ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಕನ್ನಡ ಕೀಲಿಮಣೆ ಬೇಕು

Last Updated 21 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

‘ಕನ್ನಡದ ಈ ಆ್ಯಪ್ ಕಬ್ಬಿಣದ ಕಡಲೆ’ (ಪ್ರ.ವಾ., ಸೆ. 21) ವರದಿಯಲ್ಲಿ ನಾನು ವಿನ್ಯಾಸಗೊಳಿಸಿದ ಕನ್ನಡ ಕೀಲಿ­ಮಣೆಯ ಪ್ರಸ್ತಾಪವಿರುವುದರಿಂದ ಈ ಪತ್ರ. ನಾನು ಕನ್ನಡ ಕೀಲಿಮಣೆಯ ವಿನ್ಯಾಸವನ್ನು ರೂಪಿ­­ಸುವಾಗ ಎರಡೂ ಕೈಗಳನ್ನು ಬಳಸಿ QWERTY ಕೀಲಿಮಣೆ­ಯಲ್ಲಿ ಟೈಪ್ ಮಾಡುವ ವಿಧಾನ ಮನಸ್ಸಿನಲ್ಲಿತ್ತು.

ರೋಮನ್ ಲಿಪಿಯ 26 ಅಕ್ಷರಗಳ ಮಿತಿಯಲ್ಲಿ ರೂಪುಗೊಂಡಿದ್ದ QWERTY ಕೀಲಿಮಣೆಯಲ್ಲಿ ಕನ್ನಡದ ಎಲ್ಲಾ ಅಕ್ಷರಗಳನ್ನು ಮೂಡಿಸುವುದಕ್ಕೆ ಶಿಫ್ಟ್ ಬಳಸಿ­ಕೊಳ್ಳುವುದು ಅಗತ್ಯವೂ ಆಗಿತ್ತು. ಎಲ್ಲದ­ಕ್ಕಿಂತ ಹೆಚ್ಚಾಗಿ ಇದು ಭೌತಿಕವಾದ ಕೀಲಿಮಣೆ. ಇದನ್ನೇ ಮೊಬೈಲ್ ಫೋನ್ ಅಥವಾ ಟ್ಯಾಬ್ಲೆಟ್‌­ಗಳಲ್ಲಿ ಟೈಪ್ ಮಾಡುವುದಕ್ಕೂ ಅನ್ವಯಿಸುವುದು ಸರಿಯಲ್ಲ.

ಮೊಬೈಲ್ ಫೋನ್ ಮತ್ತು ಟ್ಯಾಬ್ಲೆಟ್‌ಗಳಲ್ಲಿ ಟೈಪ್ ಮಾಡುವ ಕ್ರಿಯೆಯಲ್ಲಿ ಬಳಕೆಯಾಗು­ವುದು ಒಂದು ಬೆರಳೇ ಹೊರತು ಎರಡೂ ಕೈಗಳಲ್ಲ. ಎಲ್ಲ­ದಕ್ಕಿಂತ ಹೆಚ್ಚಾಗಿ ಈಗಿನ ಟಚ್ ಸ್ಕ್ರೀನ್ ಮೊಬೈಲ್ ಫೋನ್‌ಗಳಲ್ಲಿರುವುದು ಭೌತಿಕವಾದ ಕೀಲಿಮಣೆ­ಯಲ್ಲ. ಆದ್ದರಿಂದ ಅದಕ್ಕೆ ಅನುಕೂಲ­ವಾಗುವಂತೆ ಹೊಸ ಕನ್ನಡ ಕೀಲಿಮಣೆ ವಿನ್ಯಾಸ ಮಾಡ­ಬೇಕು. ಇಂಗ್ಲಿಷ್‌ನಲ್ಲಿ QWERTY ಕೀಲಿ­ಮಣೆ­ಯನ್ನೇ ಮೊಬೈಲ್ ಫೋನುಗಳು ಒದಗಿಸು­ತ್ತಿವೆ.

ಆದ್ದ­ರಿಂದ ಕನ್ನಡಕ್ಕೂ ಅದೇ ಮಾದರಿಯನ್ನೇ ಏಕೆ ಅನ್ವಯಿಸ­ಬಾ­ರದು ಎಂಬ ಪ್ರಶ್ನೆ ಅನೇಕರ ಮನಸ್ಸಿ­ನ­ಲ್ಲಿರ­ಬ­ಹುದು. QWERTY ಕೀಲಿಮಣೆ­ಯಲ್ಲಿ  ಶಿಫ್ಟ್ ಬಳಸದೆಯೂ ರೋಮನ್ ಲಿಪಿಯ ಎಲ್ಲಾ 26 ಅಕ್ಷರಗಳನ್ನೂ ಟೈಪ್ ಮಾಡಬಹುದು. ಆದರೆ ಕನ್ನಡದಲ್ಲಿ ಶಿಫ್ಟ್ ಬಳಸದೇ ಇದ್ದರೆ ಅನೇಕ ಅಕ್ಷರ­ಗಳನ್ನು ಮೂಡಿಸಲು ಸಾಧ್ಯವಿಲ್ಲ.

ಆದ್ದರಿಂದ ಇಂಗ್ಲಿಷ್‌ನ ಮಾದರಿಯನ್ನು ಕನ್ನಡಕ್ಕೆ ಅನ್ವಯಿಸು­ವುದು ಸರಿಯಲ್ಲ. ತಂತ್ರಜ್ಞಾನ ಬೆಳೆ­ದಂತೆ ಭಾಷೆ­ಯನ್ನು ಬಳಸುವು­ದಕ್ಕೆ ಅನುವು ಮಾಡಿಕೊಡುವ ಪರಿ­ಕರಗಳ ಸ್ವರೂಪ ಬದಲಾ­ಗು­ತ್ತದೆ. ಇದಕ್ಕೆ ಅನು­ಗುಣ­ವಾಗಿ ಬಳಕೆಯ ವಿಧಾ­ನವೂ ಮಾರ್ಪಾ­ಡಾ­ಗು-­­ತ್ತದೆ. ಇದನ್ನು ಗಮನ­ದಲ್ಲಿಟ್ಟು­ಕೊಂಡು ಕೀಲಿ­ಮ­ಣೆಯ ವಿನ್ಯಾ­ಸವೂ ಬದ­ಲಾಗ­ಬೇಕು. ಒಂದು ಬೆರಳಿ­ನಲ್ಲಿ ಟೈಪಿ­ಸುವುದಕ್ಕೆ ಅನು­ಕೂಲ­ವಾಗುವ ಹೊಸ ಕನ್ನಡ ಕೀಲಿಮಣೆ­ಯನ್ನು ವಿನ್ಯಾಸಗೊಳಿಸುವ ನಿಟ್ಟಿನಲ್ಲಿ ಯುವ ತಂತ್ರಜ್ಞರು ಆಲೋಚಿಸಬೇಕು.
–ಕೆ.ಪಿ. ರಾವ್, ಉಡುಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT