ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲವಂತದ ಮತಾಂತರ: ಬುಧವಾರ ಚರ್ಚೆ

Last Updated 12 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಆಗ್ರಾ ಮತ್ತು ಕೆಲ ಪ್ರದೇಶಗ­ಳಲ್ಲಿ ಮಾಡಲಾಗಿದೆ ಎನ್ನಲಾದ ಬಲವಂತದ ಮತಾಂತರ ಕುರಿತು ಬುಧವಾರ (ಡಿ. 17) ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ವಿರೋಧಪಕ್ಷಗಳು ಶುಕ್ರವಾರವೂ ರಾಜ್ಯಸಭೆಯಲ್ಲಿ ಮತಾಂತರ ವಿಚಾರ ಎತ್ತಿದವು. ಅಲೀಗಡದಲ್ಲಿ ಕ್ರೈಸ್ತರನ್ನು ಮತಾಂತರಗೊಳಿಸುವ ಬೆದರಿಕೆ ಹಾಕ­ಲಾ­ಗಿದೆ ಎಂದು ಆತಂಕ ವ್ಯಕ್ತಪಡಿಸಿ­ದವು. ಸಂಸದೀಯ ವ್ಯವಹಾರ ಖಾತೆ ರಾಜ್ಯ ಸಚಿವ ಮುಕ್ತಾರ್‌ ಅಬ್ಬಾಸ್‌ ನಕ್ವಿ ಸರ್ಕಾರ ಈ ವಿಚಾರದ ಕುರಿತು ಡಿ.17ರಂದು ಚರ್ಚಿಸಲಿದೆ ಎಂದರು.

ಇದಕ್ಕೂ ಮುನ್ನ ಮಾತನಾಡಿದ ಜೆಡಿಯುನ ಕೆ.ಸಿ.ತ್ಯಾಗಿ, ಮಸೀದಿಗಳಿಂದ ಮೈಕ್ ಕಿತ್ತುಹಾಕಲು  ವಿಶ್ವ ಹಿಂದೂ ಪರಿಷತ್‌ ಗೊತ್ತುವಳಿ ಮಂಡಿಸಿರುವ ವಿಷಯವನ್ನು ಸದನದ ಗಮನಕ್ಕೆ ತಂದರು. ಉಪ ಸಭಾಧ್ಯಕ್ಷ ಪಿ.ಜೆ. ಕುರಿ­ಯನ್‌ ಈ ಎರಡೂ ವಿಚಾರಕ್ಕೂ ಸಂಬಂಧ ಕಲ್ಪಿಸಬಾರದು ಎಂದು ತಿಳಿಸಿದರು.

ಎಚ್ಚರಿಕೆ (ಅಲೀಗಡ ವರದಿ): ಡಿ. 25ರಂದು ಸಾಮೂಹಿಕ ಮತಾಂತರ ಕಾರ್ಯಕ್ರಮ ಹಮ್ಮಿ­ಕೊಂಡಿ­ರುವ ಹಿಂದೂ ಸಂಘಟನೆಗಳಿಗೆ ಅಲೀಗಡ ಜಿಲ್ಲಾ ಆಡಳಿತ ಎಚ್ಚರಿಕೆ ನೀಡಿದೆ. ಧಾರ್ಮಿಕ ಮತಾಂತರ ವ್ಯಕ್ತಿಗಳ ವೈಯಕ್ತಿಕ ಆಯ್ಕೆಯಾಗಿದ್ದು, ಅದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಆದರೆ, ಈ ನಿಯಮವನ್ನು ದುರ್ಬಳಕೆ ಮಾಡಿ­ಕೊಂಡು ಯಾರಾದರೂ ಕೋಮು ಸೌಹಾರ್ದ ಕದಡಲು ಯತ್ನಿಸಿದಲ್ಲಿ ಅದನ್ನು ನಾವು ಸಹಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಅಭಿಷೇಕ್‌ ಪ್ರಕಾಶ್‌ ಅವರು ಎಚ್ಚರಿಸಿದ್ದಾರೆ.

ಬಿಜೆಪಿಗೆ ತರಾಟೆ
ಮತಾಂತರ ನಿಷೇಧಕ್ಕೆ ಶಾಸನ ರೂಪಿಸುವುದು ಸಂವಿಧಾನಕ್ಕೆ ವಿರುದ್ಧ­ವಾ­ದುದು ಹಾಗೂ ನೈಜ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಈ ವಿವಾದಕ್ಕೆ ತುಪ್ಪ ಸುರಿ­ಯುತ್ತಿದೆ ಎಂದು ಜನತಾ ಪರಿವಾರದ ನಾಯಕರು ಹಾಗೂ ಎಡಪಕ್ಷಗಳು ಟೀಕಿಸಿವೆ. ಹೀಗೆ ಮಾಡುವ ಮೂಲಕ ಹಿಂದೂ ಮತಗಳನ್ನು ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ ಎಂದು ಅವು ಆರೋಪಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT