ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನೆ ಪ್ರಶ್ನಿಸಿ, ವಿವಾದಕ್ಕೀಡಾದ ಸಂಸದ

Last Updated 22 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ಕುಲಪತಿ ರಾಜೀ­ನಾಮೆಗೆ ಆಗ್ರಹಿಸಿ ಜಾಧವಪುರ ವಿಶ್ವ­ವಿದ್ಯಾ­ಲಯದ ವಿದ್ಯಾರ್ಥಿಗಳು ಕಳೆದ ನಾಲ್ಕು ದಿನಗಳಿಂದ ನಡೆಸುತ್ತಿ­ರುವ ಪ್ರತಿ­ಭಟನೆಯನ್ನು ಫೇಸ್‌­ಬುಕ್‌­ನಲ್ಲಿ ಪ್ರಶ್ನಿ­ಸಿದ ತೃಣ­ಮೂಲ ಕಾಂಗ್ರೆಸ್‌ ಸಂಸದ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ  ಸೋದರಳಿಯ ಅಭಿಷೇಕ್‌ ಬ್ಯಾನರ್ಜಿ ಅವರು ವಿವಾದಕ್ಕೀಡಾಗಿ­ದ್ದಾರೆ.

‘ಕಾಲೇಜಿನೊಳಗೆ ಮದ್ಯ ಹಾಗೂ ಮಾದಕವಸ್ತುಗಳಿಗೆ ನಿಷೇಧ ಹೇರಿದ್ದ­ರಿಂದ ಜಾಧವಪುರ ವಿಶ್ವವಿದ್ಯಾ­ಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾ­ರೆಯೇ?’ ಎಂದು ಅಭಿ­ಷೇಕ್‌ ಬ್ಯಾನರ್ಜಿ ಅವರು ಫೇಸ್‌ಬುಕ್‌ನಲ್ಲಿ ಪ್ರಶ್ನಿಸಿದ್ದರು.
ಸೆಪ್ಟೆಂಬರ್‌ 17ರಂದು ವಿದ್ಯಾರ್ಥಿಗಳ ಮೇಲೆ ಪೊಲೀಸರ ಹಲ್ಲೆ ವಿರೋಧಿಸಿ, ಕುಲಪತಿ
, ಕುಲಪತಿ ಪರವಾಗಿರುವವರು ಹಾಗೂ ರಿಜಿಸ್ಟ್ರಾರ್‌ ರಾಜೀನಾಮೆಗೆ ಆಗ್ರ­­­ಹಿಸಿ ಜಾಧವಪುರ ವಿಶ್ವವಿದ್ಯಾ­ಲ­ಯದ ಸಾವಿರಾರು  ವಿದ್ಯಾರ್ಥಿಗಳು ಕೋಲ್ಕ­ತ್ತದ ರಸ್‍ತೆಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. 

ತರಗತಿ­ಗಳನ್ನು ಬಹಿಷ್ಕ­ರಿ­ಸು­ತ್ತಿದ್ದು, ಸಮೂಹ ಸಂವಹನದ ವಿದ್ಯಾ­ರ್ಥಿಗಳು ಸೆಪ್ಟೆಂಬರ್‌ 18ರಂದು ಪರೀಕ್ಷೆ ಬಹಿಷ್ಕರಿಸಿದ್ದರು. ಅಭಿಷೇಕ್‌ ಹೇಳಿಕೆಗೆ ವಿಚಾರ­ವಾದಿ­­ಗಳಿಂದ ಹಾಗೂ ವಿದ್ಯಾರ್ಥಿ­ಗಳಿಂದ ತೀವ್ರ ವಿರೋಧ ವ್ಯಕ್ತ­ವಾ­ದ್ದರಿಂದ ಬಳಿಕ ಅವರು ಸಮ­ಜಾ­ಯಿಷಿ ನೀಡಿದ್ದಾರೆ. ‘ವಿದ್ಯಾರ್ಥಿ­ಗಳ ಪ್ರತಿ­ಭ­ಟನೆಯನ್ನು ಬೆಂಬ­ಲಿಸುತ್ತೇನೆ ಆದರೆ ಶೈಕ್ಷಣಿಕ ಕೇಂದ್ರ­ಗಳಲ್ಲಿ ಗೂಂಡಾಗಿರಿ­ಯನ್ನು ವಿರೋ­ಧಿ­ಸುತ್ತೇನೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಸ್ವತಂತ್ರ ತನಿಖಾ ಆಯೋಗ
ಜಾಧವ­ಪುರ ವಿಶ್ವವಿದ್ಯಾಲಯದ ವಿದ್ಯಾ­ರ್ಥಿನಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆಗಾಗಿ ಪಶ್ಚಿಮ ಬಂಗಾಳ ಸರ್ಕಾರ ಸ್ವತಂತ್ರ ಐವರು ಸದಸ್ಯರ ತನಿಖಾ ಮಂಡಳಿಯನ್ನು ಸೋಮವಾರ ರಚಿಸಿದೆ.

ಕಿರುಕುಳಕ್ಕೊಳಗಾದ ವಿದ್ಯಾರ್ಥಿನಿ ಯನ್ನು ಭೇಟಿ ಮಾಡಿದ ಬಳಿಕ ಮಾತ­ನಾಡಿದ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಅವರು,  ‘ಕೋಲ್ಕತ್ತ ವಿಶ್ವವಿ­ದ್ಯಾ­ಲ­ಯದ ಕುಲಪತಿ ಸುರಂಜನ್‌ ದಾಸ್‌ ತನಿಖಾ ಮಂಡಳಿ ಮುಖ್ಯಸ್ಥರಾಗಿದ್ದು, 4 ದಿನ­ದೊಳಗೆ ವರದಿ ಸಲ್ಲಿಸಲಿದ್ದಾರೆ’ ಎಂದು ತಿಳಿಸಿದರು.

ಈ ಮಧ್ಯೆ ಯುವತಿ ತಂದೆ ಮುಖ್ಯ­ಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ, ತನಿಖಾ ಮಂಡಳಿಯಲ್ಲಿ ವಿಶ್ವಾಸವಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದ್ದಾರೆ.

‘ನ್ಯಾಯ ದೊರಕಿಸಿಕೊಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಈ ತನಿಖಾ ಮಂಡಳಿಯಲ್ಲಿ ನನಗೆ ನಂಬಿಕೆ ಇದೆ. ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದು ವಿಶ್ವವಿದ್ಯಾಲಯದ ಕೆಲಸ ಯಥಾಸ್ಥಿತಿಯಲ್ಲಿ ಮುಂದು­ವರಿ­ಸಲು ನೆರವಾಗಬೇಕು’ ಎಂದು ಅವರು ಹೇಳಿದ್ದಾರೆ.

ಹಿನ್ನೆಲೆ: ಆಗಸ್ಟ್‌ ತಿಂಗಳಲ್ಲಿ ವಿದ್ಯಾರ್ಥಿನಿ­ಯೊಬ್ಬಳನ್ನು ವಿದ್ಯಾರ್ಥಿ ನಿಲಯಕ್ಕೆ ಎಳೆ­ದೊಯ್ದು ಲೈಂಗಿಕ ದೌರ್ಜನ್ಯ ನಡೆಸಲಾಗಿತ್ತು. ಪ್ರಕರಣದ ವಿಚಾರಣೆಗೆ ಸ್ವತಂತ್ರ ತನಿಖಾ ಮಂಡ­ಳಿ­ ರಚಿಸಬೇಕೆಂದು ಒತ್ತಾಯಿಸಿ ವಿದ್ಯಾರ್ಥಿ­­ಗಳು ಪ್ರತಿಭಟನೆ ನಡೆ­ಸು­ತ್ತಿದ್ದರು. ಈ ವೇಳೆ ವಿ.ವಿ ಕುಲಪತಿ ಅಭಿಜಿತ್‌ ಚಕ್ರವರ್ತಿ ಪೊಲೀಸರನ್ನು ಕರೆಸಿದ್ದ­ರಿಂದ ಪೊಲೀಸರು ವಿದ್ಯಾರ್ಥಿ­ಗಳ ಮೇಲೆ ಹಲ್ಲೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT