ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯವಿವಾಹ ಇಳಿಕೆ ಭಾರಿ ಮಂದಗತಿ

ಯುನಿಸೆಫ್‌ ಕಳವಳ
Last Updated 26 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ):  ಭಾರತದಲ್ಲಿ  ಕಳೆದ ದಶಕಗಳಿಂದ ಬಾಲ್ಯವಿವಾಹ ಪ್ರಕರಣಗಳು ಇಳಿಮುಖವಾಗಿದ್ದರೂ ಸಂಪೂರ್ಣ­­ವಾಗಿ ನಿರ್ಮೂಲನೆ­ಯಾ­ಗಲು  50 ವರ್ಷಗಳೇ ಬೇಕಾಗ­ಬಹುದು ಎಂದು ಯುನಿಸೆಫ್‌ ಹೇಳಿದೆ.

‘ಬಾಲ್ಯವಿವಾಹ ವರ್ಷಕ್ಕೆ ಶೇ ಒಂದ­ರಷ್ಟು ಇಳಿ­ಮುಖ­ವಾಗುತ್ತಿದೆ. ಆದರೆ ಇಷ್ಟು ಮಂದಗತಿಯಲ್ಲಿ ಸಾಗಿದರೆ ಬಾಲ್ಯ­ವಿವಾಹ ಸಂಪೂರ್ಣ ನಿರ್ಮೂ­ಲನೆಗೆ ಇನ್ನೂ 50 ವರ್ಷಗಳೇ ಬೇಕು. ಅಷ್ಟು ಹೊತ್ತಿಗೆ ಕೋಟ್ಯಂತರ ಹೆಣ್ಣು­ಮಕ್ಕಳ ಮದುವೆ ಎಳೆಪ್ರಾಯದಲ್ಲೇ ನಡೆ­ದಿರುತ್ತದೆ’ ಎಂದು ಭಾರತದಲ್ಲಿನ ಯುನಿ­ಸೆಫ್‌ ಮಕ್ಕಳ ರಕ್ಷಣಾ ತಜ್ಞೆ ಡೋರಾ ಗಿಸ್ಟಿ ಎಚ್ಚರಿಸಿದ್ದಾರೆ.

ಇಪ್ಪತ್ತರಿಂದ 24 ವರ್ಷದೊಳಗಿನ ವಿವಾ­ಹಿತ ಮಹಿಳೆ­ಯ­ರೊಂದಿಗೆ ನಡೆ­ಸಿದ ಅಧ್ಯ­ಯನ­ದಲ್ಲಿ ಅವರಲ್ಲಿ ಶೇ 43 ಮಂದಿ 18 ವರ್ಷಕ್ಕೂ ಮೊದಲೇ ಅಂದರೆ ಎಳೆ­ವಯಸ್ಸಿ­ನಲ್ಲೇ ಮದುವೆ­ಯಾಗಿರುವುದು ತಿಳಿದುಬಂದಿದೆ ಎಂದು ಡೋರಾ ತಿಳಿಸಿ­ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT