ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿ ಹಿಂದಿರುಗಿಸಿದ ಸಾಹಿತಿ ಅಶೋಕ್‌ ವಾಜಪೇಯಿ

Last Updated 7 ಅಕ್ಟೋಬರ್ 2015, 10:36 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣತೆ ಹಾಗೂ ಕೋಮುವಾದವನ್ನು ಪ್ರತಿಭಟಿಸಿ ಖ್ಯಾತ ಹಿಂದಿ ಸಾಹಿತಿ ಅಶೋಕ್‌ ವಾಜಪೇಯಿ ಅವರು  ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು  ಮರಳಿಸಿದ್ದಾರೆ.

ದೇಶದಲ್ಲಿ ಹೆಚ್ಚುತ್ತಿರುವ ಕೋಮುವಾದಿ ಪ್ರಕರಗಳು ಮತ್ತು ವಿಚಾರವಾದಿಗಳ  ಹತ್ಯೆ  ಖಂಡಿಸಿ ಅವರು ಪ್ರಶಸ್ತಿಯನ್ನು ಹಿಂದಿರುಗಿಸಿದ್ದಾರೆ.

ಇಷ್ಟೆಲ್ಲ ಪ್ರಕರಣಗಳು ನಡೆಯುತ್ತಿದ್ದರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೌನವಾಗಿರುವುದೇಕೆ ಎಂದು ಅಶೋಕ್‌ ವಾಜಪೇಯಿ ಪ್ರಶ್ನಿಸಿದ್ದಾರೆ.

ಕೋಮುವಾದಿ ಪ್ರಕರಣಗಳ ಬಗ್ಗೆ ರಾಜಕೀಯ ನಾಯಕರು ಮತ್ತು ಕೇಂದ್ರ ಮಂತ್ರಿಗಳು ನೀಡುತ್ತಿರುವ ಹೇಳಿಕೆಗಳು ಮನಸ್ಸಿಗೆ ನೋವು ತಂದಿವೆ ಎಂದು ವಾಜಪೇಯಿ ತಿಳಿಸಿದ್ದಾರೆ.

74 ವರ್ಷದ ಅಶೋಕ್‌ ವಾಜಪೇಯಿ ಕೇಂದ್ರ ಸಂಸ್ಕೃತಿ ಇಲಾಖೆಗೆ ಪತ್ರ ಬರೆದು ಪ್ರಶಸ್ತಿಯನ್ನು ವಾಪಾಸು ನೀಡಿದ್ದಾರೆ.

ನಿನ್ನೆ ಖ್ಯಾತ ಲೇಖಕಿ ಹಾಗೂ ಪಂಡಿತ ಜವಾಹರಲಾಲ್‌ ನೆಹರೂ ಅವರ ಸಹೋದರಿಯ ಪುತ್ರಿ ನಯನತಾರಾ ಸೆಹಗಲ್‌ ಅವರು 29 ವರ್ಷಗಳ ಹಿಂದೆ ತಮಗೆ ದೊರೆತ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಮರಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT