ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾದಾಮಿ ಸೇರಿದಂತೆ 12 ಪಾರಂಪರಿಕ ನಗರಗಳ ಅಭಿವೃದ್ಧಿ

Last Updated 20 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕರ್ನಾಟಕದ ಬಾದಾಮಿ ಸೇರಿದಂತೆ ದೇಶದ 12 ನಗರ­ಗ­ಳನ್ನು ರಾಷ್ಟ್ರೀಯ ಪರಂಪರೆ ನಗರ ಅಭಿ­ವೃದ್ಧಿ ಯೋಜನೆಗೆ ಆಯ್ಕೆ ಮಾಡ­ಲಾಗಿದೆ.

ಈ ಯೋಜನೆಯಡಿ ಆರಂಭದಲ್ಲಿ ಆಯ್ಕೆಯಾದ ನಗರಗಳೆಂದರೆ: ಅಮೃತ­ಸರ, ವಾರಾಣಸಿ, ಗಯಾ, ಪುರಿ, ಅಜ್ಮೇರ್, ವೆಲಾಂಕಣಿ, ಮಥುರಾ, ಕಂಚಿ­ಪುರಂ, ದ್ವಾರಕಾ, ಬಾದಾಮಿ, ವಾರಂ­ಗಲ್ ಮತ್ತು ಅಮರಾವತಿ.

ಪುರಾತನ ನಗರಗಳ ಪರಂಪರೆಯನ್ನು ಕಾಪಾಡಿ, ನಗರವನ್ನು ಪುನಶ್ಚೇತನಗೊಳಿ­ಸುವ 500 ಕೋಟಿ ರೂಪಾಯಿಗಳ ರಾಷ್ಟ್ರೀಯ ಪರಂಪರೆ ನಗರ ಅಭಿವೃದ್ಧಿ ಯೋಜನೆಯನ್ನು ಮುಂದಿನ ವರ್ಷದ ಆರಂಭ­ದಲ್ಲಿ ಜಾರಿ ಮಾಡಲಾಗುತ್ತಿದೆ ಎಂದು ನಗರಾ­ಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಶನಿವಾರ ಇಲ್ಲಿ ನಡೆದ ಕಾರ್ಯಾ­­ಗಾರ­ದಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT