ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರ ವಿಶ್ವಾಸ ಗಳಿಸುವಲ್ಲಿ ಕೇಂದ್ರ ಸರ್ಕಾರ ಸಫಲ: ಜಾವಡೇಕರ್

Last Updated 29 ಮೇ 2015, 11:32 IST
ಅಕ್ಷರ ಗಾತ್ರ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಒಂದು ವರ್ಷದ ಅವಧಿಯಲ್ಲಿ ದೇಶದ ಬಡವರ ವಿಶ್ವಾಸ ಗಳಿಸುವಲ್ಲಿ ಯಶಸ್ವಿ ಯಾಗಿದೆ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಪ್ರಕಾಶ್ ಜಾವಡೇಕರ್‌ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಡವರ ನಿರ್ಧಾರದಿಂದಾಗಿಯೇ 2014ರ ಲೋಕಸಭಾ ಚುನಾವಣೆಯಲ್ಲಿ ಬದಲಾವಣೆಯ ಪರ ಜನಾದೇಶ ದೊರೆ ಯಿತು. ಒಂದು ವರ್ಷದ ಅವಧಿ ಯಲ್ಲಿ ಬಡವರ ಕನಸು ನನಸು ಮಾಡು ವತ್ತ ಕೇಂದ್ರ ಸರ್ಕಾರ ದಾಪುಗಾಲು ಇರಿಸಿದೆ. ಇದರಿಂದಾಗಿ ಜನರು ಇರಿಸಿದ ವಿಶ್ವಾಸ ವನ್ನು ಉಳಿಸಿಕೊಳ್ಳುವಲ್ಲಿ ನರೇಂದ್ರ ಮೋದಿ ಯಶಸ್ವಿಯಾಗಿದ್ದಾರೆ’ ಎಂದರು.

ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜನಧನ ಯೋಜನೆಯ ಮೂಲಕ 15 ಕೋಟಿ ಜನರಿಗೆ ಬ್ಯಾಂಕ್‌ ಖಾತೆ ನೀಡಲಾಗಿದೆ. ಇದೇ ಮೊದಲ ಬಾರಿಗೆ ಈ ದೇಶದ ಬಡವರಿಗೆ ಸಾಮಾಜಿಕ ಭದ್ರತೆ ಒದಗಿಸಲಾಗುತ್ತಿದೆ. ಪ್ರಧಾನಿಯವರು ಇತ್ತೀಚೆಗೆ ಚಾಲನೆ ನೀಡಿದ ಎರಡು ವಿಮಾ ಯೋಜನೆಗಳು ಮತ್ತು ಒಂದು ಪಿಂಚಣಿ ಯೋಜನೆ ಈ ದಿಸೆಯಲ್ಲಿ ಇತಿಹಾಸ ಸೃಷ್ಟಿಸಿವೆ. 20 ದಿನಗಳಲ್ಲಿ ಎಂಟು ಕೋಟಿ ಜನರು ವಿಮೆ ಮತ್ತು ಪಿಂಚಣಿ ಖಾತೆಗಳನ್ನು ತೆರೆದಿದ್ದಾರೆ ಎಂದು ಹೇಳಿದರು.

ಆಡಳಿತದಲ್ಲಿ ಸಾರ್ವಜನಿಕ ಸಹಭಾಗಿ ತ್ವಕ್ಕೆ ಆದ್ಯತೆ ನೀಡಲಾಗಿದೆ. ಪಾರದರ್ಶಕ ಆಡಳಿತ ವ್ಯವಸ್ಥೆಗೆ ಒತ್ತು ನೀಡುವ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿದೆ. ಐದನೇ ಒಂದರಷ್ಟು ಕಲ್ಲಿ ದ್ದಲು ಗಣಿಗಳ ಹರಾಜಿನಿಂದ ₨ 3 ಲಕ್ಷ ಕೋಟಿ ವರಮಾನ ಬಂದಿದೆ. 2ಜಿ ತರಂ ಗಾಂತರ ಹರಾಜಿನಿಂದ ₨ 1.09 ಲಕ್ಷ ಕೋಟಿ ವರಮಾನ ಬಂದಿದೆ. ಇದೆಲ್ಲವೂ ಖಾಸಗಿ ವ್ಯಕ್ತಿಗಳ ಪಾಲಾಗಿಲ್ಲ. ಸರ್ಕಾರದ ಬೊಕ್ಕಸಕ್ಕೆ ಬಂದಿದೆ. ಎಂದರು.

ಮನಮೋಹನ್‌ಸಿಂಗ್ ಉತ್ತರಿಸಲಿ: ‘ಹಿಂದಿನ ದೂರಸಂಪರ್ಕ ಸಚಿವ ಎ.ರಾಜಾ ಅವರಿಗೆ ಅನುಕೂಲ ಮಾಡಿ ಕೊಡುವಂತೆ ಮಾಜಿ ಪ್ರಧಾನಿ ಡಾ.ಮನ ಮೋಹನ್‌ ಸಿಂಗ್‌ ಒತ್ತಡ ಹೇರಿದ್ದರು ಎಂಬ ಮಾಹಿತಿಯನ್ನು  ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾ ರದ ಮಾಜಿ ಅಧ್ಯಕ್ಷ ಪ್ರದೀಪ್‌ ಬೈಜಾಲ್‌ ಬಹಿರಂಗಪಡಿಸಿರುವುದು ಆತಂಕಕಾರಿ ಯಾಗಿದೆ. ಈ ಕುರಿತು ಮನಮೋಹನ್‌ ಸಿಂಗ್‌ ದೇಶಕ್ಕೆ ಉತ್ತರ ನೀಡಬೇಕು’ ಎಂದು ಜಾವಡೇಕರ್‌ ಆಗ್ರಹಿಸಿದರು.

ಭೂಸ್ವಾಧೀನ ಮತ್ತು ಪರಿಹಾರ ಮಸೂದೆಯ ತಿದ್ದುಪಡಿಯನ್ನು ಕಾಂಗ್ರೆಸ್‌ ಪಕ್ಷವು ರಾಜಕೀಯ ಉದ್ದೇಶಕ್ಕಾಗಿ ವಿರೋಧಿಸುತ್ತಿದೆ. ಉದ್ದೇಶಿತ ತಿದ್ದುಪಡಿ ಯಿಂದ ರೈತರಿಗೆ ಅನುಕೂಲ ದೊರೆ ಯಲಿದೆ. ಆದರೆ, ಕಾಂಗ್ರೆಸ್‌ ಜನರನ್ನು ದಿಕ್ಕು ತಪ್ಪಿಸುತ್ತಿದೆ. ಭೂಸ್ವಾ ಧೀನ ಮತ್ತು ಪರಿಹಾರ ಮಸೂದೆ, ಸರಕು ಮತ್ತು ಸೇವಾ ತೆರಿಗೆ ಮಸೂದೆಗಳು ಸಂಸತ್ತಿನ ಸ್ಥಾಯಿ ಸಮಿತಿ ಮುಂದಿವೆ. ಮಳೆಗಾಲದ ಅಧಿವೇಶನದಲ್ಲಿ ಎರಡೂ ಮಸೂದೆ ಗಳಿಗೆ ಒಪ್ಪಿಗೆ ದೊರೆಯುವ ವಿಶ್ವಾಸವಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT