ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಲಿಯೊ ನಿರ್ಮೂಲನೆ: ಪಾಕ್‌ಗೆ ಸಹಕಾರ

Last Updated 24 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪೋಲಿಯೊ ನಿರ್ಮೂಲನೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಪಾಕಿಸ್ತಾನಕ್ಕೆ ಭಾರತ  ತಿಳಿಸಿದೆ. ಜಗತ್ತಿನ ಶೇ 85ರಷ್ಟು ಪೋಲಿಯೊ ಪ್ರಕರಣಗಳು ನೆರೆಯ ಪಾಕಿಸ್ತಾನ­ದ­ಲ್ಲಿಯೇ ವರದಿಯಾಗುತ್ತಿದೆ. ಆ ನೆಲದಲ್ಲಿ ಪೋಲಿಯೊ ನಿರ್ಮೂಲನೆಗೆ ನೆರವಾಗುವ ಕಳಕಳಿ ಹೊಂದಿರು­ವುದಾಗಿ ಭಾರತ ಹೇಳಿದೆ.

ವಿಶ್ವ ಪೋಲಿಯೊ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾ­ಡಿದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು, ಪೋಲಿಯೊ ನಿರ್ಮೂಲನೆ ವಿಚಾರವಾಗಿ ಎರಡೂ ರಾಷ್ಟ್ರಗಳ ನಡುವೆ ಈ ಹಿಂದೆ ನಡೆಸಲಾಗಿದ್ದ ಪ್ರಯತ್ನಗಳು ಮಹತ್ವದ ಪ್ರಗತಿ ಕಂಡಿಲ್ಲ ಎಂದರು.

‘ಪಾಕಿಸ್ತಾನದ ಇತ್ತೀಚಿನ ಯೋಜನೆ ಸಮರ್ಪಕವಾಗಿದೆ. ಪೋಲಿಯೊ ನಿರ್ಮೂ­ಲನೆಗೆ ತಳಮಟ್ಟದಿಂದ ಪ್ರಯತ್ನ­ಗಳನ್ನು ನಡೆಸುತ್ತಿದೆ. ಭಾರತ­ದಲ್ಲಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿದ್ದ ಸಾಮಾಜಿಕ ಸಂಘಟನೆ­ಗ­ಳನ್ನು ಒಳಗೊಳ್ಳುವ ಕುರಿತೂ ಮಾತು­ಗಳು ಕೇಳಿಬರುತ್ತಿದೆ’ ಎಂದು ಹೇಳಿದರು.

ಪೋಲಿಯೊ ನಿರ್ಮೂಲನೆ ಸಂಬಂಧ ಸಹಕಾರ ಸ್ಥಾಪನೆಗಾಗಿ 2012 ಸೆಪ್ಟೆಂಬರ್‌­ನಿಂದಲೇ ವಿದೇಶಾಂಗ ಸಚಿ­ವರ ಮಟ್ಟದ ಜಂಟಿ ಮಾತುಕತೆಗಳು  ನಡೆಯುತ್ತಿದ್ದರೂ ಮಹತ್ವದ ಪ್ರಗತಿ ಇದುವರೆಗೂ ಕಂಡಿಲ್ಲ ಎಂದ ಅವರು, ಪಾಕ್‌ಗೆ ಸಹಾಯಹಸ್ತ ಚಾಚುವ ಭರವಸೆ ನೀಡಿದರು.  ಪಾಕಿಸ್ತಾನ­ದಿಂ­ದಾಗಿ ದೇಶದಲ್ಲಿ ಪೋಲಿಯೊ ಮತ್ತೆ ಹರಡುವ ಅಪಾಯವಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT