ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮಪತ್ರ ಸ್ಪರ್ಧೆ- 2015

Last Updated 28 ಜನವರಿ 2015, 19:30 IST
ಅಕ್ಷರ ಗಾತ್ರ

ಹೂವಿನಂತೆ ಕೋಮಲ, ಜೇನಿನ ಸಿಹಿ, ಕಾಮನಬಿಲ್ಲಿನ ರಂಗು, ಸಂಗೀತದ ಇಂಪು, ಉಪ್ಪಿನ ರುಚಿ, ತೀರದ ನಶೆ, ಔಷಧಿ ಗುಣ, ಹಿಮದ ಶೀತಲತೆ, ಬೆಂಕಿಯ ಕಾವು– ಈ ಎಲ್ಲ ಗುಣಗಳನ್ನೂ ಒಳಗೊಂಡ ಸಂಗತಿ ಯಾವುದು? ‘ಪ್ರೇಮವಲ್ಲದೆ ಮತ್ತಿನ್ನೇನು’ ಎನ್ನುವುದು ಫಟಾಫಟ್‌ ಉತ್ತರವಾದರೆ ನೀವೀಗ ‘ಪ್ರೇಮ ಜ್ವರ’ದಲ್ಲಿ ಬೇಯುತ್ತಿದ್ದೀರಿ ಎಂದೇ ಅರ್ಥ. ಈ ಕಾವನ್ನು ಹೊರಹಾಕುವ ಮೂಲಕ ಪ್ರೇಮಜ್ವರದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲಿಕ್ಕೆ ‘ಪ್ರಜಾವಾಣಿ ಪ್ರೇಮಪತ್ರ ಸ್ಪರ್ಧೆ–2015’ ಅವಕಾಶ ಕಲ್ಪಿಸುತ್ತಿದೆ. ಫೆಬ್ರುವರಿ 14ರ ‘ಪ್ರೇಮಿಗಳ ದಿನ’ವನ್ನು ರಂಗೇರಿಸುವುದು ಈ ಸ್ಪರ್ಧೆಯ ಉದ್ದೇಶ.

ನಿಮ್ಮ ಪ್ರಿಯಕರನಿಗೋ ಪ್ರಿಯತಮೆಗೋ ಬರೆದ ಪತ್ರಗಳು ನಿಮ್ಮ ಅಂತರಂಗವನ್ನು ಕಾಣಿಸುವಂತಿರಲಿ ಹಾಗೂ ಇತರರ ಮೈಮನ ಗಳನ್ನೂ ಬೆಳಗುವಂತಿರಲಿ. ಬಹುಮಾನ ವಿಜೇತ ಪತ್ರಗಳು ಫೆ.12ರಂದು ‘ಕಾಮನಬಿಲ್ಲು’ ಪುರವಣಿಯಲ್ಲಿ ಪ್ರಕಟವಾಗುತ್ತವೆ. ಅಂದಹಾಗೆ, ಪ್ರೇಮಪತ್ರ 600 ಪದಗಳನ್ನು ಮೀರಬಾರದು. ಪತ್ರದ ಜೊತೆಗೆ ನಿಮ್ಮ ಹೆಸರು, ಅಂಚೆ ವಿಳಾಸ, ದೂರವಾಣಿ ಸಂಖ್ಯೆ ಮತ್ತು ಫೋಟೊ ಇರುವುದು ಕಡ್ಡಾಯ.

ಪತ್ರಗಳು ಜನವರಿ 30ಕ್ಕೆ ಮೊದಲು ಪ್ರಜಾವಾಣಿ ಕಚೇರಿ ತಲುಪಬೇಕು. ಈ ಪತ್ರಗಳನ್ನು ಯಾವುದೇ ರೀತಿಯಲ್ಲಿ ಬಳಸಿಕೊಳ್ಳುವ ಹಕ್ಕು ‘ಪ್ರಜಾವಾಣಿಗೆ’ ಇರುತ್ತದೆ.

ಮೊದಲ ಬಹುಮಾನ : ರೂ. 3000
ಎರಡನೇ ಬಹುಮಾನ : ರೂ. 2000
​ಮೂರನೇ ಬಹುಮಾನ : ರೂ. 1000

ಇ-ಮೇಲ್‌ನಲ್ಲಿ ಕಳುಹಿಸುವ ಪತ್ರಗಳು ನುಡಿ/ಬರಹ ಅಥವಾ ಯೂನಿಕೋಡ್ ತಂತ್ರಾಂಶದಲ್ಲಿರಲಿ. ಕಳುಹಿಸಬೇಕಾದ ವಿಳಾಸ: ಪ್ರೇಮ ಪತ್ರ ಸ್ಪರ್ಧೆ, ‘ಕಾಮನಬಿಲ್ಲು’ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು-01.
ಇ-ಮೇಲ್: premapathra@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT