ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಸ್ಟನ್‌: ಭಯ ಹುಟ್ಟಿಸಿದ ಚೀಲಗಳು

Last Updated 16 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬಾಸ್ಟನ್‌(ಅಮೆರಿಕ)(ಪಿಟಿಐ): ಸುಪ್ರ­ಸಿದ್ಧ ಬಾಸ್ಟನ್‌ ಮ್ಯಾರ­ಥಾನ್‌ ಅಂತಿಮ ರೇಖೆಯ ಬಳಿ ಪತ್ತೆ­ಯಾದ ಎರಡು ಅಪ­ರಿಚಿತ ಬೆನ್ನು­ಚೀಲ­ಗಳು (ಬ್ಯಾಕ್‌­ಪ್ಯಾಕ್‌)  ಬಾಂಬ್‌ ಸ್ಫೋಟದ ಭಯ ಹುಟ್ಟಿ­­ಸಿ­­­ದ್ದ­ರಿಂದ ಜನರು ಆ ಪ್ರದೇಶ­ದಿಂದ ಓಡಿ­ಹೋದ ಘಟನೆ ಬುಧವಾರ ನಡೆದಿದೆ.
ಕೆಲಕಾಲ ಆತಂಕಕ್ಕೆ ಕಾರಣ­ವಾದ ಈ ಘಟನೆ ಸರಿಯಾಗಿ ಒಂದು ವರ್ಷದ ಹಿಂದೆ ಇಲ್ಲಿ ಘಟಿಸಿದ್ದ ಭಯೋ­ತ್ಪಾದಕ ದಾಳಿಯನ್ನು ನೆನಪಿಸಿತು.

‘ಈ ಸಂಬಂಧ ಒಬ್ಬ ವ್ಯಕ್ತಿಯನ್ನು ಬಂಧಿ­­ಸ­­ಲಾಗಿದ್ದು, ಮುನ್ನೆಚ್ಚರಿಕಾ ಕ್ರಮ­ವಾಗಿ ಬಾಯ್ಲ್‌ಸ್ಟೋನ್‌ ಬೀದಿಯಲ್ಲಿ ಪತ್ತೆ­­ಯಾದ ಬೆನ್ನುಚೀಲಗಳನ್ನು ವಶಪ­ಡಿಸಿ­­­­ಕೊಳ್ಳ­­ಲಾ­ಗಿದೆ’ ಎಂದು ಬಾಸ್ಟನ್‌ ಪೊಲೀ­ಸರು ತಿಳಿಸಿದ್ದಾರೆ. ಚೀಲವನ್ನು ತಂದ ವ್ಯಕ್ತಿ ಬರಿ­ಗಾಲಿ­­­ನಲ್ಲಿದ್ದ. ದೊಡ್ಡ ಕಪ್ಪು ಮುಖ­ಪರ­ದೆ­­­­­­ಯನ್ನು ಧರಿಸಿದ್ದ. ಮತ್ತು ‘ಬಾಸ್ಟನ್‌ ಸ್ಟ್ರಾಂಗ್‌’ ಎಂದು ಕಿರು­ಚು­ತ್ತಿದ್ದ. 25 ವರ್ಷ ವಯಸ್ಸಿನ ಅವನನ್ನು ಕಯ್ವೊನ್‌ ಎಡ್ಸನ್‌ ಎಂದು ಗುರುತಿ­ಸ­ಲಾ­ಗಿದೆ. ಎಂದು ಸಿಬಿಎಸ್‌ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT