ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ನೀಡಿದ ನಗರಿ

Last Updated 16 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

‘ಹಸಿ ತೋ ಫಸಿ’ ಸಿನಿಮಾದಲ್ಲಿ ತನ್ನ ನಟನಾ ಕೌಶಲ ತೋರಿದ ದೆಹಲಿಯ ಹುಡುಗ, ನಟ ಸಿದ್ಧಾರ್ಥ್ ಮಲ್ಹೋತ್ರಾ ತಮ್ಮ ಹುಟ್ಟೂರು ದೆಹಲಿಯಡೆಗಿನ ಪ್ರೀತಿ ಜತೆಗೆ ಈಗಿನ ಮುಂಬೈ ಜೀವನದ ಕುರಿತು ಹೇಳಿಕೊಂಡಿದ್ದಾರೆ.

ನಟನಾಗುವ ಕನಸು ಹೊತ್ತು ಮುಂಬೈಗೆ ಬಂದರೂ ದೆಹಲಿ ನಗರಿಯ ಸೆಳೆತ ಅವರನ್ನು ಇನ್ನೂ ಬಿಟ್ಟಿಲ್ಲ.

‘ಜನ ಹೊಸ ಪ್ರತಿಭೆಯ ಹುಡುಕಾಟದಲ್ಲಿದ್ದರು. ಆಗ ನಾನು ಮುಂಬೈಗೆ ಬಂದಿದ್ದೆ. ನನ್ನ ಅದೃಷ್ಟ ಖುಲಾಯಿಸಿತು. ಸಿನಿಮಾ ಅವಕಾಶಗಳು ಹುಡುಕಿಕೊಂಡು ಬಂದವು’ ಎನ್ನುತ್ತಾರೆ ಸಿದ್ಧಾರ್ಥ್.

‘ಮುಂಬೈ ನನಗೆ ಸಾಕಷ್ಟು ಅವಕಾಶಗಳನ್ನು ನೀಡಿದೆ. ಜತೆಗೆ ಹೊಸ ಹೊಸ ಅನುಭವಗಳನ್ನು ಈ ನಗರ ಕೊಟ್ಟಿದೆ. ಸಾಕಷ್ಟು ಜನರನ್ನು ಭೇಟಿ ಮಾಡಿದೆ. ಇವೆಲ್ಲವೂ ನನ್ನ ವ್ಯಕ್ತಿತ್ವವನ್ನು ಗಟ್ಟಿಗೊಳಿದವು. ಇಂತಹ ಅವಕಾಶ ದೆಹಲಿಯಲ್ಲಿಯೂ ಸಿಗಬೇಕು’ ಎಂಬ ಆಸೆ ವ್ಯಕ್ತಪಡಿಸಿದ್ದಾರೆ.

ಕಣ್ತುಂಬ ನಟನಾಗುವ ಕನಸು ಹೊತ್ತು ಮುಂಬೈಗೆ ಬಂದ ಇವರಿಗೆ ಮೊದಮೊದಲು ಎದುರಾಗಿದ್ದು ಕಷ್ಟದ ದಿನಗಳು.
‘ಬೇರೆ ಕಡೆಯಿಂದ ಇಲ್ಲಿಗೆ ಬಂದವರಿಗೆ ಮೊದಲ ದಿನಗಳಲ್ಲಿ ಸಾಕಷ್ಟು ಕಷ್ಟ ಎದುರಾಗುತ್ತವೆ. ಏಕೆಂದರೆ ಇಲ್ಲಿ ನಿಮಗೆ ಗೊತ್ತಿರುವವರು ಯಾರೂ ಇರುವುದಿಲ್ಲ, ನಿಮ್ಮ ಕುಟುಂಬವೂ ಇರುವುದಿಲ್ಲ. ವೈಯಕ್ತಿಕವಾಗಿರಲಿ, ವೃತ್ತಿಯಲ್ಲಾಗಲೀ ಬೆಂಬಲಕ್ಕೆ ನಿಲ್ಲುವವರೂ ಇರುವುದಿಲ್ಲ. ಮುಂಬೈ ಒಂದು ರೀತಿ ಕಠಿಣ ನಗರ. ಆದರೆ ಇಂದು ನನಗೆ ಏನು ಬೇಕೋ ಎಲ್ಲವನ್ನೂ ಕೊಟ್ಟಿದೆ. ಒಂದಿಷ್ಟು ತಾಳ್ಮೆ, ಪರಿಶ್ರಮವಿದ್ದರೆ ಎಲ್ಲಿದ್ದರೂ ಬದುಕಬಹುದು’ ಎಂದು ಅನುಭವಗಳನ್ನು ತೆರೆದಿಟ್ಟರು ಸಿದ್ಧಾರ್ಥ್‌.

ಸದ್ಯಕ್ಕೆ ಮೋಹಿತ್ ಸೂರಿ ಅವರ ‘ಏಕ್ ವಿಲನ್’ ಸಿನಿಮಾದಲ್ಲಿ ಸಿದ್ಧಾರ್ಥ್ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT