ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್ ಪ್ರೈವಸಿಗೆ ಹೀಗೆ ಮಾಡಿ

ತಂತ್ರೋಪನಿಷತ್ತು
Last Updated 17 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಫೇಸ್‌ಬುಕ್ ಹೆಚ್ಚು ಜನಪ್ರಿಯತೆ ಪಡೆದಿರುವ ಸಾಮಾಜಿಕ ಜಾಲತಾಣ. ವಿಷಯಗಳ ಚರ್ಚೆಗೆ, ಫೋಟೊ/ವಿಡಿಯೊ/ಫೈಲ್ ಷೇರ್ ಮಾಡಲು ಉತ್ತಮ ವೇದಿಕೆ. ವೈಯಕ್ತಿಕ ಬಳಕೆಗೆ ಬಂದಾಗ ಫೇಸ್‌ಬುಕ್ ಖಾತೆಯ ಸೂಕ್ತ ನಿರ್ವಹಣೆ ಅತ್ಯಗತ್ಯ. ಇಲ್ಲವಾದಲ್ಲಿ ನಮ್ಮ ಮಾಹಿತಿಗಳನ್ನು ಯಾರು ಬೇಕಾದರೂ ನೋಡುವಂತಾಗುತ್ತದೆ, ಓದುವಂತಾಗುತ್ತದೆ. ಮಾತ್ರವಲ್ಲ ಷೇರ್ ಆಗಿ ನಮ್ಮನ್ನು ಮುಜುಗರಕ್ಕೀಡುಮಾಡುತ್ತವೆ. ಹೀಗಾಗಿ ಕೆಲವು ಮಾರ್ಗಗಳನ್ನು ಅನುಸರಿಸಬೇಕು.

ಫೇಸ್‌ಬುಕ್ ಪ್ರೊಫೈಲ್ ನಿರ್ವಹಣೆಗೆ ಅಕೌಂಟ್ ಸೆಟ್ಟಿಂಗ್ಸ್‌ನಲ್ಲಿ Privacy Settings ಆಯ್ಕೆ ಮಾಡಿ. ಆಗ ತೆರೆದುಕೊಳ್ಳುವ ಪುಟದಲ್ಲಿ Privacy ಮೇಲೆ ಕ್ಲಿಕ್ ಮಾಡಿದರೆ ‘Who can see my stuff?’ಎಂಬ ಪ್ರಶ್ನೆಯೊಂದಿಗೆ ಹಲವು ಆಯ್ಕೆಗಳು ಕಾಣಿಸುತ್ತವೆ. ಅಲ್ಲಿ Who can see my future posts? ನಲ್ಲಿ Public, Friends, Only you, Custom ಎಂಬ ಆಯ್ಕೆಗಳು ಕಾಣಿಸುತ್ತವೆ. ಇದರಲ್ಲಿ ಬೇಕಿರುವುದನ್ನು ಆಯ್ಕೆ ಮಾಡಬಹುದು.

ಅಪರಿಚಿತರಿಂದ ಫ್ರೆಂಡ್ ರಿಕ್ವೆಸ್ಟ್ ಕಿರಿಕಿರಿ ತಪ್ಪಿಸಿಕೊಳ್ಳಲು Privacy ಪುಟದಲ್ಲಿಯೇ Who can send you friend requests? ಎಂದಿರುವ ಆಯ್ಕೆ ನೆರವಾಗುತ್ತದೆ.

ಅಂತೆಯೇ ಮೊಬೈಲ್ ನಂಬರ್ ಅಥವಾ ಇ-ಮೇಲ್ ವಿಳಾಸದಿಂದ ಯಾರೆಲ್ಲಾ ನಮ್ಮನ್ನು ಹುಡುಕಬಹುದು ಎಂಬುದನ್ನು ನಿರ್ಧರಿಸಲು Who can look me up? ಸಹಾಯ ಮಾಡುತ್ತದೆ.

ಫೋಟೊ ಟ್ಯಾಗಿಂಗ್ ನಿರ್ವಹಣೆಗೆ ಸೆಟ್ಟಿಂಗ್ಸ್‌ನಲ್ಲಿ Timeline and Tagging ಹೋಗಿ. ಅಲ್ಲಿ Who can add things to my timeline? ಎಂಬುದರ ಕೆಳಗೆ ‘Only Me’ ಅಥವಾ ‘Friends’ ಎಂದು ಆಯ್ಕೆ ಮಾಡಿ. ಇಲ್ಲಿ ನಿಮ್ಮ ಟೈಮ್‌ಲೈನ್‌ನಲ್ಲಿ ನೀವು ಟ್ಯಾಗ್ ಮಾಡಿದ ಹಾಗೂ ಬೇರೆಯವರು ಟ್ಯಾಗ್ ಮಾಡಿದ ಪೋಸ್ಟ್ ಯಾರು ನೋಡಬಹುದು ಎಂಬುದನ್ನೂ ನಿರ್ಧರಿಸಬಹುದು.

ಪೋಸ್ಟ್ ಅಪ್‌ಲೋಡ್‌ ಮಾಡುವಾಗಲೂ ಷೇರ್‌ ಎಂದು ಕ್ಲಿಕ್ಕಿಸುವ ಮೊದಲು ಅದರ ಎಡಬದಿಯಲ್ಲಿರುವ custom ಆಯ್ಕೆ ಮೇಲೆ ಕ್ಲಿಕ್ಕಿಸಿ. ಆಗ who should see this? ನಲ್ಲಿ Public, Friends, Only Me, Close Friends ಆಯ್ಕೆಗಳನ್ನು ಬಳಸಬಹುದು.
ಸೆಟ್ಟಿಂಗ್ಸ್‌ನಲ್ಲಿ  ಬ್ಲಾಕಿಂಗ್ಸ್ ಆಯ್ಕೆ ಮೇಲೆ ಕ್ಲಿಕ್‌ ಮಾಡಿ. ಅಲ್ಲಿ ನಿಮಗೆ ಬೇಡವೆನಿಸಿದವರನ್ನು ಬ್ಲಾಕ್ ಮಾಡಬಹುದು.
ಅನ್‌ಫ್ರೆಂಡ್ ಮಾಡಿದವರ ಬಗ್ಗೆ ಮಾಹಿತಿ ಅನ್‌ಫ್ರೆಂಡ್ ಫೈಂಡರ್‌ನಿಂದ ಸಾಧ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT