ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಮಾಣವಚನ: ಎಲ್ಲೆಡೆ ಸರ್ಪಗಾವಲು

Last Updated 23 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್‌ಎಸ್‌): ನರೇಂದ್ರ ಮೋದಿ ಅವರ ಪ್ರಮಾಣವಚನ ಸಮಾರಂಭಕ್ಕೆ ಸರ್ಪ-­ಗಾವಲು ಹಾಕಲಾಗುತ್ತಿದೆ. ರೈಸಿನಾ ಹಿಲ್ಸ್‌ ಸುತ್ತಮುತ್ತ  ಬಿಗಿ ಭದ್ರತೆ ಒದಗಿ­ಸಲಾಗುತ್ತದೆ. ಸೇನಾ ಹೆಲಿ­ಕಾಪ್ಟರ್‌ಗಳು ಗಸ್ತು  ನಡೆಸಲಿವೆ.

‘ರಾಷ್ಟ್ರಪತಿ ಭವನದ ಸುತ್ತಮುತ್ತ ಇರುವ ಕಚೇರಿಗಳನ್ನು ಈ ತಿಂಗಳ 26ರ ಮಧ್ಯಾಹ್ನ ಒಂದು ಗಂಟೆಗೆ ಮುಚ್ಚಲಾಗುತ್ತದೆ. ಗಣರಾಜ್ಯೋತ್ಸವದ ಪಥ ಸಂಚಲನಕ್ಕೆ ನೀಡುವ ರೀತಿಯಲ್ಲಿಯೇ ಮೋದಿ ಪ್ರಮಾಣವಚನ ಸಮಾರಂಭಕ್ಕೆ  ಬಿಗಿ ಭದ್ರತೆ ನೀಡಲಾಗುತ್ತದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭದ್ರತಾ ಕ್ರಮದ ಭಾಗವಾಗಿ ರೈಸಿನಾ ಹಿಲ್ಸ್‌ ಸುತ್ತಲಿನ ರಸ್ತೆಗಳಿಗೆ ತಡೆಗೋಡೆ ಗಳನ್ನು ಹಾಕಲಾಗುತ್ತದೆ. ಅರೆಸೇನಾ ಪಡೆ, ದೆಹಲಿ ಪೊಲೀಸ್‌್ ಕಮಾಂಡೊಗಳ ಜತೆಗೆ ಎನ್‌ಎಸ್‌ಜಿ ಶಾರ್ಪ್‌  ಶೂಟರ್‌­ಗಳನ್ನು ನಿಯೋಜಿಸ­ಲಾಗುತ್ತದೆ. ಸಮಾ­ರಂಭ ನಡೆಯುವ ಸ್ಥಳವನ್ನು ಶ್ವಾನದಳ, ಬಾಂಬ್‌ ನಿಷ್ಕ್ರಿಯ ದಳದಿಂದ ತಪಾಸಣೆ ಮಾಡಿಸ­ಲಾಗು­ತ್ತದೆ.

‘ರಾಷ್ಟ್ರಪತಿ ಭವನದ ಸುತ್ತಮುತ್ತ ಮಾತ್ರವಲ್ಲ, ವಿದೇಶಿ ಗಣ್ಯರು ತಂಗುವ ಹೊಟೆಲ್‌ಗಳಿಗೂ ಬಿಗಿ ಭದ್ರತೆ ಒದಗಿ­ಸಲಾ­ಗುತ್ತದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿರ್ಬಂಧ: ಮೋದಿ ಅವರ ಪ್ರಮಾಣ­ವಚನ ಸ್ವೀಕಾರ ಸಮಾರಂಭದ ಸಿದ್ಧತೆ ಹಿನ್ನೆಲೆಯಲ್ಲಿ ಈ ತಿಂಗಳ 24, 25ರಂದು ರಾಷ್ಟ್ರಪತಿ ಭವನದಲ್ಲಿ ಸಾರ್ವ­ಜನಿಕರ ಭೇಟಿಯನ್ನು ನಿರ್ಬಂಧಿಸಲಾಗಿದೆ.

ಸಕಲ ಸಜ್ಜು: ಪ್ರಧಾನಿಯವರ ಅಧಿಕೃತ ನಿವಾಸ 7 ರೇಸ್‌ ಕೋರ್ಸ್‌್ ರಸ್ತೆ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಸುಣ್ಣ ಬಣ್ಣ ಬಳಿದು­ಕೊಂಡು ಸಿಂಗಾರಗೊಂಡಿದೆ. 

‘ಒಂದು ವೇಳೆ ಮೋದಿ ಈ ತಿಂಗಳ 26ರಂದು ಇಲ್ಲಿಗೆ ಬಂದಲ್ಲಿ ಮೂರನೇ ನಂಬರಿನ ಬಂಗಲೆ­ಯಲ್ಲಿ ವಾಸ್ತವ್ಯ ಹೂಡ­ಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ಮೋದಿ ಅವರ ಅಭಿರುಚಿಗೆ ಅನು­ಗುಣ­­ವಾಗಿ ನಾವು ಬಂಗಲೆಯನ್ನು ಸಿಂಗ­ರಿಸುತ್ತೇವೆ. ಈವರೆಗೆ ಹೊರಾಂಗಣದ ನವೀಕರಣ ಕಾರ್ಯ ಮಾತ್ರ ನಡೆದಿದೆ’ ಎಂದೂ ಅವು ತಿಳಿಸಿವೆ.

ಈ ತಿಂಗಳ 16ರಂದು ಲೋಕಸಭೆ ಚುನಾ­ವಣೆ ಫಲಿತಾಂಶ ಹೊರಬಿದ್ದ ತಕ್ಷಣವೇ ನವೀಕರಣ ಕಾರ್ಯ ನಡೆಯುತ್ತಿದೆ.
ಇಲ್ಲಿನ ಎಲ್ಲ ಬಂಗಲೆಗಳು ಹಾಗೂ ಕಾಂಪೌಂಡ್‌ ಗೋಡೆಗಳಿಗೆ ಹೊಸದಾಗಿ ಬಣ್ಣ ಬಳಿಯಲಾಗಿದೆ. ಕೈತೋಟಗಳನ್ನು ಅಂದಗೊಳಿಸಲಾಗಿದೆ. ಹೂಕುಂಡ­ಗಳನ್ನೂ ಸಿಂಗರಿಸಲಾಗಿದೆ.


ಟಿಎಂಸಿಯಿಂದ ಸಚಿವ ಹಾಜರಿ
ಕೋಲ್ಕತ್ತ ವರದಿ: ಮೋದಿ ಪ್ರಮಾಣ­ವಚನ ಸಮಾರಂಭದಲ್ಲಿ ಪಶ್ಚಿಮ­ಬಂಗಾಳ  ಹಣಕಾಸು ಸಚಿವ ಅಮಿತ್‌್ ಮಿತ್ರಾ ಹಾಗೂ ಟಿಎಂಸಿ ಪ್ರಧಾನ ಕಾರ್ಯದರ್ಶಿ ಮುಕುಲ್‌ ರಾಯ್‌ ಭಾಗವಹಿಸುವರು.

ಬಂಗಾಳ ಸಿಪಿಎಂ ಅನುಪಸ್ಥಿತಿ
ನರೇಂದ್ರ ಮೋದಿ ಅವರ ಪ್ರಮಾಣ­ವಚನ ಸಮಾರಂಭಕ್ಕೆ ಸಿಪಿಎಂ ಪಶ್ಚಿಮ­ಬಂಗಾಳ ಘಟಕದಿಂದ ಯಾರೂ ಭಾಗವಹಿಸುತ್ತಿಲ್ಲ.
‘ಈ ಹಿಂದೆ ಕೂಡ ಬಿಜೆಪಿ ಪ್ರಧಾನಿ ಪ್ರಮಾಣವಚನ ಸಮಾರಂಭವನ್ನು ಬಹಿ­ಷ್ಕರಿಸಿದ್ದೆವು. ಈಗ ಮೋದಿ ಅವರ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಕೂಡ ರಾಜ್ಯ ಘಟಕದಿಂದ ಯಾರೂ ಭಾಗ­ವಹಿ­ಸುತ್ತಿಲ್ಲ’ ಎಂದು ಸಿಪಿಎಂ ಪಾಲಿಟ್‌­ಬ್ಯುರೊ ಸದಸ್ಯ ಸೂರ್ಯಕಾಂತ್‌್ ಮಿಶ್ರಾ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.



 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT