ಪುಣೆ (ಪಿಟಿಐ): ಇಲ್ಲಿನ ಪ್ರತಿಷ್ಠಿತ ಚಲನ ಚಿತ್ರ ಹಾಗೂ ದೂರದರ್ಶನ ಸಂಸ್ಥೆಗೆ (ಎಫ್ಟಿಟಿಐ) ಬಿಜೆಪಿ ಸದಸ್ಯ ಗಜೇಂದ್ರ ಚೌಹಾಣ್ ಅವರನ್ನು ಅಧ್ಯಕ್ಷರಾಗಿ ನೇಮಿ ಸಿರುವುದರ ವಿರುದ್ಧ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಸೋಮವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಇನ್ನಷ್ಟು ತೀವ್ರಗೊಂಡಿದೆ.

ಇದೊಂದು ರಾಜಕೀಯ ನೇಮಕಾತಿ ಎಂದಿರುವ ವಿದ್ಯಾರ್ಥಿಗಳು, ಸರ್ಕಾರ ಆದೇಶ ಹಿಂದಕ್ಕೆ ಪಡೆಯದಿದ್ದಲ್ಲಿ ಅನಿ ರ್ದಿಷ್ಟ ದಿನಗಳ ಕಾಲ ಪ್ರತಿಭಟನೆ ಮುಂದುವರಿಸುವುದಾಗಿ ತಿಳಿಸಿದ್ದಾರೆ. ಎಫ್ಟಿಟಿಐ ಆಡಳಿತ ಮಂಡಳಿಯ ಎಂಟು ಸದಸ್ಯರಲ್ಲಿ ನಾಲ್ಕು ಜನ ಆರ್ಎಸ್ಎಸ್ ಜತೆ ಸಂಬಂಧ ಹೊಂದಿ ರುವುದು ವಿದ್ಯಾರ್ಥಿಗಳನ್ನು ಕೆರಳಿಸಿದೆ.

ಇವರಲ್ಲಿ ಅನಘಾ ಘಾಯ್ಸಾಸ್ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಸಾಕಷ್ಟು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದಾರೆ. ನರೇಂದ್ರ ಪಾಠಕ್ ಮಹಾರಾಷ್ಟ್ರ ಎಬಿವಿಪಿಯ ಮಾಜಿ ಅಧ್ಯಕ್ಷರು. ಪ್ರಾಂಜಲ್ಲಾಲ್ ಸೈಕಿಯಾ ಆರ್ಎಸ್ಎಸ್ಗೆ ಸಂಬಂಧಿಸಿದ ಸಂಸ್ಥೆ ಯೊಂದರ ಪದಾಧಿ ಕಾರಿಯಾಗಿದ್ದರು. ಮತ್ತೊಬ್ಬ ಸದಸ್ಯ ರಾಹುಲ್ ಸೋಲಾಪುರಕರ್ ಬಿಜೆಪಿ ಜತೆ ನಿಕಟ ಸಂಪರ್ಕ ಹೊಂದಿದ್ದಾರೆ.
ಈ ನಡುವೆ ‘ಸ್ವರಾಜ್ ಅಭಿಯಾನ’ದ ನಾಯಕ ಯೋಗೇಂದ್ರ ಯಾದವ್ ಸೋಮವಾರ ಸಂಸ್ಥೆಗೆ ಭೇಟಿ ನೀಡಿ ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.