ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೀಟರ್-ಇಂದ್ರಾಣಿ ಮುಖಾಮುಖಿ ವಿಚಾರಣೆ?

Last Updated 3 ಸೆಪ್ಟೆಂಬರ್ 2015, 9:38 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಶೀನಾ ಬೊರಾ ಕೊಲೆ ಪ್ರಕರಣ ಸಂಬಂಧ ಸ್ಟಾರ್‌ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಪೀಟರ್‌ ಮುಖರ್ಜಿ ಹಾಗೂ ಅವರ ಪತ್ನಿಯೂ ಆಗಿರುವ ಪ್ರಕರಣದ ಆರೋಪಿ ಇಂದ್ರಾಣಿ ಮುಖರ್ಜಿ ಅವರನ್ನು ಗುರುವಾರವೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಬುಧವಾರ ತಡರಾತ್ರಿ ವರೆಗೆ ಸುಮಾರು 12 ಗಂಟೆಗಳ ಕಾಲ ಪೀಟರ್‌ ಅವರನ್ನು ವಿಚಾರಣೆಗೆ ಒಳಪಡಿಸಿದ್ದ ಪೊಲೀಸರು, ಅವರನ್ನು ಗುರುವಾರ ಮುಂಜಾನೆ ಮತ್ತೆ ಖಾರ್‌ ಠಾಣೆಗೆ ಕರೆಯಿಸಿಕೊಂಡಿದ್ದಾರೆ. ಇದಾದ ಎರಡು ಗಂಟೆಗಳ ಬಳಿಕ ಪೀಟರ್‌ ಅವರ ಪತ್ನಿ ಇಂದ್ರಾಣಿ ಅವರನ್ನು ಖಾರ್ ಠಾಣೆಗೆ ಕರೆತರಲಾಗಿದೆ.

ಪೀಟರ್‌ ಹಾಗೂ ಇಂದ್ರಾಣಿ ಅವರನ್ನು ಮುಖಾಮುಖಿಯಾಗಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಪೀಟರ್‌ ಅವರ ಹೇಳಿಕೆಯನ್ನು ಇಂದ್ರಾಣಿ ಅವರ ಹೇಳಿಕೆ ಜತೆಗೆ ಹೋಲಿಸಿ ಖಚಿತ ಪಡಿಸಿಕೊಳ್ಳಲು ಸ್ಟಾರ್‌ ಇಂಡಿಯಾದ ಮಾಜಿ ಸಿಇಒ ಅವರನ್ನು ಖಾರ್‌ ಠಾಣೆಗೆ ಇಂದು ಮತ್ತೆ ಕರೆಯಿಸಲಾಗಿದೆ’ ಎಂದು ಆ ಅಧಿಕಾರಿ ತಿಳಿಸಿದ್ದಾರೆ.

ಶೀನಾ ಬೊರಾ ಕೊಲೆ ಪ್ರಕರಣ ಸಂಬಂಧ ಇಂದ್ರಾಣಿ ಮುಖರ್ಜಿ ಅವರನ್ನು ಆಗಸ್ಟ್‌ 25 ರಂದು ಪೊಲೀಸರು ಬಂಧಿಸಿದ್ದರು.

ಮೂರು ವರ್ಷಗಳ ಹಿಂದಿನ ಕೊಲೆ ಪ್ರಕರಣ ಭೇದಿಸಲು ಶ್ರಮಿಸುತ್ತಿರುವ ಪೊಲೀಸರು, ಇಂದ್ರಾಣಿ ಹಾಗೂ ಪೀಟರ್ ಅವರಿಗೆ ಒಂದೇ ಬಗೆಯ ಕೆಲವೊಂದಿಷ್ಟು ಪ್ರಶ್ನೆಗಳನ್ನು ಕೇಳಿದ್ದರು. ಇದೀಗ ಅವುಗಳನ್ನು ಪರಸ್ಪರ ಸಮ್ಮುಖದಲ್ಲಿ ಖಚಿತಪಡಿಸಿಕೊಳ್ಳಲು ಪೊಲೀಸರು ಯತ್ನಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT