ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮಿಗಳ ನೆರವಿಗೆ ‘ಲವ್‌ ಕಮಾಂಡೋಸ್‌’

Last Updated 21 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಒಂದು ಕಡೆ ದೇಶ ‘ಲವ್‌ ಜಿಹಾದ್‌’ಎಂಬ ಪರಿಕಲ್ಪ­ನೆಯನ್ನು  ಎದುರಿಸುತ್ತಿದ್ದರೆ ಮತ್ತೊಂ­ದೆ­ಡೆ ಈ ಪರಿಕಲ್ಪನೆಗೆ ಸಂಪೂರ್ಣ ವಿರುದ್ಧವಾಗಿ ‘ಲವ್ ಕಮಾಂಡೋಸ್‌’ ಎಂಬ ಸಂಸ್ಥೆ ಪ್ರೇಮಿಗಳನ್ನು ಒಂದು ಮಾಡುವ ಕಾರ್ಯದಲ್ಲಿ ನಿರತ­ವಾಗಿದೆ.

‘ವಿವಾಹಕ್ಕೆ ಕಾನೂನು ಸಮ್ಮತ ವಯಸ್ಸನ್ನು ಹೊಂದಿದ ಸುಮಾರು 30,000 ಪ್ರೇಮಿಗಳನ್ನು ಕೇವಲ 4 ವರ್ಷಗಳಲ್ಲಿ ಒಂದು ಮಾಡಿದ್ದೇವೆ’ ಎಂದು ಲವ್‌ ಕಮಾಂಡೋಸ್‌ ಹೆಮ್ಮೆಯಿಂದ ಹೇಳಿ­ಕೊಂಡಿದೆ.

ಈ ಸಂಸ್ಥೆ ದೆಹಲಿಯ ಪಹಾರ್‌­ಗಂಜ್‌ನಲ್ಲಿ  ಕಾರ್ಯ­ನಿರ್ವ­ಹಿ­ಸುತ್ತಿದ್ದು ಪ್ರೇಮಿಗಳನ್ನು ರಕ್ಷಿಸಿ ಅವರಿಗೆ ವಸತಿ ಸೌಲಭ್ಯ ಕೊಟ್ಟು ಆಶ್ರಯ ನೀಡುತ್ತದೆ.


ಆರ್‌ಟಿಐ ಅಡಿ ಮಾಹಿತಿ: ಕಾರಣ ನೀಡಲು ಹೈಕೋರ್ಟ್‌ ಸೂಚನೆ

ನವದೆಹಲಿ (ಪಿಟಿಐ): ಮಾಹಿತಿ ಹಕ್ಕು ಆಂದೋಲನಕ್ಕೆ ಭಾರಿ ಹಿನ್ನಡೆಯಾ­ಗುವಂತೆ ಮದ್ರಾಸ್‌್ ಹೈಕೋರ್ಟ್‌್, ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸುವವರು ಸೂಕ್ತ ಕಾರಣ ನೀಡಬೇಕು ಎಂದು ಆದೇಶಿಸಿದೆ.

‘ಯಾವುದೇ ಕಾರಣ ಇಲ್ಲದೇ ಮಾಹಿತಿ  ಕೇಳುವವರಿಗೆ ಮಾಹಿತಿ ನೀಡುವುದು ಕಡ್ಡಾಯವಲ್ಲ’ ಎಂದು ಕೋರ್ಟ್‌ ಹೇಳಿದೆ.
ಆದರೆ ಈ ಕಾಯ್ದೆಯ ಸೆಕ್ಷನ್‌ ೬ (೨)ರಲ್ಲಿ, ಅರ್ಜಿದಾರರು ಮಾಹಿತಿ ಕೇಳುವಾಗ ಕಾರಣ ನೀಡಬೇಕಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT