ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋಕ್‌ಲೈನ್‌ ಗರ್ಜನೆ: ತತ್ತರಿಸಿದ ನಾಗರಿಕರು

ನಗರೋತ್ಥಾನ ಯೋಜನೆಯಡಿ ಪುರಸಭೆ ವ್ಯಾಪ್ತಿಯ ರಸ್ತೆ ವಿಸ್ತರಣೆ
Last Updated 30 ಜುಲೈ 2015, 9:37 IST
ಅಕ್ಷರ ಗಾತ್ರ

ಲಿಂಗಸುಗೂರು:  ಬುಧವಾರ  ಫೋಕ್‌ಲೈನ್‌ ಸಮೇತ ಪುರಸಭೆ ಆಡಳಿತ ಮುಖ್ಯಾಧಿಕಾರಿ ನೇತೃತ್ವದಲ್ಲಿ ಸಿಬ್ಬಂದಿ ಬೀದಿಗೆ ಇಳಿದಿದ್ದರಿಂದ ರಸ್ತೆಗೆ ಹೊಂದಿಕೊಂಡ ಮನೆ ಮಾಲೀಕರು ಆತಂಕಕ್ಕೆ ಒಳಗಾದರು.

ರಸ್ತೆ ವಿಸ್ತರಣೆಗೆ ಬಹುತೇಕ ಮನೆ ಮಾಲೀಕರ ವಿರೋಧವಿಲ್ಲ. ಆದರೆ, ಏಕಾ ಏಕಿ ರಸ್ತೆ ವಿಸ್ತರಣೆಗೆ ಮುಂದಾಗುತ್ತಿರುವುದು ಸಂಕಷ್ಟಕ್ಕೆ ಈಡುಮಾಡಿದೆ. ಪಟ್ಟಣದ ಮುಖ್ಯ ಬಜಾರ  ಅಭಿವೃದ್ಧಿ ನಾಲ್ಕು ಹಂತಗಳಲ್ಲಿ ನಡೆದಿದೆ. ಅಷ್ಟಾದರೂ ವಿಸ್ತರಣೆ ಕಾರ್ಯ ಪೂರ್ಣಗೊಂಡಿಲ್ಲ ಎಂದು ಮನೆ ಮಾಲೀಕರು ನೋವು ತೋಡಿಕೊಂಡಿದ್ದಾರೆ. ನಗರೋತ್ಥಾನ ಯೋಜನೆಯಡಿ ಈಗಾಗಲೆ ಪುರಸಭೆ ವ್ಯಾಪ್ತಿಯ ಬಸವಸಾಗರ ದಿಂದ ಗಡಿಯಾರ ವೃತ್ತ ಮಾರ್ಗುವಾಗಿ ತಹಶೀಲ್ದಾರ್‌ ಕಚೇರಿ ರಸ್ತೆಯಿಂದ ಸಾಂಸ್ಕೃತಿಕ ಭವನದವರೆಗೆ.

ರಾಘವೇಂದ್ರ ವಸತಿ ಗೃಹದಿಂದ ಗಡಿಯಾರ ವೃತ್ತ ಮಾರ್ಗವಾಗಿ ಮೇನಬಜಾರ ಮೂಲಕ ಗೌಳಿಪುರ ಕ್ರಾಸ್‌ ವರೆಗೆ. ಗಡಿಯಾರ ವೃತ್ತದಿಂದ ಪುರಸಭೆ ಮಾರ್ಗವಾಗಿ ನಂದಿನ ಹೋಟೆಲ್‌, ಕೆರೆವರೆಗೆ ವಿಸ್ತರಣೆ ಮಾಡಲಾಗುತ್ತಿದೆ. ಅಲ್ಲದೆ, ಪೊಲೀಸ್‌ ಠಾಣೆ ಕ್ರಾಸ್‌ದಿಂದ ಸರ್ಕಾರಿ ಆಸ್ಪತ್ರೆ ಮಾರ್ಗವಾಗಿ ಈಶ್ವರ ದೇವಸ್ಥಾನದ ಮುಖ್ಯ ರಸ್ತೆವರೆಗೆ. ಕಸಬಾಲಿಂಗಸುಗೂರದಲ್ಲಿ ಶಂಭಣ್ಣ ಮಿಲ್‌ದಿಂದ ಕುಪ್ಪೆಭೀಮ ದೇವಸ್ಥಾನದವರೆಗೆ. ಕರಡಕಲ್‌ದಲ್ಲಿ ಚಿಕ್ಕಅಗಸಿಯಿಂದ ಮುಖ್ಯ ಬಜಾರ ಮಾರ್ಗವಾಗಿ ದೊಡ್ಡ ಅಗಸಿ ರಸ್ತೆವೆರೆಗೆ ಒಟ್ಟು ₨ 4.65ಕೋಟಿ ಹಣದಲ್ಲಿ ರಸ್ತೆ ಅಭಿವೃದ್ಧಿ ಮತ್ತು ಚರಂಡಿ ನಿರ್ಮಾಣಕ್ಕೆ ಟೆಂಡರ್‌ ನೀಡಲಾಗಿದೆ. 

ಮೇಲ್ಕಾಣಿಕ ಎಲ್ಲ ರಸ್ತೆಗಳು ಸೇರಿದಂತೆ ಪಟ್ಟಣದ ಪ್ರಮುಖ ಬಡಾವಣೆಗಳ ಎಲ್ಲ ರಸ್ತೆಗಳನ್ನು ರಸ್ತೆ ಮಧ್ಯದಿಂದ ಕನಿಷ್ಠ 6ಮೀಟರ್‌ ವರೆಗೆ ವಿಸ್ತರಣೆ ಮಾಡಲಾಗುವುದು. ಈಗಾಗಲೇ ವಿಸ್ತರಣೆಗೊಳ್ಳುವ ರಸ್ತೆಗಳ ಪೈಕಿ 5ಕಿ.ಮೀ. ರಸ್ತೆ ಹಾಗೂ 2.5ಕಿ.ಮೀ ಚರಂಡಿ ನಿರ್ಮಾಣ ಕೈಗೆತ್ತಿಕೊಳ್ಳ ಲಾಗುವುದು. ಉಳಿದ ರಸ್ತೆಗಳ ಅಭಿವೃದ್ಧಿಗೆ ವಿವಿಧ ಯೋಜನೆಗಳಡಿ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ ಎಂದು ಪುರಸಭೆ ಮೂಲಗಳು ದೃಢಪಡಿಸಿವೆ. 

ಕಳೆದ 6 ವರ್ಷಗಳಿಂದ ತಾಲ್ಲೂಕು ಆಡಳಿತ ಮತ್ತು ಪುರಸಭೆ ಆಡಳಿತ ಮಂಡಳಿ ದಿನಕ್ಕೊಂದು ಕಾನೂನು ಹೇಳುತ್ತ ಬಂದಿವೆ.  ರಸ್ತೆ ವಿಸ್ತರಣೆ ವಿಷಯದಲ್ಲಿ ಕೂಡ ನಿರ್ದಿಷ್ಟ ಅಳತೆ ಹೇಳುತ್ತಿಲ್ಲ. ಆಯಾ ಬಡಾವಣೆ ಮಾಲೀಕರ ಒತ್ತಡ ಆಧರಿಸಿ ವಿಸ್ತರಣೆ ಅಳತೆ ನಿಗದಿಪಡಿಸುತ್ತಿರುವುದು ನಾಗರಿಕರನ್ನು ಗೊಂದಲಕ್ಕೆ ಸಿಲುಕಿಸಿದ್ದು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಿ ಎಂದು ಪ್ರಗತಿಪರ ಸಂಘಟನೆಗಳು ಆಗ್ರಹಪಡಿಸಿವೆ.  -ಬಿ.ಎ. ನಂದಿಕೋಲಮಠ

ಪುರಸಭೆಯ ವಾರ್ಡ್‌ಗಳಲ್ಲಿನ ಎಲ್ಲ ಪ್ರಮುಖ ರಸ್ತೆಗಳನ್ನು ಮಧ್ಯಭಾಗದಿಂದ 6ಮೀಟರ್‌ನಂತೆ ಗುರುತಿಸಿ ವಿಸ್ತರಣೆ ಮಾಡಲಾಗುವುದು
 - ಕೆ. ಮುತ್ತಪ್ಪ, ಮುಖ್ಯಾಧಿಕಾರಿ, ಪುರಸಭೆ ಲಿಂಗಸುಗೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT