ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರಿಗೂ ಪಾಠ!

Last Updated 21 ಜುಲೈ 2014, 19:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣದ ದೂರು ದಾಖಲಿಸಿಕೊಳ್ಳುವಲ್ಲಿ ಕರ್ತವ್ಯ ಲೋಪ ಮಾಡಿದ ಇನ್‌್ಸಪೆಕ್ಟರ್‌ ಅನ್ನು ಸರ್ಕಾರ ಕೊನೆಗೂ ಅಮಾನತು ಮಾಡಿ ಅವರ ಮೇಲೆ ದೂರು ದಾಖಲಿಸಿದೆ.

ಈ ಹಿಂದೆ, ಅತ್ಯಾಚಾರ ಮತ್ತು ವರದಕ್ಷಿಣೆ ಕಿರುಕುಳದಂತಹ ಸಮಸ್ಯೆಗಳ ಸಂಬಂಧ ದೂರು ದಾಖಲಿಸಿಕೊಳ್ಳುವಲ್ಲಿ ಲೋಪ ಎಸಗಿರುವ ಅನೇಕ ಉದಾಹರಣೆಗಳು ಇದ್ದರೂ, ಈ ಪ್ರಕರಣದಲ್ಲಿ ಯುವತಿಯ ಧೈರ್ಯ ಮತ್ತು ಹೋರಾಟದ ಕಾರಣದಿಂದ ಹಾಗೂ ವಿರೋಧ ಪಕ್ಷಗಳ ಒತ್ತಡದಿಂದ ಲೋಪಕ್ಕೆ ದಂಡಪ್ರಯೋಗ ಆಗಿದೆ.

ಈ ಪ್ರಕರಣ ಪೊಲೀಸರಿಗೂ ಪಾಠವಾಗಿದೆ. ಅಂತೆಯೇ ಸಾರ್ವಜನಿಕರ ಹೋರಾಟಕ್ಕೂ ಒಂದು ಶಕ್ತಿ ತುಂಬಿದೆ. ಇನ್ನು ಮುಂದಾದರೂ ದೂರು ದಾಖಲಿಸುವ ಸಂದರ್ಭ­ದಲ್ಲಿ, ವಿಳಂಬ ಮಾಡದೆ, ಮತ ಭೇದ ಮಾಡದೆ, ಯಾವುದೇ ಒತ್ತಡ ಆಮಿಷಗಳಿಗೆ ಮಣಿಯದೆ ಪೊಲೀಸರು ನ್ಯಾಯಯುತವಾಗಿ ಸ್ಪಂದಿಸುವುದು ಅಗತ್ಯ.

ಅಪರಾಧ ನಿಗ್ರಹ ಮತ್ತು ನಿಯಂತ್ರಣ­ದಲ್ಲಿ ಪೊಲೀಸರ ಸೇವೆ ಶ್ಲಾಘ­ನೀಯ ಆದರೂ ಕೆಲವೊಂದು ಪ್ರಕರಣಗಳಲ್ಲಿ ಕೆಲವರು ಮಾಡುವ ಕರ್ತವ್ಯಲೋಪಕ್ಕೆ, ಇಲಾಖೆ ಅನುಮಾನದ ಸುಳಿಗೆ ಸಿಲುಕುತ್ತದೆ. ಹೆಣ್ಣು ಮಕ್ಕಳ ರಕ್ಷಣೆಯಲ್ಲಿ ಪೊಲೀಸರು ತಾರತಮ್ಯ ಎಸಗದಿರಲಿ.
–ಅನಾರ್ಕಲಿ ಸಲೀಂಚಿಣ್ಯ, ಶ್ರೀರಂಗಪಟ್ಟಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT