ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಣೆ ತಂಡಕ್ಕೆ ತಿವಾರಿ

Last Updated 11 ಫೆಬ್ರುವರಿ 2016, 19:41 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಎಡಗೈ ಬ್ಯಾಟ್ಸ್‌ಮನ್‌ ಸೌರವ್‌ ತಿವಾರಿ ಮತ್ತು ಆಲ್‌ರೌಂಡರ್‌ ಅಲ್ಬಿ ಮಾರ್ಕೆಲ್ ಅವರು ಐಪಿಎಲ್ ಒಂಬತ್ತನೇ ಆವೃತ್ತಿಗೆ ರೈಸಿಂಗ್‌ ಪುಣೆ ಸೂಪರ್‌ಗೇಟ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಇವರು ಹೋದ  ವರ್ಷ ಡೆಲ್ಲಿ ಡೇರ್‌ಡೆವಿಲ್ಸ್ ತಂಡದಲ್ಲಿದ್ದರು.

‘ಪುಣೆ  ಇಬ್ಬರು ಆಟಗಾರರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಬ್ಯಾಟಿಂಗ್ ವಿಭಾಗವನ್ನು ಬಲಗೊಳಿಸುವ ಸಲುವಾಗಿ ಪುಣೆ ಈ ತೀರ್ಮಾನಕ್ಕೆ ಬಂದಿದೆ. ಕೆವಿನ್ ಪೀಟರ್ಸನ್‌, ಮಿಷೆಲ್ ಮಾರ್ಷ್‌, ಮಹೇಂದ್ರ ಸಿಂಗ್ ದೋನಿ, ಆರ್. ಅಶ್ವಿನ್‌ ಮತ್ತು ಅಜಿಂಕ್ಯ ರಹಾನೆ ಅವರಂಥ ಪ್ರಮುಖ ಆಟಗಾರರನ್ನು ಹೊಂದಿರುವ ಕಾರಣ ತಂಡ ಬಲಿಷ್ಠವಾಗಿದೆ’ ಎಂದು ಐಪಿಎಲ್‌ ಮುಖ್ಯಸ್ಥ ರಾಜೀವ್‌ ಶುಕ್ಲಾ ಹೇಳಿದ್ದಾರೆ.

‘ಇವರಿಬ್ಬರೂ ಆಟಗಾರರು ಹಿಂದಿನ ಆವೃತ್ತಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದ್ದರಿಂದ ನಮ್ಮ ತಂಡಕ್ಕೆ ಆಯ್ಕೆ ಮಾಡಿಕೊಂಡೆವು. ಇದರಿಂದ ತಂಡದ ಶಕ್ತಿ ಹೆಚ್ಚಿದೆ’ ಎಂದು ಪುಣೆ ತಂಡದ ಸಿಇಒ ರಘು ಅಯ್ಯರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT