭಾಗವಾಗಿ ಈ  ಕ್ರಮ ಕೈಗೊಳ್ಳಲಾಗಿದೆ ಎಂದು ಡಿಒಪಿಟಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT