ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಮರೆಯಿತೇ?

Last Updated 26 ಮೇ 2015, 19:30 IST
ಅಕ್ಷರ ಗಾತ್ರ

ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ತಮ್ಮ ಪಕ್ಷ, ಕಾಂಗ್ರೆಸ್ ಬಿಟ್ಟು ಹೋದ ಹೊಲಸನ್ನು ತೊಳೆಯುತ್ತಿದೆ (ಪ್ರ.ವಾ., ಮೇ 25) ಎಂದಿದ್ದಾರೆ. ಈ ಹೊಲಸಿಗೆ ಕಾಂಗ್ರೆಸ್ ಮಾತ್ರ ಕಾರಣವೇ?  ಐದೂವರೆ ದಶಕಗಳ ಆಡಳಿತ ಅವಧಿಯಲ್ಲಿ ಆ ಪಕ್ಷ ಏನನ್ನೂ ಸಾಧಿಸಲಿಲ್ಲವೇ?

ಬಿಜೆಪಿ ಆಳ್ವಿಕೆ ಇರುವ ಗುಜರಾತ್, ಮಧ್ಯಪ್ರದೇಶ, ಛತ್ತೀಸಗಡ, ಗೋವಾ ರಾಜ್ಯಗಳು ಸ್ವರ್ಗವಾಗಿವೆಯೇ? ಈಗ ವಿಶ್ವವೇ ಭಾರತದ ಕಡೆ ನೋಡುತ್ತಿದೆ ಎನ್ನುವ ನಾಯಕಮಣಿಗಳಿಗೆ, ದೇಶ ನಾನಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ಇರುವುದಕ್ಕೆ ಮೋದಿಯವರ ಒಂದು ವರ್ಷದ ಸಾಧನೆ ಮಾತ್ರ ಕಾರಣವೇ?

ಬಿಜೆಪಿ ಅಧ್ಯಕ್ಷರಾಗಿದ್ದಾಗ ಲಂಚ ಪಡೆದು ಸಿಕ್ಕಿಬಿದ್ದಿದ್ದ ಬಂಗಾರು ಲಕ್ಷ್ಮಣ್, ಅಕ್ರಮ ಗಣಿ ಹಗರಣದಲ್ಲಿ ಜೈಲು ಸೇರಿದ್ದ ಜನಾರ್ದನ ರೆಡ್ಡಿ,  ಅನಂತಕುಮಾರ್‌ ಭಾಗಿಯಾಗಿದ್ದಾರೆ ಎನ್ನಲಾದ ‘ಹುಡ್ಕೊ’ ಹಗರಣ ಇವೆಲ್ಲ  ಇವರಿಗೆ ಕಾಣುತ್ತಿಲ್ಲವೇ? ಹಾಗಿದ್ದರೆ, ಅಕ್ರಮ ಗಳಿಕೆ ಆರೋಪದಿಂದ ಮುಕ್ತವಾಗುವ ಮೊದಲೇ ಜಯಲಲಿತಾ ಅವರ ಸ್ನೇಹಕ್ಕೆ ಈ ನಾಯಕರು ಹಾತೊರೆದದ್ದು ಏಕೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT