ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಾಯೂಂ ಅತ್ಯಾಚಾರ ಪ್ರಕರಣ: ಸಿಬಿಐ ತನಿಖೆಗೆ

Last Updated 1 ಜೂನ್ 2014, 10:27 IST
ಅಕ್ಷರ ಗಾತ್ರ

ಲಖನೌ (ಪಿಟಿಐ):  ಬದಾಯೂಂ ಜಿಲ್ಲೆಯಲ್ಲಿ ಸೋದರ ಸಂಬಂಧಿ ದಲಿತ ಬಾಲಕಿಯರಿಬ್ಬರ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿ­ರುವ ಪ್ರಕರಣ ಖಂಡಿಸಿ  ವ್ಯಾಪಕ ಆಕ್ರೋಶ  ವ್ಯಕ್ತವಾಗಿರುವುದರಿಂದ ಒತ್ತಡಕ್ಕೆ ಒಳಗಾಗಿರುವ ರಾಜ್ಯ ಸರ್ಕಾರ ಪ್ರಕರಣವನ್ನುಸಿಬಿಐ ತನಿಖೆಗೆ ಒಪ್ಪಿಸಿದೆ.

ಸಿಬಿಐಗೆ ಹಸ್ತಾಂತರಿಸುವ ಪ್ರಕ್ರಿಯೆ ಪೂರ್ಣಗೊಂಡಿದ್ದು ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ  ಎಂದು ರಾಜ್ಯ ಸರ್ಕಾರದ ಹೇಳಿಕೆ ತಿಳಿಸಿದೆ. ‘ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸ­ಬೇಕು ಎಂಬ ಸಂತ್ರಸ್ತ ಕುಟುಂಬ­ಗಳ ಒತ್ತಾಯಕ್ಕೆ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಸ್ಪಂದಿಸಿದ್ದಾರೆ.

ಆರೋಪಿಗಳ ಬಂಧನ: ತಲೆ­ತಪ್ಪಿಸಿಕೊಂಡಿದ್ದ ಮೂವರು ಸಹೋದರರಾದ ಉರ್ವೇಶ್‌ ಯಾದವ್‌, ಸೇವೆಯಿಂದ ವಜಾಗೊಂಡಿರುವ ಕಾನ್‌­ಸ್ಟೆಬಲ್‌ ಛತ್ರಪಾಲ್‌ ಯಾದವ್‌ ಮತ್ತು ಪಪ್ಪು ಯಾದವ್‌ ಅವರನ್ನು ಬಂಧಿಸಲಾಗಿದೆ.  ಇತರ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂದು  ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.
 
ಕಟರಾ ಸಾದತ್‌ಗಂಜ್‌ ಪೊಲೀಸ್‌ ಹೊರ­ಠಾಣೆಯ ಮುಖ್ಯಸ್ಥ ರಾಂ ವಿಲಾಸ್‌ಯಾದವ್‌ ಅವರನ್ನು ಅಮಾ­ನತು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT