ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾ ತಂಡದಲ್ಲಿ ದಾಸ್‌ಗೆ ಸ್ಥಾನ

Last Updated 3 ಜೂನ್ 2015, 19:30 IST
ಅಕ್ಷರ ಗಾತ್ರ

ಢಾಕಾ (ಪಿಟಿಐ): ಭಾರತದ ವಿರುದ್ಧ ಜೂನ್‌ 10ರಿಂದ 14ರವರೆಗೆ ಫತುಲ್ಲಾ ದಲ್ಲಿ ನಡೆಯುವ  ಟೆಸ್ಟ್ ಪಂದ್ಯಕ್ಕೆ ಬಾಂಗ್ಲಾದೇಶ ತಂಡವನ್ನು ಪ್ರಕಟಿಸ ಲಾಗಿದ್ದು, ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್‌ ಲಿಟ್ಟನ್‌ ದಾಸ್‌ ಇದೇ ಮೊದಲ ಬಾರಿಗೆ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಬಾಂಗ್ಲಾ ಕ್ರಿಕೆಟ್‌ ಮಂಡಳಿ ಬುಧವಾರ 14 ಸದಸ್ಯರ ತಂಡವನ್ನು ಬಿಡುಗಡೆ ಮಾಡಿದ್ದು ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್‌ ಮುಷ್ಫಿಕುರ್‌ ರಹಿಮ್‌ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಅವರ ಬೆರಳಿಗೆ ಗಾಯವಾಗಿದ್ದು ಈ ಪಂದ್ಯದ ವೇಳೆ ವಿಕೆಟ್‌ ಕೀಪಿಂಗ್‌ ಮಾಡುವುದು ಅನುಮಾನ. ಈ ಉದ್ದೇಶದಿಂದಲೇ 20 ವರ್ಷದ ದಾಸ್‌ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.

ತಂಡ ಹೀಗಿದೆ:  ಮುಷ್ಫಿಕುರ್‌ ರಹಿಮ್‌ (ನಾಯಕ/ವಿಕೆಟ್‌ ಕೀಪರ್‌), ತಮಿಮ್‌ ಇಕ್ಬಾಲ್‌, ಇಮ್ರುಲ್‌ ಕಯಾಸ್‌, ಮೊಮಿನುಲ್‌ ಹಕ್‌, ಮಹಮೂದುಲ್ಲಾ, ಶಕೀಬ್‌ ಅಲ್‌ ಹಸನ್‌, ಸೌಮ್ಯ ಸರ್ಕಾರ್‌, ಶುವಗತಾ ಹೊಮ್‌, ತೈಜುಲ್‌ ಇಸ್ಲಾಂ, ಮೊಹಮ್ಮದ್‌ ಶಾಹಿದ್‌, ರುಬೆಲ್‌ ಹೊಸೇನ್‌, ಜುಬೈರ್‌ ಹೊಸೇನ್‌, ಲಿಟ್ಟನ್‌ ದಾಸ್‌ ಹಾಗೂ ಅಬುಲ್‌ ಹಸನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT