ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾದೇಶಿಕ ವಿಜ್ಞಾನ ಕೇಂದ್ರ ಉದ್ಘಾಟನೆ

ಪಿಲಿಕುಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ
Last Updated 1 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಮಂಗಳೂರು: ನಗರದ ಹೊರ ವಲಯದಲ್ಲಿರುವ ಪಿಲಿಕುಳದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ಮುಖ್ಯಮಂತ್ರಿ ಸಿದ್ದರಾ­ಮಯ್ಯ ಬುಧ ವಾರ ಉದ್ಘಾಟಿಸಿದರು.

ರಾಷ್ಟ್ರೀಯ ವಿಜ್ಞಾನ ವಸ್ತು ಸಂಗ್ರಹಾಲಯಗಳ ಪರಿಷತ್‌ (ಎನ್‌ಸಿಎಸ್‌ಎಂ), ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಕಾರದಲ್ಲಿ, 50:50ರ ಅನುಪಾತ­ದಲ್ಲಿ  8.5 ಕೋಟಿ ವೆಚ್ಚದಲ್ಲಿ ಈ ಕೇಂದ್ರವನ್ನು ನಿರ್ಮಿಸಲಾಗಿದೆ.

4 ಸಾವಿರ ಚದರ ಅಡಿ ವಿಸ್ತೀರ್ಣ­ದಲ್ಲಿರುವ ಈ ಕೇಂದ್ರದಲ್ಲಿ ಜೀವ ವೈವಿಧ್ಯ, ಮುಂಚೂಣಿ ತಂತ್ರಜ್ಞಾನ ಮತ್ತು ಮೋಜಿನ ವಿಜ್ಞಾನ ಹೆಸರಿನ ಶಾಶ್ವತ ಪ್ರದರ್ಶನಾಲಯಗಳಿವೆ. ‘ಪ್ಲಾನೆಟ್‌ ಅಂಡರ್‌ ಪ್ರೆಷರ್‌’ ಎಂಬ ತಾತ್ಕಾಲಿಕ ಪ್ರದರ್ಶನಾಲಯವೂ ಇದ್ದು, 3ಡಿ ಪ್ರದರ್ಶನಾಲಯ, ತಾರಾ­ಮಂಡಲ, ವಿಜ್ಞಾನ ಪ್ರಾತ್ಯಕ್ಷಿಕೆ ವಿಭಾಗ, ಸೃಜನಾತ್ಮಕ ಕಲಿಕಾ ಕೇಂದ್ರ ಗ್ರಂಥಾ ಲಯ, ಆಕಾಶ ವೀಕ್ಷಣೆಗೆ ದೂರದರ್ಶಕ ಮತ್ತು ವಿಜ್ಞಾನ ಉದ್ಯಾನವನವೂ ಇದೆ. ಜೀವ ವೈವಿಧ್ಯಕ್ಕೆ  ಸಂಬಂಧಿಸಿ ದೇಶದಲ್ಲಿರುವ ಏಕೈಕ ಪ್ರದರ್ಶನಾಲಯ ಎಂಬ ಹೆಗ್ಗಳಿಕೆಯೂ ಈ ಕೇಂದ್ರಕ್ಕೆ ಸಲ್ಲುತ್ತದೆ.

ಮೋಜಿನ ವಿಜ್ಞಾನದ ಪ್ರದರ್ಶನಾ­ಲಯ ವೀಕ್ಷಕರ ಆಸಕ್ತಿ ಕೆರಳಿಸಿ ಅನ್ವೇಷಣೆ ಮತ್ತು ಪ್ರಯೋಗದತ್ತ ಆಕರ್ಷಿಸ­ಬಲ್ಲುದು. 3ಡಿ ಪ್ರದರ್ಶನಾಲಯ, ಮಕ್ಕಳ ಚಟುವಟಿಕೆ ತಾಣ, ವಿಜ್ಞಾನ ಪ್ರಾತ್ಯಕ್ಷಿಕೆ ಕೋಣೆ ಇದೆ. 3ಡಿ ಪ್ರದರ್ಶನಾಲಯದಲ್ಲಿ ಪೋಲರಾಯ್ಡ್‌ ಹಾಳೆಗಳು ಮತ್ತು ಡಿಜಿಟಲ್‌ ತಂತ್ರಜ್ಞಾನದ ಸಮ್ಮಿಲನ ದಿಂದ ಮೂರು ಆಯಾಮದ ವಿಜ್ಞಾನ ಚಲನ ಚಿತ್ರಗಳನ್ನು ಪ್ರದರ್ಶಿಸ ಲಾಗುವುದು. ಈ ವಿಜ್ಞಾನ ಉದ್ಯಾನ ದಲ್ಲಿ ಆಟವಾಡುತ್ತಾ ಮೋಜಿನ ಮೂಲಕ ವಿಜ್ಞಾನ ಕಲಿಯಲು ಅವಕಾಶ ಇದೆ. ಕೇಂದ್ರವನ್ನು ಉದ್ಘಾಟಿಸಿ ಮಾತ ನಾ­ಡಿದ ಸಿ.ಎಂ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಪ್ರಾದೇಶಿಕ ವಿಜ್ಞಾನ ಕೇಂದ್ರ ತೆರೆಯಲು ರಾಜ್ಯ ಸರ್ಕಾರ ನಿರ್ಧರಿಸಿದ್ದು ಕೇಂದ್ರದ ಅನುದಾನ ಅಗತ್ಯವಾಗಿದೆ ಎಂದರು.

ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋ ದ್ಯಮ ಸಚಿವ ಶ್ರೀಪಾದ ನಾಯಕ್‌ , ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಸ್‌. ಆರ್. ಪಾಟೀಲ್‌, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಸ್ಥಳೀಯ ಶಾಸಕರು, ಸಂಸದರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT