ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಚ್ಚರ್ ನೋಡಿ

Last Updated 29 ಜೂನ್ 2016, 19:30 IST
ಅಕ್ಷರ ಗಾತ್ರ

ದರ್ಶನ್‌ ಅಭಿನಯದ ಬಹು ಯಶಸ್ವಿ ಚಿತ್ರಗಳಲ್ಲೊಂದಾದ ‘ಗಜ’ (2008), ಗಾಂಧಿನಗರದ ಭಾಷೆಯಲ್ಲಿ ಹೇಳುವುದಾದರೆ ‘ಹದಿನಾರಾಣೆ ಮನರಂಜನೆಯ ಸಿನಿಮಾ’.

ಈ ಚಿತ್ರದ ಯಶಸ್ಸು ದರ್ಶನ್‌ ಹೆಸರಿನ ಜೊತೆಗೆ ‘ಬಾಕ್ಸಾಫೀಸ್‌ ಸುಲ್ತಾನ’ ಎನ್ನುವ ವಿಶೇಷಣವನ್ನು ಅಂಟಿಸಿತು. ರೀಮೇಕ್‌ ಚಿತ್ರಗಳನ್ನು ರೂಪಿಸುವಲ್ಲಿ ಸಿದ್ಧಹಸ್ತರಾದ ಕೆ. ಮಾದೇಶ್‌ ನಿರ್ದೇಶನದ ಈ ಸಿನಿಮಾ, ತೆಲುಗಿನ ‘ಭದ್ರ’ದ ಕನ್ನಡ ರೂಪ.

ಗೆಳೆಯನ ಊರಿಗೆ ಹೋಗುವ ನಾಯಕ, ಅಲ್ಲಿ ಪ್ರೇಮದಲ್ಲಿ ಬೀಳುವ ಜೊತೆಗೆ ‘ಇಲಿ ಮತ್ತು ಬೆಕ್ಕು’ ಆಟದ ಸಾಹಸಿಯೂ ಆಗುತ್ತಾನೆ. ರಮೇಶ್‌ಬಾಬು ಛಾಯಾಗ್ರಹಣದಲ್ಲಿ ದರ್ಶನ್‌ರ ತರಹೇವಾರಿ ಇಮೇಜ್‌ಗಳನ್ನು ಪೋಷಿಸಿರುವ ‘ಗಜ’,

ನವ್ಯಾ ನಾಯರ್ ಅವರ ಮೋಹಕತೆಯ ಕಾರಣದಿಂದಲೂ ಹರಿಕೃಷ್ಣ ಸಂಗೀತ ಸಂಯೋಜನೆಯಲ್ಲಿನ ಹಾಡುಗಳಿಂದಲೂ ಚಿತ್ರರಸಿಕರ ಗಮನಸೆಳೆದಿತ್ತು. ದೇವರಾಜ್‌, ಕೋಮಲ್‌, ಪ್ರದೀಪ್‌ ರಾವತ್ ಹಾಗೂ ಏಕ್ತಾ ಕಪೂರ್‌ ತಾರಾಗಣದಲ್ಲಿರುವ ಪ್ರಮುಖರು.

ದರ್ಶನ್‌ರ ‘ಗಜ’ನಡಿಗೆ ಕೊಂಚ ಮಂಕಾಗಿರುವ ಈ ಹೊತ್ತಿನಲ್ಲಿ, ಹಳೆಯ ನೆನಪುಗಳನ್ನು ಮೆಲುಕು ಹಾಕುವ ರೂಪದಲ್ಲಿ ‘ಗಜ’ ಚಿತ್ರವನ್ನು goo.gl/bqLy8r ಕೊಂಡಿ ಬಳಸಿ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT