ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಿಯೊಂದಿಗೆ ಅನುಚಿತ ವರ್ತನೆ

Last Updated 30 ಜುಲೈ 2014, 20:19 IST
ಅಕ್ಷರ ಗಾತ್ರ

ಬೆಂಗಳೂರು: ಕುಮಾರಸ್ವಾಮಿ ಲೇಔಟ್‌ ಸಮೀಪದ ಕಾಶಿನಗರದಲ್ಲಿ ಮಂಗಳ­ವಾರ ರಾತ್ರಿ ಧನುಕೋಟಿ (53) ಎಂಬಾತ 14 ವರ್ಷದ ಬಾಲಕಿ­ಯೊಂದಿಗೆ ಅನುಚಿತವಾಗಿ ವರ್ತಿಸಿ ಅತ್ಯಾ­ಚಾರ ಮಾಡಲೆತ್ನಿಸಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ತಮಿಳುನಾಡಿನ ಧನು­ಕೋಟಿ, ಗಾರೆ ಕೆಲಸ ಮಾಡುತ್ತಿದ್ದ. ವಿವಾಹಿತನಾದ ಆತ ಕುಟುಂಬ ಸದಸ್ಯ­ರೊಂದಿಗೆ ಕುಮಾರ­ಸ್ವಾಮಿ­ಲೇಔಟ್‌ನ ಚಂದ್ರಾನಗರದಲ್ಲಿ ವಾಸವಾಗಿದ್ದ.

ಬಾಲಕಿಯ ಪೋಷಕರಿಗೆ ಪರಿಚಿ­ತ­ನಾದ ಧನುಕೋಟಿ, ಆಗಾಗ್ಗೆ ಅವರ ಮನೆಗೆ ಹೋಗುತ್ತಿದ್ದ. ಅದೇ ರೀತಿ ಆತ ರಾತ್ರಿ ಪಾನಮತ್ತನಾಗಿ ಅವರ ಮನೆಗೆ ಹೋಗಿದ್ದ. ಆಗ ಬಾಲಕಿ, ಆಕೆಯ ಅಕ್ಕ ಮತ್ತು ಸಂಬಂಧಿಕರ ಮಗಳು ಮಾತ್ರ ಮನೆ­ಯಲ್ಲಿದ್ದರು. ಪೋಷಕರು ಹೊರಗೆ ಹೋಗಿದ್ದರು. ಈ ಸಂಗತಿ­ಯನ್ನು ತಿಳಿದ ಆತ ನಡುಮನೆಯಲ್ಲಿ ಕುಳಿತಿದ್ದ ಬಾಲಕಿಯೊಂದಿಗೆ ಅನುಚಿತ­ವಾಗಿ ವರ್ತಿಸಿದ್ದಾನೆ. ಆಕೆಯ ತುಟಿ­ಗ­ಳನ್ನು ಕಚ್ಚಿ, ಅತ್ಯಾಚಾರ ಎಸಗಲು ಯತ್ನಿ­ಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಗ ಬಾಲಕಿ ಸಹಾಯಕ್ಕಾಗಿ ಕೂಗಿ­ಕೊಂಡಿ­ದ್ದಾಳೆ. ಈ ವೇಳೆ ಕೊಠಡಿ­ಯ­ಲ್ಲಿದ್ದ ಆಕೆಯ ಅಕ್ಕ ಮತ್ತು ಸಂಬಂಧಿಕರ ಮಗಳು ಹೊರ ಬರುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ರಾತ್ರಿ 10 ಗಂಟೆಗೆ ಮನೆಗೆ ಬಂದ ಪೋಷಕರು ಮಕ್ಕಳಿಂದ ಘಟನೆಯ ಮಾಹಿತಿ ಪಡೆದು ಠಾಣೆಗೆ ದೂರು ನೀಡಿ­ದರು. ನಂತರ ಧನುಕೋಟಿಯನ್ನು ಬಂಧಿಸಲಾಯಿತು. ಆತನ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳಿಗೆ ರಕ್ಷಣೆ ಕಾಯ್ದೆ (ಪೋಕ್ಸೊ) ಹಾಗೂ ಅತ್ಯಾ­ಚಾರ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಷ ಕುಡಿದು ಆತ್ಮಹತ್ಯೆ
ಅರಕೆರೆಯಲ್ಲಿ ಮಂಗಳವಾರ ರಾತ್ರಿ ಸುರೇಶ್‌ (30) ಎಂಬುವರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೇಪಾಳ ಮೂಲದ­ ಅವರು ಪತ್ನಿ ಸುನಿತಾ ಜತೆ ಅರ­ಕೆರೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕಾರು ಚಾಲ­ಕ­ರಾಗಿದ್ದ ಸುರೇಶ್‌, ಮನೆಯಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಣಕಾಸಿನ ವಿಷಯವಾಗಿ ಪತಿ ಮತ್ತು ಅವರ ಸ್ನೇಹಿತರ ನಡುವೆ ರಾತ್ರಿ ಜಗಳವಾಯಿತು. ಆಗ ಪತಿಯ ಮೇಲೆ ಸ್ನೇಹಿ­ತರು ಹಲ್ಲೆ ನಡೆಸಿದರು. ಇದ­ರಿಂದ ಹೃದಯಾಘಾತ­ವಾಗಿ ಪತಿ ಸಾವ­ನ್ನಪ್ಪಿದರು ಎಂದು ಸುನಿತಾ ಹೇಳಿಕೆ ಕೊಟ್ಟಿ­ದ್ದರು. ಆ ಹೇಳಿಕೆ ಆಧ­ರಿಸಿ ಮೊದಲು ಕೊಲೆ ಪ್ರಕರಣ ದಾಖ­ಲಿ­ಸಿ­ಕೊಳ್ಳ­ಲಾಗಿತ್ತು. ನಂತರ ಹೇಳಿಕೆ ಬದ­ಲಿಸಿದ ಸುನಿತಾ, ಪತಿ ಆತ್ಮಹತ್ಯೆ ಮಾಡಿಕೊಂಡರೆಂದು ತಿಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ. ಘಟನೆ ಸಂಬಂಧ ಹುಳಿಮಾವು ಠಾಣೆ­ಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT