ಧಾರವಾಡ: ಇದೇ 17ರಿಂದ 19ರವರೆಗೆ ನಗರದ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ನಡೆಯಲಿರುವ ಎರಡನೇ ಆವೃತ್ತಿಯ ‘ಧಾರವಾಡ ಸಾಹಿತ್ಯ ಸಂಭ್ರಮ’ ಕಾರ್ಯಕ್ರಮದಲ್ಲಿ ಭಾಗವಹಿಸಲು ಈಗಾಗಲೇ 250ಕ್ಕೂ ಹೆಚ್ಚು ಮಂದಿ ಹೆಸರು ನೋಂದಾಸಿರುವುದರಿಂದ ನೋಂದಣಿಯನ್ನು ಸ್ಥಗಿತಗೊಳಿಸಲಾಗಿದೆ ಎಂದು ‘ಧಾರವಾಡ ಸಾಹಿತ್ಯ ಸಂಭ್ರಮ’ ಟ್ರಸ್್ಟ ಅಧ್ಯಕ್ಷ ಡಾ.ಗಿರಡ್ಡಿ ಗೋವಿಂದರಾಜ ತಿಳಿಸಿದ್ದಾರೆ.

ಭವನದಲ್ಲಿ ಇರುವ ಆಸನದ ವ್ಯವಸ್ಥೆ ಕೇವಲ 500. ಇದರಲ್ಲಿ ಸಂಪನ್ಮೂಲ ವ್ಯಕ್ತಿಗಳಿಗೆ 90, ವಿಶೇಷ ಆಹ್ವಾನಿತರಿಗೆ 40, ಸ್ಥಳೀಯ ಅತಿಥಿಗಳಿಗೆ 50, ಮಾಧ್ಯಮದವರಿಗೆ 30, ಸಂಘಟಕರಿಗೆ 20, ಪ್ರಾಯೋಜಕರಿಗೆ 20 ಈ ರೀತಿ 250 ಆಸನಗಳನ್ನು ಕಾಯ್ದಿರಿಸಲಾಗಿದೆ. ಪ್ರತಿನಿಧಿಗಳಿಗೆ 200 ಪ್ರವೇಶಗಳನ್ನು ಕಾಯ್ದಿರಿಸಲಾಗಿತ್ತು. ಆದರೆ, ಈಗಾಗಲೇ ಪ್ರತಿನಿಧಿಗಳಾಗಿ ನೋಂದಾಯಿಸಿದವರ ಸಂಖ್ಯೆ 250 ಮೀರಿದೆ. ಸಭಾಭವನದಲ್ಲಿ ಹೆಚ್ಚಿನ ಸ್ಥಳಾವಕಾಶವಿಲ್ಲದ್ದರಿಂದ ಪ್ರತಿನಿಧಿಗಳ ನೋಂದಣಿಯನ್ನು ಅನಿವಾರ್ಯವಾಗಿ ನಿಲ್ಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಆಸಕ್ತರಿಗೆ ಸಭಾಭವನದ ಹೊರಗಿನ ಆವರಣದಲ್ಲಿ ಎಲ್.ಸಿ.ಡಿ. ಪರದೆ ಅಳವಡಿಸಿ ಕಲಾಪ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುವುದು ಎಂದೂ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.