ಶಿರಸಿ (ಉತ್ತರ ಕನ್ನಡ ಜಿಲ್ಲೆ): ತಾಲ್ಲೂಕಿನ ಹತ್ತರಗಿ ಹಾವಳಿಮನೆಯಲ್ಲಿ ಪುರಾತನ ಶಿಲಾಮಯ ದೇವಾಲಯ ಪತ್ತೆಯಾಗಿದೆ. ‘12ನೇ ಶತಮಾನದ ದೇವಾಲಯ ಇದಾಗಿರಬಹುದೆಂದು ಅಂದಾಜಿಸಲಾಗಿದೆ. ಹಾನಗಲ್ ಕದಂಬರು ನಿರ್ಮಿಸಿದ್ದಾರೆ ಎನ್ನಲಾದ ಈ ದೇವಾಲಯ, ಸುಂದರ ಕೆತ್ತನೆಯ 16 ಕಂಬಗಳನ್ನು ಒಳಗೊಂಡಿದೆ. ದೇವಾಲಯದಲ್ಲಿ ಸಭಾ ಮಂಟಪ, ನವರಂಗ, ಗರ್ಭಗುಡಿ ಇದೆ.

ಗರ್ಭಗುಡಿಗೆ ಪ್ರದಕ್ಷಿಣಾ ಪಥವಿದೆ. ದೇವಾಲಯದ ಒಳಗೆ ಸಪ್ತ ಮಾತೃಕೆಯರ ಮೂರ್ತಿ, ಮಹಿಷಾಸುರ ಮರ್ದಿನಿ, ಗಣಪತಿ ಹಾಗೂ ನಾರಾಯಣ ವಿಗ್ರಹಗಳಿವೆ. ಪ್ರಾಚೀನ ಶಿವಲಿಂಗ ಸಹ ಇದೆ’ ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಇತಿಹಾಸ ಸಂಶೋಧಕ ಲಕ್ಷ್ಮೀಶ ಹೆಗಡೆ ಸೋಂದಾ ತಿಳಿಸಿದ್ದಾರೆ.

‘ದೇವಾಲಯ ಎದುರು ಸುಮಾರು 17ನೇ ಶತಮಾನದ ಶಾಸನವೊಂದಿದೆ. ಸುಮಾರು 300 ವರ್ಷಗಳ ಹಿಂದೆ ಈ ದೇವಾಲಯ ಜೀರ್ಣೋದ್ಧಾರಗೊಂಡ ಕುರುಹುಗಳು ಮೇಲ್ನೋಟಕ್ಕೆ ಕಾಣಸಿಗುತ್ತವೆ’ ಎಂದು ಅವರು ಹೇಳಿದ್ದಾರೆ. ಕ್ಷೇತ್ರಾನ್ವೇಷಣೆಯ ಸಂದರ್ಭದಲ್ಲಿ ಸ್ಥಳೀಯರಾದ ಜಿ.ಎನ್. ಹೆಗಡೆ ಹಾವಳಿಮನೆ, ಆನಂದ ಹೆಗಡೆ ಇದ್ದರು. ಬಹುಭಾಗ ಭಗ್ನಗೊಂಡ ದೇವಾಲಯದ ಜೀರ್ಣೋದ್ಧಾರಕ್ಕೆ ಸ್ಥಳೀಯರು ಮುಂದಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.