ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹ್ಯಾಕಾಶಕ್ಕೆ ಬರ್ಗರ್‌, ಚಿಪ್ಸ್‌

Last Updated 20 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಲಂಡನ್ ಮೂಲದ ಕಂಪೆನಿ­ಯೊಂದು ತಾನು ಉತ್ಪಾದಿ­ಸಿದ ಬರ್ಗರ್ ಮತ್ತು ಚಿಪ್ಸ್‌­ಗಳನ್ನು ಬಾಹ್ಯಾಕಾಶಕ್ಎಕ ಕಳುಹಿಸಿದೆ. ಇದೇ ಮೊದಲ ಬಾರಿ ಬಾಹ್ಯಾಕಾಶಕ್ಕೆ ಬರ್ಗರ್‌ ಮತ್ತು ಚಿಪ್ಸ್‌ ಕಳುಹಿಸಲಾಗಿದೆ ಎಂದು ಕಂಪೆನಿ ಹೇಳಿದೆ.

ದೊಡ್ಡ ಮನೆಯ ಗಾತ್ರದ ಹೀಲಿಯಂ ಬೆಲೂನ್‌­ನಲ್ಲಿ ಇರಿಸಿ ಬರ್ಗರ್‌ ಮತ್ತು ಚಿಪ್ಸ್‌ಗಳನ್ನು ಭೂಮಿ­ಯಿಂದ 1.12 ಲಕ್ಷ ಅಡಿ ಎತ್ತರಕ್ಕೆ ಕಳುಹಿಸ­ಲಾ­ಗಿದೆ. ಕಂಪೆನಿ ಇದಕ್ಕೆ ಸುಮಾರು 2 ಲಕ್ಷ ಖರ್ಚು ಮಾಡಿದೆ.

‘ಚೋಸನ್‌ ಬನ್‌’ ಎಂಬ ಹೆಸರಿನ ಕಂಪೆನಿಯ ಸ್ಥಾಪಕರಾದ ಶೋವೆಲ್‌ ಮತ್ತು ಪೀಟರ್‌ ಶರ್ಮನ್‌ ಇಬ್ಬರಿಗೂ ವಿಜ್ಞಾನದಲ್ಲಿ ಬಹಳ ಆಸಕ್ತಿ. ಆಗಸ್ಟ್‌­ನ­ಲ್ಲಿಯೂ ಬಾಹ್ಯಾಕಾಶಕ್ಕೆ ಬರ್ಗರ್‌ ಕಳುಹಿಸಲು ಇವರು ಯತ್ನಿಸಿದ್ದರು. ಆದರೆ ಆ ಯತ್ನ ವಿಫಲವಾಗಿತ್ತು.

ಬಾಲಕಿ ಪತ್ತೆಗೆ ಫೇಸ್‌ಬುಕ್‌
ಶಾರ್ಜಾ (ಐಎಎನ್‌ಎಸ್‌): ಶಾರ್ಜಾದಲ್ಲಿ ನಾಪತ್ತೆ­ಯಾದ ಭಾರತ ಮೂಲದ ಎಂಟು ವರ್ಷದ ಬಾಲಕಿ­ಯನ್ನು ಸಾಮಾಜಿಕ ಜಾಲತಾಣಗಳು  ಹುಡುಕಿ­ಕೊಟ್ಟ ಕಥೆಯಿದು. ಶಾರ್ಜಾದ ಅಲ್‌ ಮುಸಲ್ಲಾ ಪ್ರದೇಶದಲ್ಲಿ ಮೂರನೇ ತರಗತಿ ಓದುತ್ತಿರುವ 8 ವರ್ಷದ ಬಾಲಕಿ ಶನಿವಾರ ಮನೆಯಿಂದ ನಾಪತ್ತೆಯಾಗಿದ್ದಳು. ಆ ಸಮಯದಲ್ಲಿ ಬಾಲಕಿಯ ತಾಯಿ ಸಂಜೆ ಪಾಳಿಯ ಕೆಲಸಕ್ಕೆ ತೆರಳಿದ್ದರೆ, ತಂದೆ ಒಂದು ವರ್ಷದ ಮಗುವಿ­ನೊಂದಿಗೆ ನಿದ್ರಿಸುತ್ತಿದ್ದರು.

ಮನೆಯಿಂದ ಹೊರಗೆ ಬಂದಿದ್ದ ಬಾಲಕಿ, ಅದೇ ಪ್ರದೇಶದ ಜೋಯ್ ಆಲು­ಕ್ಕಾಸ್‌ ಚಿನ್ನದ ಅಂಗಡಿ ಬಳಿ ಓಡಾಡುತ್ತಿದ್ದಳು. ಇದನ್ನು ಗಮನಿಸಿದ ಸಾರ್ವ­ಜನಿ­ಕರು ಫೇಸ್‌ಬುಕ್, ವಾಟ್ಸ್ಆ್ಯಪ್‌ ಮೂಲಕ ಬಾಲಕಿಯ ಚಿತ್ರಗಳನ್ನು ರವಾನಿಸಿದ್ದರು. ಇದನ್ನು ಗಮ­ನಿಸಿದ ಬಾಲಕಿಯ ತಂದೆ ಕೂಡಲೇ ಬಾಲಕಿಯನ್ನು ಪತ್ತೆ ಮಾಡಿ ಮನೆಗೆ ಕರೆದೊಯ್ದರು. ತಮ್ಮ ಮಗಳ ಬಗ್ಗೆ ಮಾಹಿತಿ ನೀಡಿದ ಜನರಿಗೆ ಅವರು ಧನ್ಯವಾದ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT