ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿ ಡಿಪೊದಲ್ಲಿ ರೂ 2.29 ಲಕ್ಷ ಕಳವು

Last Updated 20 ಅಕ್ಟೋಬರ್ 2014, 19:47 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಗೇರಿಯಲ್ಲಿರುವ ಬಿಎಂ­ಟಿಸಿ 12ನೇ ಡಿಪೊ ಕಚೇರಿ­ಯಲ್ಲಿ ದುಷ್ಕರ್ಮಿ­ಗಳು ಭಾನುವಾರ ರಾತ್ರಿ ರೂ2.29 ಲಕ್ಷ ಕಳವು ಮಾಡಿದ್ದಾರೆ.

ಡಿಪೊ ವ್ಯವಸ್ಥಾಪಕ ರವೀಂದ್ರ ಅವರು ನಿರ್ವಾಹಕರು ಕೊಟ್ಟಿದ್ದ ಪ್ರಯಾಣಿಕ­ರಿಂದ ಸಂಗ್ರಹವಾದ ರೂ3.57 ಲಕ್ಷವನ್ನು ಸೂಟ್‌ಕೇಸ್‌ನಲ್ಲಿ ಹಾಕಿ, ಕಟ್ಟಡದ ಲೆಕ್ಕ­ಪತ್ರ ವಿಭಾಗದ ಕೊಠಡಿಯಲ್ಲಿಟ್ಟು ಮನೆಗೆ ಹೋಗಿದ್ದರು.

ರಾತ್ರಿ ಆ ಕೊಠಡಿಯ ಬೀಗ ತೆರೆದು ಒಳ ನುಗ್ಗಿರುವ ಕಳ್ಳರು ಸೂಟ್‌ಕೇಸ್‌­ನಲ್ಲಿದ್ದ ಹಣದಲ್ಲಿ ರೂ 2.29 ಲಕ್ಷ ದೋಚಿ ಪರಾರಿಯಾಗಿದ್ದಾರೆ. ಉಳಿದ ಹಣ ಸೂಟ್‌­­ಕೇಸ್‌ನಲ್ಲೇ ಇದೆ. ರವೀಂದ್ರ ಅವರು ಸೋಮವಾರ ಕಚೇರಿಗೆ ಬಂದಾಗ ಹಣ ಕಳವಾಗಿರುವುದು ಗೊತ್ತಾ­­ಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳ್ಳರು ಕೊಠಡಿ ಅಥವಾ ಸೂಟ್‌­ಕೇಸ್‌ನ ಬೀಗವನ್ನು ಒಡೆದಿಲ್ಲ. ಬದಲಿಗೆ ಕೀಯಿಂದ ಬೀಗ ತೆರೆದು ಹಣ ದೋಚಿ­ದ್ದಾರೆ. ಡಿಪೊ ಸಿಬ್ಬಂದಿಯೇ ಈ ಕೃತ್ಯ ಎಸಗಿರುವ ಶಂಕೆ ಇದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT