ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಕೃತ ವಿಶ್ವವಿದ್ಯಾಲಯ ಆರಂಭಿಸಿ

ಪ್ರಾಕೃತ ಪರೀಕ್ಷಾ ಘಟಿಕೋತ್ಸವದಲ್ಲಿ ಡಾ.ಪಾಟೀಲ ಆಗ್ರಹ
Last Updated 28 ನವೆಂಬರ್ 2015, 19:36 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ‘ಸಿಂಧು ಸಂಸ್ಕೃತಿಯ ಕಾಲದಿಂದಲೇ ಪ್ರಾಕೃತ ಭಾಷೆ ಬಳಕೆಯಲ್ಲಿದ್ದ ಬಗ್ಗೆ ಉಲ್ಲೇಖವಿದೆ. ಅಂದು ಪ್ರಾಕೃತ ಭಾಷೆ  ಜನಸಾಮಾನ್ಯರ ಭಾಷೆಯಾಗಿದ್ದರಿಂದ ಭಗವಾನ್‌ ಮಹಾವೀರರು ತಮ್ಮ ಉಪದೇಶದ ಭಾಷೆಯನ್ನಾಗಿ ಇದನ್ನು ಸ್ವೀಕರಿಸಿದ್ದರು’ ಎಂದು ಧಾರವಾಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಎಸ್‌.ಪಿ. ಪಾಟೀಲ ಹೇಳಿದರು.

ಬಾಹುಬಲಿ ಪ್ರಾಕೃತ ವಿದ್ಯಾಪೀಠ, ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನ ಸಂಸ್ಥೆಯ ಸಹಯೋಗದಲ್ಲಿ ಶ್ರವಣಬೆಳಗೊಳ ಸಮೀಪ ಇರುವ ಧವಲತೀರ್ಥಂನಲ್ಲಿ ಶನಿವಾರ ಏರ್ಪಡಿಸಿದ್ದ ‘10ನೇ ಪ್ರಾಕೃತ ಪರೀಕ್ಷಾ ಘಟಿಕೋತ್ಸವ’ದಲ್ಲಿ ಅವರು ಪ್ರಧಾನ  ಭಾಷಣ ಮಾಡಿದರು. ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿದರು.

ಬಾಹುಬಲಿ ವಿದ್ಯಾಪೀಠದ ಕಾರ್ಯಾಧ್ಯಕ್ಷ ಎಂ.ಜೆ. ಇಂದ್ರಕುಮಾರ್‌ ಮಾತನಾಡಿದರು. ಕರ್ನಾಟಕ ಜೈನ ಅಸೋಸಿಯೇಷನ್‌ ಅಧ್ಯಕ್ಷ ಎಸ್‌. ಜಿತೇಂದಕುಮಾರ್‌, ಹಸ್ತಪ್ರತಿ ವಿಭಾಗದ ಮುಖ್ಯಸ್ಥ ಪ್ರೊ.ಬಿ.ಎಸ್‌. ಸಣ್ಣಯ್ಯ, ನಿರ್ದೇಶಕ ಡಾ.ರಮೇಶಚಂದ್‌ ಜೈನ್‌, ಕುಲಸಚಿವ ಎಂ.ಓ. ಮಂಜಯ್ಯ, ಉದಯರಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT