ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಬೆ ಹೈಕೋರ್ಟ್‌ ಮೊರೆ ಹೋದ ನೆಸ್ಲೆ

ಎಫ್‌ಎಸ್ಎಸ್‌ಎಐ, ಎಫ್‌ಡಿಎ ಆದೇಶ ಹಿನ್ನೆಲೆ
Last Updated 11 ಜೂನ್ 2015, 11:18 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮ್ಯಾಗಿ ವಿವಾದಕ್ಕೆ ಸಂಬಂಧಿಸಿದಂತೆ ನೂಡಲ್ಸ್‌ ಉತ್ಪನ್ನಗಳ ಗುಣಮಟ್ಟದ ಬಗ್ಗೆ ರಾಷ್ಟ್ರೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಹೊರಡಿಸಿರುವ ಆದೇಶವನ್ನು ನ್ಯಾಯಾಂಗ ಪರಾಮರ್ಶೆಗೆ ಒಳಪಡಿಸುವಂತೆ ಕೋರಿ ನೆಸ್ಲೆ ಇಂಡಿಯಾ ಗುರುವಾರ ಬಾಂಬೆ ಹೈಕೋರ್ಟ್‌ ಮೊರೆ ಹೋಗಿದೆ.

‘ಮ್ಯಾಗಿ ನೂಡಲ್ಸ್ ವಿವಾದವನ್ನು ಪರಿಹರಿಸುವ ನಿಟ್ಟಿನಲ್ಲಿ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಕಾಯ್ದೆ–2011ರ ವ್ಯಾಖ್ಯಾನಿಸುವಂತೆ ಮತ್ತು ಮಹಾರಾಷ್ಟ್ರದಲ್ಲಿ ಆಹಾರ ಹಾಗೂ ಔಷಧ ಆಡಳಿತವು (ಎಫ್‌ಡಿಎ) 2015ರ ಜೂನ್‌ 6ರಂದು ಹಾಗೂ ಎಫ್‌ಎಸ್‌ಎಸ್‌ಎಐ 2015ರ ಜೂನ್‌5ರಂದು ಹೊರಡಿಸಿರುವ ಆದೇಶಗಳನ್ನು ನ್ಯಾಯಾಂಗ ಪರಾಮರ್ಶೆಗೆ ಒಳಪಡಿಸುವಂತೆ ನೆಸ್ಲೆ ಇಂಡಿಯಾ ಕಂಪೆನಿಯು ಬಾಂಬೆ ಹೈಕೋರ್ಟ್‌ ಮೊರೆ ಹೋಗಿದೆ’ ಎಂದು ಮುಂಬೈ ಷೇರುಪೇಟೆಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಕಂಪೆನಿ ಹೇಳಿದೆ.

ಅಲ್ಲದೇ, ‘ನಾವು ಮಾರುಕಟ್ಟೆಯಿಂದ ಮ್ಯಾಗಿ ನೂಡಲ್‌ ಉತ್ಪನ್ನಗಳನ್ನು ಹಿಂಪಡೆಯುತ್ತಿದ್ದೇವೆ. ಅದಕ್ಕೂ ಇದಕ್ಕೂ ಸಂಬಂಧವಿಲ್ಲ’ ಎಂದೂ ಕಂಪೆನಿ ಸ್ಪಷ್ಟಪಡಿಸಿದೆ.

ನೆಸ್ಲೆ ಇಂಡಿಯಾದ ಎಲ್ಲಾ ಬಗೆಯ ಮ್ಯಾಗಿ ನೂಡಲ್ಸ್‌ಗಳನ್ನು ನಿಷೇಧಿಸಿದ್ದ ಎಫ್‌ಎಸ್‌ಎಸ್‌ಎಐ, ಜನರ ಬಳಕೆಗೆ ಅವು   ‘ಸುರಕ್ಷಿತ’ವಲ್ಲ ಎಂದಿತ್ತು.

ಕೆಲವು ಮಾದರಿ ಪರೀಕ್ಷೆಯ ವೇಳೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಸೀಸದ ಅಂಶ ಕಂಡು ಬಂದಿದ್ದರಿಂದ ಮ್ಯಾಗಿ ನೂಡಲ್ಸ್‌ ಮೇಲೆ ಮಹಾರಾಷ್ಟ್ರ ಕೂಡ ನಿಷೇಧ ಹೇರಿತ್ತು.

‘ಬಾಂಬೆ ಹೈಕೋರ್ಟ್‌ ನೀಡುವ ಆದೇಶದ ಅನ್ವಯ ನಾವು ಮುಂದುವರಿಯುತ್ತೇವೆ’ ಎಂದೂ ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT