ಬೆಂಗಳೂರು: ‘ಇತ್ತೀಚೆಗೆ ಪ್ರೌಢ ಪ್ರಬಂಧಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಗುಣಮಟ್ಟ ಕುಸಿಯುತ್ತಿದೆ. ಈ ಬಗ್ಗೆ ನಾವು ಆತ್ಮವಿಮರ್ಶೆ ಮಾಡಿಕೊಳ್ಳುವ ಸ್ಥಿತಿ ಬಂದಿದೆ’ ಎಂದು ಸಾಹಿತಿ ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಸ್ತುತ ಇಡೀ ಪ್ರಪಂಚದಲ್ಲಿ ಗುರು–ಶಿಷ್ಯರ ಸಂಬಂಧ ಚೆನ್ನಾಗಿರುವುದು ಭಾರತದಲ್ಲಿ ಮಾತ್ರ. ಒಂದೊಮ್ಮೆ, ಶಿಕ್ಷಕರೇ ಮೋಸ ಮಾಡಿದರೆ ವಿದ್ಯಾರ್ಥಿಗಳಿಗೆ ನೈತಿಕತೆ ಹೇಳುವ ಧೈರ್ಯ ಹೇಗೆ ಬಂದಿತು? ಹೀಗಾಗಿ, ನಮ್ಮ ಆತ್ಮಪ್ರಜ್ಞೆಯನ್ನು ಜಾಗೃತವಾಗಿ ಇಟ್ಟುಕೊಳ್ಳಬೇಕಿದೆ’ ಎಂದು ಹೇಳಿದರು.

‘ಪಾಶ್ಚಾತ್ಯ ದೇಶಗಳಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ಕೊಡುವ ಏಜೆಂಟ್ ಆಗಿರುವ ಶಿಕ್ಷಕ, ನಮ್ಮಲ್ಲಿ ಆ ಕೆಲಸದೊಂದಿಗೆ ವಿದ್ಯಾರ್ಥಿಗಳ ಬದುಕು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾನೆ’ ಎಂದು ತಿಳಿಸಿದರು.

ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎಸ್.ರವೀಂದ್ರನಾಥ್ ಮಾತನಾಡಿ, ‘ಬಹುತೇಕ ಶಿಕ್ಷಕರಲ್ಲಿ ಜ್ಞಾನವಿರುತ್ತದೆ. ಆದರೆ, ಅದನ್ನು ವಿದ್ಯಾರ್ಥಿಗಳಿಗೆ ಪ್ರೀತಿಯಿಂದ ಬೋಧಿಸುವವರು ಕೆಲವರು ಮಾತ್ರ. ಶ್ರೇಷ್ಠ ಗುರುಗಳಾದವರು ತಮ್ಮ ಅನುಭವವನ್ನು ಧಾರೆ ಎರೆದು ಶಿಷ್ಯರನ್ನು ಬದಲಾಯಿಸುತ್ತಾರೆ’ ಎಂದು ಹೇಳಿದರು.

‘ಅಂತರ್ಜಾಲ ನಮಗೆ ಮಾಹಿತಿಯನ್ನು ಕೊಡಬಹುದೇ ವಿನಾ ಅನುಭವವನ್ನು ಅಲ್ಲ. ವೈದ್ಯವೃತ್ತಿಗೆ ಅನುಭವದ ಬೋಧನೆ ತುಂಬಾ ಮುಖ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ಗುರು–ಶಿಷ್ಯರ ಸಂಬಂಧದ ಗೌರವ ಕಡಿಮೆಯಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು. ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ 13 ಗಣ್ಯರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.